"ಮನ್ಸೂರ್ ಹೇಳಿದ್ದು ತಪ್ಪು.. ಆದ್ರೆ ತಮನ್ನಾ ಬಗ್ಗೆ ರಜನಿಕಾಂತ್ ಹೇಳಿದ್ದು ಸರಿನಾ?" ನಟಿ ಫಾತಿಮಾ ಪ್ರಶ್ನೆ
ತಮಿಳು ಚಿತ್ರರಂಗದಲ್ಲಿ ನಟ ಮನ್ಸೂರ್ ಅಲಿ ಖಾನ್ ವಿವಾದ ದಿನದಿಂದ ದಿನಕ್ಕೆ ಚರ್ಚೆಯ ವಿಷಯವಾಗಿದೆ. ತ್ರಿಶಾ ಬಗ್ಗೆ ಕೊಟ್ಟ ಹೇಳಿಕೆ ವಿವಾದ ಸೃಷ್ಟಿಸಿದ್ದರಿಂದ ಪೊಲೀಸರು ನಟನನ್ನು ಕರೆದು ವಿಚಾರಣೆಯನ್ನೂ ಮಾಡಿದ್ದಾರೆ. ಇದೇ ವೇಳೆ ರಜನಿ ಜೊತೆ ನಟಿಸಿರೋ ತಮಿಳಿನ ಹಿರಿಯ ನಟಿ ಫಾತಿಮಾ ಬಾಬು ಸೂಪರ್‌ಸ್ಟಾರ್ ಬಗ್ಗೆ ಪ್ರಶ್ನೆ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾದಲ್ಲಿ ತಮನ್ನಾಗೆ ನಟಿಸುವಂತೆ ಕೇಳಿದ್ದಾರೆ. ಅದೇ ರೀತಿ ನಟಿ ತ್ರಿಶಾ ಜೊತೆ ನಟ ಮನ್ಸೂರ್ ಅಲಿ ಖಾನ್ ಇಂತಹದ್ದೇ ಸೀನ್ ಮಾಡುವಂತೆ ಹೇಳಿದ್ದಾರೆ. ಇದು ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ.

ಮನ್ಸೂರ್ ಅಲಿ ಖಾನ್ ಹಾಗೂ ತ್ರಿಶಾ ವಿವಾದಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಅನ್ನು ಎಳೆದು ತಂದಿದ್ದಕ್ಕೆ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಮನ್ಸೂರ್ ಅಲಿ ಖಾನ್ ವಿವಾದಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಅನ್ನು ಎಳೆದು ತಂದಿದ್ದಕ್ಕೆ ಫ್ಯಾನ್ಸ್ ಕೆಂಡಾಮಂಡಲವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಲಿಯೋ'ದಲ್ಲಿ ಖಳನಟನಾಗಿ ನಟಿಸಿದ್ದ ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ ಎಂದು ಕೊಂಡಿದ್ದೆ ಎಂಬ ವಿವಾದಾತ್ಮಕ ಹೇಳಿಕೊಟ್ಟಿದ್ದರು. ಈ ಹೇಳಿಕೆ ಸಂಬಂಧ ತ್ರಿಶಾ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ವಿರೋಧ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಇದೇ ವಿಚಾರವಾಗಿ ಮನ್ಸೂರ್ ಅಲಿ ಖಾನ್ ಪೊಲೀಸ್ ಠಾಣೆಗೆ ಹಾಜರಾಗಿದ್ದರು. "ತ್ರಿಶಾ ಬಗ್ಗೆ ವೈಯಕ್ತಿಕವಾಗಿ ಹೇಳಿಲ್ಲ. ಬದಲಾಗಿ ಸಿನಿಮೀಯ ರೀತಿಯಲ್ಲಿ ಮಾತನಾಡಿದ್ದೆ" ಎಂದು ಹೇಳಿಕೆ ಕೊಟ್ಟು ಬಂದಿದ್ದಾರೆ.
ಚಿತ್ರರಂಗದ ಗಣ್ಯರೆಲ್ಲರೂ ಮನ್ಸೂರ್ ಅಲಿ ಖಾನ್ ವಿರುದ್ಧ ತಿರುಗಿಬಿದ್ದಿದ್ದರೆ, ಇತ್ತ ಫಾತಿಮಾ ಬಾಬು ಈ ಪ್ರಕರಣಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಅನ್ನು ಎಳೆದು ತಂದು ಹೊಸ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮನ್ಸೂರ್ ಅಲಿ ಖಾನ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದರು.
"ಮನ್ಸೂರ್ ಅಲಿ ಖಾನ್ ಅಶ್ಲೀಲ ದೃಶ್ಯದ ಬಗ್ಗೆ ಕೇಳಿದ್ದು ತಪ್ಪಾಗಿದ್ದರೆ, 'ಜೈಲರ್' ಸಿನಿಮಾದ ಆಡಿಯೋ ಬಿಡುಗಡೆ ವೇಳೆ ರಜನಿಕಾಂತ್ ನಟಿ ತಮನ್ನಾ ಡ್ಯಾನ್ಸ್ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು ಅದು ತಪ್ಪೇ? ಆ ಬಗ್ಗೆ ಯಾಕೆ ಯಾರೂ ಪ್ರಶ್ನೆ ಮಾಡಿಲ್ಲ ?" ಎಂದು ಫಾತಿಮಾ ಬಾಬು ಪ್ರಶ್ನೆ ಮಾಡಿದ್ದಾರೆ. ಇದು ರಜನಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕೆರಳಿಸಿದೆ.
"ಬಹಿರಂಗವಾಗಿ ಅತ್ಯಾಚಾರದಂತಹ ದೃಶ್ಯಗಳ ಬಗ್ಗೆ ಹಾಸ್ಯವಾಗಿ ಮಾತಾಡುವುದಕ್ಕೂ, ಅಸಭ್ಯವಾಗಿ ಮಾತಾಡುವುದಕ್ಕೂ ವ್ಯತ್ಯಾಸವಿಲ್ಲವೇ?" ಎಂದು ರಜನಿಕಾಂತ್ ಅಭಿಮಾನಿಗಳು ಕಿಡಿಕಾಡುತ್ತಿದ್ದಾರೆ. ಅಂದ್ಹಾಗೆ ಫಾತಿಮಾ ಬಾಬು ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಕಾಲ' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು.
ರಜನಿಕಾಂತ್ ಆಡಿದ ಮಾತುಗಳ ಬಗ್ಗೆ ನಟಿ ತಮನ್ನಾ ಎಲ್ಲೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಾಗಿ, ರಜನಿ ಬಗ್ಗೆ ಒಳ್ಳೆ ಮಾತುಗಳನ್ನೇ ಆಡಿದ್ದಾರೆ. ಜೈಲರ್ ಪ್ರಚಾರದ ವೇಳೆ "ರಜನಿಕಾಂತ್ ಅಂತಹ ಹಂಬಲ್ ವ್ಯಕ್ತಿಯನ್ನು ನಾನು ಜೀವನದಲ್ಲೇ ಭೇಟಿ ಮಾಡಿಲ್ಲ" ಎಂದು ಹೇಳಿದ್ದರು. ಹೀಗಾಗಿ ಫಾತಿಮಾ ಬಾಬು ಹೇಳಿಕೆಗೂ ಫ್ಯಾನ್ಸ್ ಖಾರವಾಗಿ ಪ್ರತ್ರಿಕ್ರಿಯೆ ನೀಡುತ್ತಿದ್ದಾರೆ.


Click it and Unblock the Notifications











