ರಿಯಲ್ ಎಸ್ಟೇಟ್ ನಂಬಿ ಕೋಟಿಗಟ್ಟಲೆ ಹಣ ಕಳೆದುಕೊಂಡರೇ ನಯನತಾರಾ, ರಮ್ಯಾಕೃಷ್ಣ?

ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿಯೊಂದನ್ನು ನಂಬಿ ದೇಶದ ವಿವಿಧ ರಂಗಗಳ ಅನೇಕ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿ ದಕ್ಷಿಣ ಭಾರತದ ನಟಿಯರಾದ ನಯನತಾರಾ, ರಮ್ಯಾಕೃಷ್ಣ ಕೂಡ ಸೇರಿದ್ದು, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪತ್ನಿ ಅಂಜಲಿ ಕೂಡ ಕೋಟಿಗಟ್ಟಲೆ ಹಣ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.

Recommended Video

ಬೆಂಗಳೂರಿನಲ್ಲಿ ನೆಲಸಮವಾಯ್ತು 4 ಅಂತಸ್ತಿನ ಕಟ್ಟಡ | Filmibeat Kannada

ಕೋಟ್ಯಂತರ ರೂಪಾಯಿ ವಂಚನೆಯ ರಿಯಲ್ ಎಸ್ಟೇಟ್ ಹಗರಣದಲ್ಲಿ ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನ ಅನೇಕರು ಅಪಾರ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ. ದೇಶದಾದ್ಯಂತ ವಿವಿಧ ವಿವಿಐಪಿಗಳಿಗೆ ಅತ್ಯುತ್ತಮ ನೀರಿನ ಸೌಲಭ್ಯವಿರುವ ಹಲವಾರು ಎಕರೆ ಭೂಮಿಯನ್ನು ಈ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪೆನಿ ಮಾರಾಟ ಮಾಡಿದೆ. ಮುಂದೆ ಓದಿ.

ಅಪಾರ್ಟ್‌ಮೆಂಟ್ ನಿರ್ಮಾಣ

ಅಪಾರ್ಟ್‌ಮೆಂಟ್ ನಿರ್ಮಾಣ

ಕೋಟಿಗಟ್ಟಲೆ ಹಣ ಸುರಿದಿರುವ ಸೆಲೆಬ್ರಿಟಿಗಳು ಇಲ್ಲಿ ಬೃಹತ್ ಅಪಾರ್ಟ್‌ಮೆಂಟ್‌ಗಳು ಮತ್ತು ನಿರ್ಬಂಧಿತ ವಸತಿ ಸಮುಚ್ಚಯಗಳನ್ನು (ಗೇಟೆಡ್ ಕಮ್ಯುನಿಟಿ) ನಿರ್ಮಿಸಲು ಉದ್ದೇಶಿಸಿದ್ದರು. ಗೇಟೆಡ್ ಕಮ್ಯುನಿಟಿಯಲ್ಲಿ ಪಾದಚಾರಿಗಳು, ಬೈಸಿಕಲ್ ಮತ್ತು ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರುತ್ತದೆ. ಗೋಡೆ ಮತ್ತು ಬೇಲಿಗಳ ನಡುವೆ ವಸತಿ ಸಮುಚ್ಚಯ ನಿರ್ಮಿಸಲಾಗುತ್ತದೆ.

ಕೃಷಿ ಜಮೀನು ಅಕ್ರಮ ಮಾರಾಟ

ಕೃಷಿ ಜಮೀನು ಅಕ್ರಮ ಮಾರಾಟ

ಆದರೆ ರಿಯಲ್ ಎಸ್ಟೇಟ್ ಸಂಸ್ಥೆಯ ಪಾಲುದಾರರ ಜಗಳ, ಈ ಭೂಮಿಗಳ ಹಿಂದಿನ ಸತ್ಯ ಬಹಿರಂಗಪಡಿಸಿದೆ. ವಿವಿಐಪಿಗಳಿಗೆ ಮಾರಾಟ ಮಾಡಿರುವ ಈ ಭೂಮಿ ಕೃಷಿ ಜಮೀನುಗಳಾಗಿದ್ದು, ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎನ್ನುವುದು ಗೊತ್ತಾಗಿದೆ.

ಹತ್ತು ಕೋಟಿಗೆ ಮಾರಾಟ

ಹತ್ತು ಕೋಟಿಗೆ ಮಾರಾಟ

ಅಲ್ಲದೆ, ರಿಯಲ್ ಎಸ್ಟೇಟ್ ಕಂಪೆನಿಯು ಒಂದು ಎಕರೆಗೆ ಕೇವಲ ಒಂದು ಲಕ್ಷ ರೂ. ದರದಲ್ಲಿ ಈ ಭೂಮಿಗಳನ್ನು ಖರೀದಿ ಮಾಡಿದೆ. ಆದರೆ ವಿವಿಐಪಿಗಳಿಗೆ ಇದನ್ನು ಎಕರೆಗೆ ಹತ್ತು ಕೋಟಿ ರೂ. ಬೆಲೆಯಲ್ಲಿ ಮಾರಾಟ ಮಾಡಿದೆ ಎಂದು ಹೇಳಲಾಗಿದೆ.

ನೋಟಿಸ್ ನೀಡಿದ ಕಂದಾಯ ಇಲಾಖೆ

ನೋಟಿಸ್ ನೀಡಿದ ಕಂದಾಯ ಇಲಾಖೆ

ಈಗ ಕಂದಾಯ ಇಲಾಖೆಯು ಕೃಷಿ ಯೋಗ್ಯ ಭೂಮಿಯನ್ನು ವಾಣಿಜ್ಯ ಚಟುವಟಿಕೆಗಳ ಬಳಕೆಗೆ ಕಾನೂನು ಬಾಹಿರವಾಗಿ ಮಾರಾಟಮಾಡಿದ ಕಂಪೆನಿಗೆ ನೋಟಿಸ್ ಜಾರಿ ಮಾಡಿದೆ. ನಯನತಾರಾ, ರಮ್ಯಾಕೃಷ್ಣ ಮತ್ತು ಅಂಜಲಿ ತೆಂಡೂಲ್ಕರ್ ಸೇರಿದಂತೆ ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಸೆಲೆಬ್ರಿಟಿಗಳು ತಮ್ಮ ಹಣವನ್ನು ಮರಳಿ ಪಡೆಯಲಿದ್ದಾರೆಯೇ ಎನ್ನುವುದು ಈಗಿನ ಪ್ರಶ್ನೆ.

More from Filmibeat

English summary
Nayanthara, Ramya Krishan, Anjali Tendulkar and many other celebrities have lost crores of rupees in an illegal real estate scam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X