"ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ ಅಂದ್ಕೊಂಡಿದ್ದೆ": 'ಲಿಯೋ' ಖಳನಟನ ಹೇಳಿಕೆಗೆ ತ್ರಿಶಾ, ಲೋಕೇಶ್ ಗರಂ!
ತಮಿಳು ಚಿತ್ರರಂಗದ ವಿವಾದಾತ್ಮಕ ನಟ ಮನ್ಸೂರ್ ಅಲಿ ಖಾನ್ ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಈ ನಟನ ಹೇಳಿಕೆ ತ್ರಿಶಾ ಹಾಗೂ ನಿರ್ದೇಶಕ ಲೋಕೇಶ್ ಕನಗರಾಜ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೂಡ ತ್ರಿಶಾ ಬೆಂಬಲಕ್ಕೆ ನಿಂತಿದ್ದಾರೆ.
ಇತ್ತೀಚೆಗೆ ಲೋಕೇಶ್ ಕನಗರಾಜ್ ನಿರ್ದೇಶಿಸಿದ 'ಲಿಯೋ' ಸಿನಿಮಾದಲ್ಲಿ ದಳಪತಿ ವಿಜಯ್ ಹಾಗೂ ತ್ರಿಶಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇವರೊಂದಿಗೆ ಮನ್ಸೂರ್ ಅಲಿ ಖಾನ್ ಖಳನಟನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಗ್ಗೆ ಮಾತಾಡುವಾಗ "ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ. ಆಕೆನಾ ಎತ್ಕೊಂಡು ಬೆಡ್ ರೂಮ್‌ಗೆ ಹೋಗ್ತೀನಿ" ಎಂದುಕೊಂಡಿದ್ದೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದರು.

ಮನ್ಸೂರ್ ಅಲಿ ಖಾನ್ ಕೊಟ್ಟ ಈ ಹೇಳಿಕೆ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತ್ರಿಶಾ ಕೆಂಡಾಮಂಡಲ ಆಗಿದ್ದರು. ನೆಟ್ಟಗರು ತ್ರಿಶಾ ಬೆಂಬಲಕ್ಕೆ ಬಂದಿದ್ದರು. ಹಾಗೇ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ತ್ರಿಶಾಗೆ ಸಪೋರ್ಟ್ ಮಾಡಿದ್ದಾರೆ. ಇದೆಲ್ಲವನ್ನು ತಿಳಿಯುವುದಕ್ಕೂ ಮುನ್ನ ಮನ್ಸೂರ್ ಅಲಿ ಖಾನ್ ನಟಿ ತ್ರಿಶಾ ಬಗ್ಗೆ ಹೇಳಿದ್ದೇನು? ಅದ್ಯಾಕೆ ಇಷ್ಟೊಂದು ವಿವಾದಕ್ಕೆ ಸಿಕ್ಕಿಕೊಂಡಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ..
"ತ್ರಿಶಾ ಜೊತೆ ಬೆಡ್ ಸೀನ್ ಇರುತ್ತೆ ಅಂದ್ಕೊಂಡಿದ್ದೆ"
ಮನ್ಸೂರ್ ಅಲಿ ಖಾನ್ ತಮಿಳಿನ ಜನಪ್ರಿಯ ನಟ. ಹಾಗೇ ಉಲ್ಟಾ ಸೀದಾ ಹೇಳಿಕೆಗಳನ್ನು ಕೊಟ್ಟು ವಿವಾದಕ್ಕೂ ಸಿಕ್ಕಿಕೊಂಡಿದ್ದೂ ಇದೆ. ಈಗ 'ಲಿಯೋ' ಸಿನಿಮಾದಲ್ಲಿ ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ ಎಂದುಕೊಂಡಿದ್ದೆ ಎಂದು ಹೇಳಿಕೆ ಕೊಟ್ಟು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೆಟ್ಟಿಗರು ಈ ನಟನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ನಾನು ತ್ರಿಶಾ ಜೊತೆ ಆಕ್ಟ್ ಮಾಡುತ್ತಿದ್ದೇನೆ ಎಂದು ಗೊತ್ತಾದಾಗ, ಆ ಸಿನಿಮಾದಲ್ಲಿ ಬೆಡ್ ರೂಮ್ ಸೀನ್ ಇರುತ್ತೆ ಎಂದು ನಾನು ಭಾವಿಸಿದ್ದೆ. ನಾನು ಆಕೆಯನ್ನು ಎತ್ತಿಕೊಂಡು ಬೆಡ್ ರೂಮ್ ಒಳಗೆ ಹೋಗುತ್ತೇನೆ ಎಂದು ಭಾವಿಸಿದ್ದೆ. ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ನಟಿಯರನ್ನು ಎತ್ತಿಕೊಂಡು ಬೆಡ್ ರೂಮ್ ಒಳಗೆ ಹೋಗುವ ದೃಶ್ಯವಿತ್ತು. ನಾನು ಸಿಕ್ಕಪಟ್ಟೆ ರೇಪ್ ಸೀನ್‌ಗಳಲ್ಲಿ ನಟಿಸಿದ್ದೇನೆ. ಇದು ನನಗೆ ಹೊಸದೇನು ಆಗಿರಲಿಲ್ಲ. ಆದರೆ, ಇವರು ಕಾಶ್ಮೀರದಲ್ಲಿ ಶೂಟ್ ಮಾಡುವಾಗ ಆಕೆಯನ್ನು ತೋರಿಸಲಿಲ್ಲ." ಎಂದು ನಟ ಮನ್ಸೂರ್ ಅಲಿ ಖಾನ್ ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ಖಾರವಾಗಿ ಪ್ರತಿಕ್ರಿಯಿಸಿದ ತ್ರಿಶಾ
