ಇದು ನಿಜನಾ? AI ಸೃಷ್ಟಿನಾ? ವೈಮನಸ್ಸು ಮರೆತ ನಯನತಾರಾ-ತ್ರಿಶಾ; ಇದು ದಶಕದ ಪುನರ್ಮಿಲನ
ಯಾವುದೇ ಚಿತ್ರರಂಗ ತೆಗೆದುಕೊಂಡರೂ ಅಲ್ಲಿ ವೈಮನಸ್ಸುಗಳು, ಕಾಂಪಿಟೇಷನ್ ಅನ್ನೋದು ಕಾಮನ್. ನಾಯಕರ ನಡುವೆ, ನಾಯಕಿಯರ ನಡುವೆ ಇಂತಹ ವೈಮನಸ್ಸುಗಳು ಕಾಮನ್. ಇದರಲ್ಲಿ ಕೆಲವು ಕೊನೆಯವರೆಗೂ ಮುಂದುವರೆಯುತ್ತವೆ. ಇನ್ನು ಕೆಲವು ಹಲವು ವರ್ಷಗಳ ಬಳಿಕ ದಿಢೀರನೇ ಸರಿ ಹೋಗುತ್ತೆ. ಅಂತಹದ್ದೇ ಒಂದು ವೈಮನಸ್ಸಿಗೆ ಕ್ಲಾರಿಟಿ ಸಿಕ್ಕಿದೆ. ಅದು ನಯನತಾರಾ ಹಾಗೂ ತ್ರಿಶಾ ನಡುವಿಗೆ ತೆರೆ ಹಿಂದಿನ ಕಿತ್ತಾಟ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಶಕಗಳಿಂದಲೂ ಇವರಿಬ್ಬರು ವೈಮನಸ್ಸಿನ ಬಗ್ಗೆ ಕಿತ್ತಾಟ ನಡೆಯುತ್ತಿತ್ತು. ಅದಕ್ಕೀಗ ಸ್ಪಷ್ಟತೆ ಸಿಕ್ಕಿದೆ. ಈ ಇಬ್ಬರು ಸ್ಟಾರ್ ನಟಿಯರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಇದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಅಚ್ಚರಿ ಎಂಬಂತೆ ಇಬ್ಬರೂ ಜೊತೆಯಾಗಿ ಪ್ರವಾಸ ಮಾಡುತ್ತಿದ್ದಾರೆ. ಅದರ ಫೋಟೊಗಳನ್ನು ಇಬ್ಬರೂ ಶೇರ್ ಮಾಡಿಕೊಂಡಿದ್ದಾರೆ. ಇದು ಇಬ್ಬರು ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗಕ್ಕೂ ಅಚ್ಚರಿ ಹುಟ್ಟಿಸಿದೆ.

ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಹಾಗೇ ಮತ್ತೊಬ್ಬ ಲೇಡಿ ಸೂಪರ್‌ಸ್ಟಾರ್ ತ್ರಿಶಾ ಒಟ್ಟಾಗಿ ಟೂರ್ ಹೊಡೆಯುತ್ತಿದ್ದಾರೆ. ಇಬ್ಬರೂ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಅಚಾನಕ್ ಆಗಿ ನಡೆದ ಈ ಇಬ್ಬರು ನಟಿಯರ ಪುನರ್ಮಿಲನ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಒಳಪಟ್ಟಿದೆ.
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ಸ್ಟಾರ್ ನಟಿ ತ್ರಿಶಾ ಇವರಿಬ್ಬರೂ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರೋ ಫೋಟೋಗಳು ಚಿತ್ರರಂಗದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟಾಕುವಂತೆ ಮಾಡಿವೆ. ಯಾಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಾ, ಸೂರ್ಯಾಸ್ತವನ್ನು ಎಂಜಾಯ್ ಮಾಡುತ್ತಿರುವುದು ಈ ಫೋಟೊಗಳನ್ನು ನೋಡಿದವರಿಗೆ ಗೊತ್ತಾಗಿದೆ. ಪ್ರೀತಿಯನ್ನು ಸೂಚಿಸುವ ಹಾಗೇ 'ಹಾರ್ಟ್' ಎಮೋಜಿಗಳೊಂದಿಗೆ ಈ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.
