'ಮದ ಗಜ ರಾಜ' ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ? ತಮಿಳು ನಟ ವಿಶಾಲ್ ಕೈ ನಡುಗಿದ್ದು ಗಿಮಿಕ್ಕಾ?

ಈ ತಿಂಗಳು ಸಿಕ್ಕಾಪಟ್ಟೆ ಸುದ್ದಿಯಾದವರಲ್ಲಿ ತಮಿಳು ನಟ ವಿಶಾಲ್ ಕೂಡ ಒಬ್ಬರು. 12 ವರ್ಷಗಳ ಬಳಿಕ ರಿಲೀಸ್ ಆಗುತ್ತಿರುವ ತಮ್ಮ ಸಿನಿಮಾ 'ಮದ ಗಜ ರಾಜ' ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಭಾಗಿಯಾಗಿದ್ದರು. ಆ ವೇಳೆ ಮೈ ಹಿಡಿದು ಮಾತಾಡುವುದಕ್ಕೂ ಪರದಾಡಿದ್ದ ನಟನ ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.

'ಮದ ಗಜ ರಾಜ' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳೂ ಬಾಕಿ ಉಳಿದಿರುವಾಗ ವಿಶಾಲ್ ಆರೋಗ್ಯ ಚರ್ಚೆ ಆಯ್ತು. ಕೆಲವರು ವಿಶಾಲ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದರು. ಇನ್ನು ಕೆಲವರು ವಿಶಾಲ್ ಅವರನ್ನು ಟೀಕಿಸಿದ್ದರು. ನಟನ ಹವ್ಯಾಸಗಳ ಬಗ್ಗೆ ಮಾತಾಡಿದರು. ಮತ್ತೆ ಕೆಲವರು ಸಿನಿಮಾವೊಂದರಲ್ಲಿ ವಿಶಾಲ್ ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಜರಿದಿದ್ದರು.

Madhagajaraja got impressive Day 1 box office collection did Vishal gimmick for his film

ಇವೆಲ್ಲದರ ಮಧ್ಯೆ ವಿಶಾಲ್ ಬಗ್ಗೆ ಜನರು ಕನಿಕರ ತೋರಿಸಿದ್ದೂ ಇದೆ. ತೆಗಳಿದವರಿಗೆ, ಟೀಕೆ ಮಾಡಿದವರಿಗೆ ನೆಟ್ಟಿಗರೇ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ವಿಶಾಲ್ ಜೊತೆ ಜೊತೆಗೆ 'ಮದ ಗಜ ರಾಜ' ಕೂಡ ಚರ್ಚೆಗೆ ಬಂದಿತ್ತು. ಇದೇ ಹೈಪ್‌ನಲ್ಲಿಯೇ ನಿನ್ನೆ (ಜನವರಿ 12) ರಿಲೀಸ್ ಆಗಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಈಗ ಇದೇ ಸೋಶಿಯಲ್ ಮೀಡಿಯಾದಲ್ಲಿ ವಿಶಾಲ್ ಸಿನಿಮಾಗಾಗಿ ಗಿಮಿಕ್ ಮಾಡಿದರೇ ಅಂತ ತಲೆ ಕೆರೆದುಕೊಳ್ಳುತ್ತಿದ್ದಾರೆ.

ತಮಿಳು ನಟ ವಿಶಾಲ್ ಗಿಮಿಕ್ ಮಾಡಿದ್ರಾ? ಇಲ್ವಾ? ನಿಜಕ್ಕೂ ಆರೋಗ್ಯ ಸರಿಯಿರಲಿಲ್ವಾ? ಅದೆಕ್ಕೆಲ್ಲ ಆಮೇಲೆ ಬರೋಣ. ಈಗ 'ಮದ ಗಜ ರಾಜ' ಸಿನಿಮಾ ಮೊದಲ ದಿನ ಗಳಿಸಿದ ಕಲೆಕ್ಷನ್ ಎಷ್ಟು? ಅಂತ ನೋಡುವುದಾದರೇ.

Madhagajaraja got impressive Day 1 box office collection did Vishal gimmick for his film

ವಿಶಾಲ್ ಸಿನಿಮಾ 'ಮದ ಗಜ ರಾಜ' 2013ರ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು. ಈ ಸಿನಿಮಾ ವಿಶಾಲ್, ವರಲಕ್ಷ್ಮಿ ಶರತ್‌ಕುಮಾರ್, ಅಂಜಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಖುಷ್ಬು ಪತಿ ಸುಂದರ್ ಸಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೇನು ಸಿನಿಮಾ ರಿಲೀಸ್ ಆಗಬೇಕು ಅನ್ನುವಷ್ಟರಲ್ಲಿ 'ಮದ ಗಜ ರಾಜ' ಕಾನೂನು ಹಾಗೂ ಆರ್ಥಿಕ ಸಂಕಷ್ಟಗಳನ್ನು ಎದುರಿಸಿತ್ತು. ಹೀಗಾಗಿ ಈ ಸಿನಿಮಾ ರಿಲೀಸ್‌ಗೆ 12 ವರ್ಷಗಳು ಕಾಯಬೇಕಾಯ್ತು.