ಮನ್ಸೂರ್ ಅಲಿ ಖಾನ್ ಕಮೆಂಟ್ ವೈರಲ್ ಆಗುತ್ತಿದ್ದಂತೆ ನಟಿ ತ್ರಿಶಾ ಕಿಡಿಕಾರಿದ್ದರು. ಎಕ್ಸ್ (ಟ್ವಿಟರ್) ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದರು. "ಇತ್ತೀಚೆಗೆ ಮಿಸ್ಟರ್ ಮನ್ಸೂರು ಅಲಿ ಖಾನ್ ಅವರು ಒಂದು ವಿಡಿಯೋದಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿರುವುದು ಗಮನಕ್ಕೆ ಬಂತು. ನಾನು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಇದು ಅವರಲ್ಲಿರುವ ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ, ಕೆಟ್ಟ ಅಭಿರುಚಿಯನ್ನು ಸೂಚಿಸುತ್ತದೆ. ನಾನು ಇಂತಹ ವ್ಯಕ್ತಿಯೊಂದಿಗೆ ನಟಿಸದೇ ಇದ್ದಿದ್ದಕ್ಕೆ ಕೃತಜ್ಞನಾಗಿದ್ದೇನೆ. ಅವರು ಅದೆಷ್ಟೇ ಕೋರಿಕೊಂಡರೂ ನನ್ನ ವೃತ್ತಿ ಬದುಕಿನಲ್ಲಿ ಮತ್ತೆ ಅವರೊಂದಿಗೆ ನಟಿಸುವುದಿಲ್ಲ. ಇಂತಹವರು ಮನುಕುಲಕ್ಕೆ ಕೆಟ್ಟ ಹೆಸರು" ಎಂದು ತ್ರಿಶಾ ಕಿಡಿಕಾರಿದ್ದರು.
ಲೋಕೇಶ್ ಕನಗರಾಜ್ ಆಕ್ರೋಶ
ನಟಿ ಮನ್ಸೂರ್ ಅಲಿ ಖಾನ್ ವಿರುದ್ಧ ನಟಿ ತ್ರಿಶಾ ತಿರುಗಿ ಬೀಳುತ್ತಿದ್ದಂತೆ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಕಿಡಿಕಾರಿದ್ದಾರೆ. "ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದರಿಂದ ಶ್ರೀ ಮನ್ಸೂರ್ ಅಲಿ ಖಾನ್ ಮಾಡಿದ ಸ್ತ್ರೀದ್ವೇಷದ ಕಾಮೆಂಟ್‌ಗಳನ್ನು ಕೇಳಿ ಅಸಮಾಧಾನ ಮತ್ತು ಕೋಪ ಬಂದಿದೆ. ಮಹಿಳೆಯರು, ಸಹ ಕಲಾವಿದರು ಮತ್ತು ಈ ವೃತ್ತಿಯಲ್ಲಿರುವವರಿಗೆ ಗೌರವ ನೀಡುವುದರಲ್ಲಿ ಯಾವುದೇ ರಾಜಿ ಇಲ್ಲ. ನಾನು ಈ ನಡವಳಿಕೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ." ಎಂದು ನಿರ್ದೇಶಕ ಲೋಕೇಶ್ ಕನಗರಾಜ್ ಹೇಳಿದ್ದಾರೆ.
ತ್ರಿಶಾಗೆ ನೆಟ್ಟಿಗರಿಂದ ಬೆಂಬಲ
ಮನ್ಸೂರ್ ಅಲಿ ಖಾನ್ ಹೇಳಿಕೆಗೆ ನೆಟ್ಟಿಗರು ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ತ್ರಿಶಾಗೆ ಸಂಪೂರ್ಣ ಸಪೋರ್ಟ್ ನೀಡಿದ್ದಾರೆ. " ಲೋಕೇಶ್ ಕನಗರಾಜ್ ಬಾಂಡಿಂಗ್ ಮತ್ತು ಅವರ ಸಿನಿಮಾಗಳಲ್ಲಿ ಮನ್ಸೂರ್ ಅಲಿ ಖಾನ್‌ಗೆ ಅವಕಾಶ ಕೊಡುವುದು ಅಂತ್ಯ ಕಂಡಿದೆ." ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು " ನಾಯಿ ಯಾವಾಗಲೂ ಬೊಗಳುತ್ತಲೇ ಇರುತ್ತೆ. ತಲೆಕೆಡಿಸಿಕೊಳ್ಳದೆ ಮುಂದೆ ಸಾಗುತ್ತಲೇ ಇರಿ" ಎಂದು ಸಮಾಧಾನ ಮಾಡಿದ್ದಾರೆ. " ಈ ಹೇಳಿಕೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು" ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.


Click it and Unblock the Notifications