ನಯನತಾರಾ ಹಾಗೂ ತ್ರಿಶಾ ಇಬ್ಬರ ಫೋಟೋಗಳನ್ನು ನೋಡಿದ ನೆಟ್ಟಿಗರು "ಇದು ನಿಜನಾ?", "ಎಐ ಫೋಟೋಗಳು ಇರಬಹುದೇ?" ಎಂದು ಕಾಮೆಂಟ್ ಮಾಡಿದ್ದಾರೆ. ಇಬ್ಬರ ಫ್ಯಾನ್ಸ್‌ಗೆ ಈ ಬಗ್ಗೆ ಇನ್ನೂ ನಂಬಿಕೆನೇ ಬಂದಿಲ್ಲ. ಅಷ್ಟಕ್ಕೂ ಇಬ್ಬರ ನಡುವೆ ಏನು ನಡೆದಿದೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ, ಕೆಲವು ವರ್ಷಗಳ ಹಿಂದೇನೆ ಹೋಗಬೇಕು.
2008-2010ರ ವೇಳೆ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ತ್ರಿಶಾ ನಡುವೆ ವೈಮನಸ್ಸು ಹುಟ್ಟಿಕೊಂಡಿತ್ತು ಎಂದು ವರದಿಯಾಗಿದ್ದವು. ತಮಿಳು ಸಿನಿಮಾ 'ಕುರುವಿ'ಯ ಕಥೆಯ ವಿಚಾರಕ್ಕೆ ಇವರಿಬ್ಬರ ನಡುವೆ ಸಂಘರ್ಷ ಶುರುವಾಗಿತ್ತೆಂದು ಆ ವೇಳೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಬ್ಬಿತ್ತು. ಆದರೆ, ಆ ವೇಳೆ ತ್ರಿಶಾ ಈ ಗಾಳಿ ಸುದ್ದಿಗಳನ್ನು ನೇರವಾಗಿ ತಳ್ಳಿಹಾಕಿದ್ದರು.
ನಮ್ಮಿಬ್ಬರ ನಡುವೆ ಸಣ್ಣ ಪ್ರಮಾಣದ ವೈಯಕ್ತಿಕ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಇತ್ತೇ ಹೊರತು, ಪ್ರೊಫೆಷನಲ್ ಲೈಫ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ತ್ರಿಶಾ ಹೇಳಿದ್ದರು. ಹಾಗೇ ನಯನತಾರಾ ಕೂಡ ತಮ್ಮಿಬ್ಬರ ನಡುವಿನ ಅಂತರಕ್ಕೆ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಕಾರಣ ಎಂದಿದ್ದರು. ತ್ರಿಶಾ ಸ್ವತಃ ಅವರೇ ಮುಂದೆ ಬಂದು ಮಾತನಾಡಿಸಿದ್ದನ್ನು ನಯನತಾರಾ ಪ್ರಶಂಸೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಈಗ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರುವುದು ಈ ಹಿಂದಿನ ಮೈಮನಸ್ಸನ್ನು ತೊಡೆದು ಹಾಕಿದಂತಾಗಿದೆ.
ಇನ್ನು ನಯನತಾರಾ ಹಾಗೂ ತ್ರಿಶಾ ಇಬ್ಬರೂ ಎರಡು ದಶಕಗಳಿಗೂ ಅಧಿಕ ಕಾಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಸಿ, ಯಶಸ್ಸು ಗಳಿಸಿದ್ದಾರೆ. ಏಕಕಾಲದಲ್ಲಿ ಇಬ್ಬರೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರಿಂದ ಇಬ್ಬರಿಗೂ ಯಶಸ್ಸು ಸಿಕ್ಕಿದೆ. ಹೀಗಾಗಿ ಇಬ್ಬರಿಗೂ ಸ್ಟಾರ್ ಸ್ಥಾನಮಾನ ಸಿಕ್ಕಿದೆ.


Click it and Unblock the Notifications











