ಕಮಲ್ ಹಾಸನ್ ಗೆ ವಿಲನ್ ಆದ ಮಲಯಾಳಂನ ಈ ಸ್ಟಾರ್ ನಟ
ಸಕಲಕಲಾವಲ್ಲಭ ಕಮಲ್ ಹಾಸನ್ 'ಇಂಡಿಯನ್-2' ಸಿನಿಮಾ ಚಿತ್ರೀಕರಣ ಮುಗಿಸುವುದರೊಳಗೆ ಮತ್ತೊಂದು ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಕಮಲ್ ಹಾಸನ್ ಅಭಿನಯದ ಮುಂದಿನ ಸಿನಿಮಾ 'ವಿಕ್ರಮ್' ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ.
ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ದಳಪತಿ ವಿಜಯ್ ಗೆ 'ಮಾಸ್ಟರ್' ಸಿನಿಮಾ ನಿರ್ದೇಶನ ಮಾಡಿದ್ದ ಕನಗನಾರ್ ಈ ಸಿನಿಮಾ ರಿಲೀಸ್ ಗೂ ಮೊದಲೇ ವಿಕ್ರಮ್ ಸಿನಿಮಾದಲ್ಲಿ ನಿರತಾಗಿದ್ದಾರೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದ್ದು, ಚಿತ್ರದಲ್ಲಿ ಕಮಲ್ ಹಾಸನ್ ಎದುರು ಮಲಯಾಳಂನ ಸ್ಟಾರ್ ನಟ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಹೌದು, ಕಮಲ್ ಹಾಸನ್ ಎದುರು ವಿಲನ್ ಆಗಿ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ವಿಭಿನ್ನ ಪಾತ್ರಗಳ ಮೂಲಕ ಚಿತ್ರಪ್ರೇಕ್ಷಕರ ಹೃದಯ ಗೆದ್ದಿರುವ ಫಹಾದ್ ಕಮಲ್ ಹಾಸನ್ ಎದುರು ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳ ಸಖತ್ ಥ್ರಿಲ್ ಆಗಿದ್ದಾರೆ. ಮಲಯಾಳಂನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಫಹಾದ್, ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ.

ಇದೀಗ ಕಮಲ್ ಹಾಸನ್ ಎದುರು ಕಾಣಿಸಿಕೊಳ್ಳುತ್ತಿರುವುದನ್ನು ನೋಡಲು ಅಭಿಮಾನಿಗಳ ಕಾತರರಾಗಿದ್ದಾರೆ. ಈ ಮೊದಲು ಫಹಾದ್ ವಿಲನ್ ಆಗಿ ನಟಿಸಿದ್ದರು. ತಾವೆ ನಿರ್ಮಿಸಿದ್ದ ಕುಂಬಳಗಿ ನೈಟ್ಸ್ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ನಯನತಾರಾ ಮತ್ತು ಶಿವಕಾರ್ತಿಕೇಯನ್ ನಟನೆಯ ವೆಲ್ಲೈಕ್ಕಾರನ್ ಸಿನಿಮಾದಲ್ಲೂ ಫಹಾದ್ ಖಳನಟನಾಗಿ ಬಣ್ಣಹಚ್ಚಿದ್ದರು.
ವಿಕ್ರಮ್ ಸಿನಿಮಾ ಕಮಲ್ ಹಾಸನ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಅಂದಹಾಗೆ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ 1986ರಲ್ಲಿ ರಿಲೀಸ್ ಆಗಿತ್ತು. ಸ್ವತಃ ಅವರೇ ಚಿತ್ರಕಥೆ ಬರೆದಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಇದೀಗ 34 ವರ್ಷಗಳ ಬಳಿಕ ಅದೇ ಟೈಟಲ್ ಬಳಸಿಕೊಂಡು ಸಿನಿಮಾ ಮಾಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.


Click it and Unblock the Notifications











