Loksabha Elections 2024: ಮೊದಲ ಹಂತದ ಮತದಾನ; ರಜನಿ, ಅಜಿತ್, ಧನುಷ್ ಹಕ್ಕು ಚಲಾವಣೆ

2024ರ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 19) ಆರಂಭವಾಗಿದೆ. 102 ಲೋಕಸಭಾ ಕ್ಷೇತ್ರಗಳಲ್ಲಿ 1625 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ನಿರ್ಧಾರ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಇಂದು ಮತದಾನ ಶುರುವಾಗಿದ್ದು ಸಿನಿಮಾ ತಾರೆಯರು ಹಕ್ಕು ಚಲಾವಣೆ ಮಾಡಿದ್ದಾರೆ.

ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಉತ್ತರಕಾಂಡ ಸೇರಿದಂತೆ ಒಟ್ಟು 21 ರಾಜ್ಯಗಳಲ್ಲಿ ಮತದಾನ ಶುರುವಾಗಿದೆ. ತಮಿಳುನಾಡಿನ ಎಲ್ಲಾ 39 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಥಲಾ ಅಜಿತ್, ಕಮಲ್ ಹಾಸನ್, ಧನುಷ್ ಸೇರಿದಂತೆ ತಮಿಳಿನ ಸ್ಟಾರ್ ನಟರೆಲ್ಲಾ ಬೆಳಗ್ಗೆ ಬಂದು ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.

LokSabha Elections 2024 Rajnikanth Ajith dhanush cast their votes

ನಟ ಹಾಗೂ ಮಕ್ಕಳ್ ನೀದಿಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಚೆನ್ನೈನ ಕೊಯಾಂಬೆಡುವಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜು ಮತಗಟ್ಟೆಯಲ್ಲಿ ರಜನಿಕಾಂತ್ ಸರತಿ ಸಾಲಿನಲ್ಲಿ ನಿಂತು ವೋಟ್ ಹಾಕಿದರು. ಇನ್ನು ಸೂಪರ್ ಸ್ಟಾರ್ ನೋಡಲು ಜನ ಮುಗಿಬಿದ್ದ ಕಾರಣ ತಳ್ಳಾಟ ಉಂಟಾಯಿತು.

ಮತ ಚಲಾಯಿಸಿದ ಬಳಿಕ ರಜನಿಕಾಂತ್ ಕೈ ಬೆರಳಿಗೆ ಹಾಕಿದ್ದ ಶಾಕಿ ಗುರುತನ್ನು ತೋರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಎಲ್ಲರೂ ಮತ ಚಲಾಯಿಸಬೇಕು ಎಂದು ಆಗ್ರಹಿಸಿದರು. "ನಾವು ಮತ ಚಲಾಯಿಸಿದೆವು ಎಂದು ಹೇಳುವುದರಲ್ಲಿ ಮರ್ಯಾದೆ, ಗೌರವ ಇರುತ್ತದೆ. ಮತ ಚಲಾಯಿಸಿಲ್ಲ ಎನ್ನುವುದರಲ್ಲಿ ಮರ್ಯಾದೆ, ಗೌರವ ಇಲ್ಲ. ಹಾಗಾಗಿ ಎಲ್ಲರೂ ತಪ್ಪದೇ ಮತ ಚಲಾಯಿಸಿ" ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಇಂದು(ಏಪ್ರಿಲ್ 19) ಲೋಕಸಭೆ ಚುನಾವಣೆ ಮತದಾನದಲ್ಲಿ ಹಕ್ಕು ಚಲಾಯಿಸಿದ ಮೊದಲ ಸೆಲೆಬ್ರೆಟಿ ಅಜಿತ್. ಬೆಳ್ಳಂಬೆಳಗ್ಗೆ 6.45ಕ್ಕೆ ತಿರುವನ್ಮಿಯೂರ್‌ನ ಮತಗಟ್ಟೆಯಲ್ಲಿ ನಟ ಅಜಿತ್ ವೋಟ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಸಂಗೀತ ನಿರ್ದೇಶಕ ಇಳಯರಾಜ, ನಟರಾದ ಶರತ್ ಕುಮಾರ್, ವಿಜಯ್ ಸೇತುಪತಿ, ಶಿವ ಕಾರ್ತಿಕೇಯನ್, ನಟಿಯರಾದ ರಾಧಿಕಾ ಶರತ್ ಕುಮಾರ್, ತ್ರಿಶಾ ಕೂಡ ಚೆನ್ನೈನಲ್ಲಿ ಮತದಾನ ಮಾಡಿದ್ದಾರೆ.

ದಳಪತಿ ವಿಜಯ್ ಇತ್ತೀಚೆಗೆ ಪ್ರಾದೇಶಿಕ ಪಕ್ಷ ಘೋಷಣೆ ಮಾಡಿದ್ದರು. 'ತಮಿಳಗ ವೆಟ್ರಿ ಕಳಗಂ' ಎಂದು ಪಕ್ಷಕ್ಕೆ ಹೆಸರಿಟ್ಟಿದ್ದಾರೆ. 'ಗೋಟ್' ಸಿನಿಮಾ ಚಿತ್ರೀಕರಣಕ್ಕಾಗಿ ರಷ್ಯಾದಲ್ಲಿದ್ದ ವಿಜಯ್ ಶೂಟಿಂಗ್ ನಿಲ್ಲಿಸಿ ಚೆನ್ನೈಗೆ ಬಂದು ಮತ ಚಲಾಯಿಸಿದರು. ಈ ವೇಳೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುತ್ತಿಕೊಂಡರು.

ಮತ್ತೊಬ್ಬ ತಮಿಳು ನಟ ವಿಶಾಲ್ ಕೂಡ ತಮ್ಮ ಹಕ್ಕು ಚಲಾಯಿಸಿದರು. ಕಾರ್ ಬಿಟ್ಟು ಸೈಕಲ್ ಏರಿ ಬಂದು ಅವರು ಅವರು ವೋಟ್ ಮಾಡಿದ್ದು ವಿಶೇಷ. ಏಕಾಂಗಿಯಾಗಿ ವಿಶಾಲ್ ಸೈಕಲ್ ಏರಿ ಮತಗಟ್ಟಿಗೆ ಬಂದಿರುವ ವಿಡಿಯೋ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ, ರಾಜಸ್ಥಾನದ 25 ಕ್ಷೇತ್ರಗಳ ಪೈಕಿ 12, ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ 6 ಕ್ಷೇತ್ರಕ್ಕೆ, ಉತ್ತರಾಖಂಡದ ಎಲ್ಲಾ 5 ಕ್ಷೇತ್ರಗಳಲ್ಲಿ, ಮಹಾರಾಷ್ಟ್ರದಲ್ಲಿ 48 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ, ಅಸ್ಸಾಂ 14 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ, ಬಿಹಾರ ರಾಜ್ಯದ‌ಲ್ಲಿ ಒಟ್ಟು 40 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

More from Filmibeat

English summary
Tamil celebs Cast their votes in Lok Sabha Elections 2024 from Tamil Nadu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X