ಫ್ಯಾನ್ಸ್ ಏನೇನೊ ಅಂದುಕೊಂಡಿದ್ರು; 'ಥಗ್ ಲೈಫ್' ಸೋಲಿಗೆ ಕ್ಷಮೆ ಕೇಳಿದ ಮಣಿರತ್ನಂ

ಕಮಲ್ ಹಾಸನ್ ಹಾಗೂ ಸಿಂಬು ನಟನೆಯ 'ಥಗ್ ಲೈಫ್' ಸಿನಿಮಾ ಹೀನಾಯವಾಗಿ ಸೋಲುಂಡಿದೆ. 50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡುವಲ್ಲಿ ಕೂಡ ಸಿನಿಮಾ ವಿಫಲವಾಗಿದೆ. ಒಂದೇ ವಾರಕ್ಕೆ ಬಹುತೇಕ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿಯಾಗಿತ್ತು. ಇದೀಗ ಸಿನಿಮಾ ಸೋಲಿನ ಬಗ್ಗೆ ನಿರ್ದೇಶಕ ಮಣಿರತ್ನಂ ಮಾತನಾಡಿದ್ದಾರೆ.

ಈ ಹಿಂದೆ ಕಮಲ್ ಹಾಸನ್ ಹಾಗೂ ಮಣಿರತ್ನಂ ಕಾಂಬಿನೇಷನ್‌ನಲ್ಲಿ 'ನಾಯಗನ್' ಎಂಬ ಸಿನಿಮಾ ಬಂದು ಗೆದ್ದಿತ್ತು. 3 ದಶಕಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿ ಕೆಲಸ ಮಾಡುತ್ತಿದ್ದಾರೆ ಎಂದಾಗಲೇ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ ಅದನ್ನು ತಲುಪುವಲ್ಲಿ ಸಿನಿಮಾ ವಿಫಲವಾಗಿದೆ. ಸಿನಿಮಾ ನೋಡಿ ಬೇಸರಗೊಂಡಿರುವುದು ಮಾತ್ರವಲ್ಲ ಅಸಮಾಧಾನಗೊಂಡು ಟ್ರೋಲ್ ಮಾಡುತ್ತಿದ್ದಾರೆ.

Mani Ratnam Apologizes for Thug Life Failure Tamil Audience Slam Kamal Haasan Starrer

ತಮಿಳು ಪ್ರೇಕ್ಷಕರೇ 'ಥಗ್ ಲೈಫ್' ಸಿನಿಮಾ ಬಹಳ ಕೆಟ್ಟದಾಗಿಯೇ, ಸಿನಿಮಾ ನೋಡುವುದು ಸಮಯ ವ್ಯರ್ಥ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡದೇ ಇರವುದೇ ಒಳ್ಳೆಯದಾಗಿತು, ಈ ಸಿನಿಮಾ ನೋಡದೇ ಕನ್ನಡಿಗರು ಬಚಾವಾದರು ಎಂದು ಮಾಧ್ಯಮಗಳ ಮುಂದೆ ಕಾಮೆಂಟ್ ಮಾಡುವ ಮಟ್ಟಿಗೆ ಸಿನಿಮಾ ತಮಿಳು ಪ್ರೇಕ್ಷಕರನ್ನು ನಿರಾಸೆಗೊಳಿಸಿತ್ತು. ಶೀಘ್ರದಲ್ಲೇ ಸಿನಿಮಾ ಕರ್ನಾಟಕದಲ್ಲಿ ಕೂಡ ಬಿಡುಗಡೆ ಆಗುವ ಸಾಧ್ಯತೆಯಿದೆ.

ಒಂದ್ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಮಣಿರತ್ನಂ ಕಟ್ಟಿಕೊಟ್ಟಿದ್ದರು. ಇತ್ತೀಚಿನ ವರ್ಷಗಳ ಅವರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಗ್ಯಾಂಗ್‌ಸ್ಟರ್ ಡ್ರಾಮಾ 'ಥಗ್ ಲೈಫ್' ಕೂಡ ನಿರಾಸೆ ಮೂಡಿಸಿದೆ. ತ್ರಿಷಾ ಹಾಗೂ ಅಭಿರಾಮಿ ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಇನ್ನು ಸ್ವತಃ ಕಮಲ್ ಹಾಸನ್ ಹಾಗೂ ಮಣಿರತ್ನಂ ಸೇರಿ ಚಿತ್ರಕ್ಕೆ ಕಥೆ ಮಾಡಿದ್ದರು. ಅವರಿಬ್ಬರೇ ಹಣ ಹೂಡಿ ಸಿನಿಮಾ ನಿರ್ಮಾಣ ಮಾಡಿದ್ದರು.