ಸಾಮಾನ್ಯವಾಗಿ ಇಷ್ಟು ತಡವಾಗಿ ರಿಲೀಸ್ ಮಾಡಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿರುವ ಉದಾಹರಣೆಗಳು ತೀರಾ ವಿರಳ. ಅಂತಹದರಲ್ಲಿ 'ಮದ ಗಜ ರಾಜ' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗುಡುಗಿದೆ. ಫಸ್ಟ್ ಡೇ ಈ ಸಿನಿಮಾ ತಮಿಳುನಾಡಿನಲ್ಲಿ ಬರೋಬ್ಬರು 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತಮಿಳಿನ ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಂಚಿಕೊಂಡಿದ್ದಾರೆ. ಸಿನಿಪ್ರಿಯರು ಮರೆತೇ ಹೋಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ದೋಚಿದ್ದು ಸಿನಿಮಾ ಮಂದಿಗೆ ಅಚ್ಚರಿ ಮೂಡಿಸಿದೆ.

'ಮದ ಗಜ ರಾಜ' ಸಿನಿಮಾ ಪಾಸಿಟಿವ್ ರಿವ್ಯೂ ಸಿಕ್ಕಿದ್ದೇನೋ ನಿಜ. ಆದರೆ, ನಿರಂತರ ಸೋಲುಗಳನ್ನು ಕೊಟ್ಟು ಕಂಗಾಲಾಗಿದ್ದ ವಿಶಾಲ್ ಸಿನಿಮಾ ಈ ಮಟ್ಟಿಗೆ ಓಪನಿಂಗ್ ಸಿಕ್ಕಿದ್ದು ಹೇಗೆ ಅಂತ ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದಾರೆ. ಈ ಮಧ್ಯೆ ನೆಟ್ಟಿಗರು ವಿಶಾಲ್ ಸಿನಿಮಾ ರಿಲೀಸ್ ವೇಳೆ ಗಿಮಿಕ್ ಮಾಡಿದರೇ? ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ವಿಶಾಲ್ ಆರೋಗ್ಯದ ಬಗ್ಗೆ ಒಬ್ಬೊಬ್ಬರು ಒಂದೊಂದು ಮಾತಾಡಿದ್ದರು. ಕೆಲವರು ಡೆಂಘೀ ಅಂದಿದ್ದರು. ಇನ್ನು ಕೆಲವರು ತಿಂಗಳು ಗಟ್ಟಲೆ ವಿಶ್ರಾಂತಿ ಬೇಕು ಎಂದಿದ್ದರು.

ವೈರಲ್ ಫೀವರ್ ವೈದ್ಯರು ರೆಸ್ಟ್ ಹೇಳಿದ್ದಾರೆ ಅಂತಲೂ ಹೇಳಲಾಗಿತ್ತು. ಇವೆಲ್ಲದರ ಮಧ್ಯೆ ಸಿನಿಮಾ ರಿಲೀಸ್ ದಿನ (ಜನವರಿ 12) ವಿಶಾಲ್ ಫುಲ್ ಜೋಷ್‌ನಲ್ಲಿ ಪ್ರೇಕ್ಷಕರ ಮಧ್ಯೆ ಪ್ರತ್ಯಕ್ಷ ಆಗಿದ್ದರು. ಆಯಾಸ ಏನೂ ಇಲ್ಲದೆ ಆರಾಮಾಗಿ ಇದ್ದರು. ಅಲ್ಲದೆ ಪ್ರೀ ರಿಲೀಸ್ ಈವೆಂಟ್ ವೇಳೆ ಬಳಿಸಿದ್ದ ದಪ್ಪ ಕನ್ನಡಕ ಕೂಡ ಇರಲಿಲ್ಲ. ಇದನ್ನು ನೋಡಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ದಿಢೀರನೇ ಇವೆಲ್ಲ ಬದಲಾಗಲು ಹೇಗೆ ಸಾಧ್ಯ ಎನ್ನುತ್ತಿದ್ದಾರೆ. ಏನೇ ಇದ್ದರೂ ವಿಶಾಲ್ ಸಿನಿಮಾಗಂತೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

More from Filmibeat

English summary
Madhagajaraja got impressive Day 1 box office collection. Did Vishal gimmick for his film?;
Read more about: vishal box office kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X