148 ಕೋಟಿ ರೂ.ಗೆ 'ಥಗ್ ಲೈಫ್' ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. 8 ವಾರಗಳ ಬಳಿಕ ಸಿನಿಮಾ ಬಿಡುಗಡೆಗೆ ಓಟಿಟಿ ಸಂಸ್ಥೆ ಹಿಂದೇಟು ಹಾಕುತ್ತಿದ್ದು 30 ದಿನಗಳ ಬಳಿಕ ಸ್ಟ್ರೀಮಿಂಗ್ ಮಾಡುವ ಬಗ್ಗೆ ಚರ್ಚೆ ನಡೀತಿದೆ ಎನ್ನುವ ಊಹಾಪೋಹ ಶುರುವಾಗಿದೆ. ಇದೆಲ್ಲದರ ನಡುವೆ ಸಿನಿಮಾ ಸೋಲಿನ ಬಗ್ಗೆ ನಿರ್ದೇಶಕ ಮಣಿರತ್ನಂ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮಣಿರತ್ನಂ "ನಮ್ಮಿಬ್ಬರಿಂದ ಮತ್ತೊಂದು 'ನಾಯಗನ್‌' ನಿರೀಕ್ಷಿಸುತ್ತಿದ್ದವರಿಗೆ ನಾನು ಕ್ಷಮಿಸಿ ಎಂದು ಕೇಳುತ್ತಿದ್ದೇನೆ. ನಾವು ಇದನ್ನು ನಿರೀಕ್ಷಿರಲಿಲ್ಲ. ನಾವು ಸಂಪೂರ್ಣವಾಗಿ ವಿಭಿನ್ನವಾದ ಸಿನಿಮಾ ಮಾಡಲು ಬಯಸಿದ್ದೆವು. ಅತಿಯಾದ ನಿರೀಕ್ಷೆಗಿಂತ ಹೆಚ್ಚಿನ ನಿರೀಕ್ಷೆ ಇದಾಗಿತ್ತು ಎಂದು ನಾನು ಭಾವಿಸುತ್ತೇನೆ. ಪ್ರೇಕ್ಷಕರು ನಾವು ಅವರ ಮುಂದಿಟ್ಟದ್ದಕ್ಕಿಂತ ಬಹಳ ಭಿನ್ನವಾದದ್ದನ್ನು ನಿರೀಕ್ಷಿಸಿದರು" ಎಂದು ಹೇಳಿದ್ದಾರೆ.

ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ಮಾಡಿ ಸೋತಿರುವ ಮಣಿರತ್ನಂ ಮುಂದೆ ಒಂದು ರೊಮ್ಯಾಂಟಿಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಆ ಚಿತ್ರದಲ್ಲಿ ಕನ್ನಡ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

ಮಣಿರತ್ನಂ ಕ್ಷಮೆ ಕೇಳಿದರೂ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 'ಥಗ್ ಲೈಫ್' ಸಿನಿಮಾ ಕೆಟ್ಟ ಸಿನಿಮಾ ಎನ್ನುವುದಕ್ಕಿಂತ ವಿವಾಹೇತರ ಸಂಬಂಧವನ್ನು ಸರ್ವೇ ಸಾಧಾರಣ ಎಂದು ತೋರಿಸುವುದನ್ನು ಬಿಡಿ ಎಂದು ಕೆಲವರು ಕುಟುಕಿದ್ದಾರೆ. ಸಿನಿಮಾ ಬಿಡುಗಡೆ ಆಗಿದ್ದಾಗಲೇ ಇದೇ ಮಾತುಗಳು ಕೇಳಿಬಂದಿತ್ತು. ಸದ್ಯ ಕಮಲ್ ಹಾಸನ್ ಕೈಯಲ್ಲಿ ದೊಡ್ಡ ಸಿನಿಮಾಗಳಿಲ್ಲ. 'ಇಂಡಿಯನ್- 3' ಸಿನಿಮಾ ಬಿಡುಗಡೆ ಆಗಬೇಕಿದೆ. ಆದರೆ ಆ ಸಿನಿಮಾ ಬಗ್ಗೆ ಯಾರಿಗೂ ನಿರೀಕ್ಷೆ ಇಲ್ಲದಂತಾಗಿದೆ.

More from Filmibeat

English summary
Director Mani Ratnam apologized for the failure of 'Thug Life' starring Kamal Haasan and Simbu, after the film failed to impress audiences and was pulled from theatres in a week.
Read more about: kamal haasan mani ratnam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X