"ರಜನಿಯನ್ನು ಬಿಳಿ ಕೂದಲಿನಲ್ಲಿ ತೋರಿಸಬೇಡ" ಎಂದು ಜೈಲರ್ ನಿರ್ದೇಶಕನಿಗೆ ವಾರ್ನಿಂಗ್ ಕೊಟ್ಟಿದ್ದಿದ್ಯಾರು?

ಸೂಪರ್‌ಸ್ಟಾರ್ ರಜನಿಕಾಂತ್‌ಗೆ 2023 ಸಕ್ಸಸ್‌ಫುಲ್ ವರ್ಷ. ಸತತ ಸೋಲುಗಳಿಂದ ಕಂಗಟ್ಟಿದ್ದ ರಜನಿಕಾಂತ್‌ಗೆ 'ಜೈಲರ್' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಸಿಕ್ಕಿದೆ. ಇದರಿಂದ ರಜನಿಗೆ ಇನ್ನೊಂದಿಷ್ಟು ಸಿನಿಮಾ ಮಾಡುವ ಹುರುಪು ಬಂದಿದೆ ಅಂದರೆ ತಪ್ಪಾಗಲಿಕ್ಕಿಲ್ಲ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಿವೃತ್ತ 'ಜೈಲರ್' ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಮುತ್ತುವೇಲ್ ಪಾಂಡ್ಯನ್ ಅನ್ನೋ ಪಾತ್ರದಲ್ಲಿ ರಜನಿಯನ್ನು ನೋಡಿ ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ. ತಮ್ಮ ಸ್ಟೈಲ್‌ಗೆ, ಸ್ಪೀಡ್‌ಗೆ ವಯಸ್ಸು ಮುಖ್ಯ ಅಲ್ಲವೇ ಅಲ್ಲ ಅನ್ನೋದನ್ನು ಈ ಸಿನಿಮಾ ಮೂಲಕ ಸಾಬೀತು ಮಾಡಿದ್ದರು.

Nelson Dilipkumar Advised Against Rajinikanth grey hair in Jailer Movie

ರಜನಿ ಹಾಗೂ ನೆಲ್ಸನ್ ದಿಲೀಪ್‌ಕುಮಾರ್ ಕಾಂಬಿನೇಷನ್ ವರ್ಕ್‌ಔಟ್ ಆಗಿತ್ತು. ಸೂಪರ್‌ಸ್ಟಾರ್‌ಗೆ 'ಜೈಲರ್' ಸೂಪರ್ ಸಕ್ಸಸ್ ಕೊಟ್ಟಿತ್ತು. ಆದರೆ, ರಜನಿಕಾಂತ್‌ಗೆ ಸಿನಿಮಾ ಮಾಡುವಾಗ ನೆಲ್ಸನ್ ದಿಲೀಪ್‌ಕುಮಾರ್‌ಗೆ ಕೆಲವರು ವಾರ್ನಿಂಗ್ ಕೊಟ್ಟಿದ್ದರಂತೆ. ಬಿಳಿ ಕೂದಲಿನಲ್ಲಿ ರಜನಿಯನ್ನು ತೋರಿಸಬೇಡ ಎಂದು ಹೇಳಿದ್ದರು ಅನ್ನೋದನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ನೆಲ್ಸನ್ 'ಜೈಲರ್' ಸಿನಿಮಾವನ್ನು ಶುರು ಮಾಡಿದ್ದಾಗ, ಅವರಿಗೆ ರಜನಿ ಫ್ಯಾನ್ಸ್‌ನಿಂದ ಹಾಗೂ ಸೆಲೆಬ್ರಿಟಿಗಳಿಂದ ಕೆಲವು ಸಂದೇಶಗಳು ಬಂದಿದ್ದವಂತೆ. ಈ ಸಿನಿಮಾದಲ್ಲಿ ಅವರನ್ನು ಹೇಗೆ ತೋರಿಸಬೇಕು ಅಂತ ಆ ಸಂದೇಶದಲ್ಲಿ ತಿಳಿಸಲಾಗಿತ್ತು ಎಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.

ರಜನಿಕಾಂತ್ ಸಿನಿಮಾದಲ್ಲಿ ಅದೇನೆಸ ಪ್ರಯೋಗ ಮಾಡಿದರೂ, ಕೂದಲಿನ ವಿಚಾರವಾಗಿ ಇಂದಿಗೂ ಪ್ರಯೋಗಕ್ಕೆ ಮುಂದಾಗಿಲ್ಲ. ಈ ಹಿಂದೆ ಬಂದ ಎಲ್ಲಾ ಸಿನಿಮಾಗಳ ಹೇರ್ ಸ್ಟೈಲ್ ಒಂದೇ ರೀತಿಯಿದೆ. ಅಭಿಮಾನಿಗಳು ಕೂಡ ಅವರನ್ನು ಅದೇ ಗೆಟಪ್‌ನಲ್ಲಿ ನೋಡುವುದಕ್ಕೆ ಬಯಸುತ್ತಾರೆ. ಹೀಗಾಗಿ ನೆಲ್ಸನ್ ದಿಲೀಪ್‌ಕುಮಾರ್‌ಗೆ ರಜನಿಯನ್ನು ನಿವೃತ್ತ ಜೈಲರ್ ಆಗಿ ತೋರಿಸುವುದಕ್ಕೆ ದೊಡ್ಡ ಸವಾಲು ಎದುರಾಗಿತ್ತು.

Nelson Dilipkumar Advised Against Rajinikanth grey hair in Jailer Movie

ನೆಲ್ಸನ್ ಬರೆದಿರುವ ಕಥೆಯಲ್ಲಿ ರಜನಿಕಾಂತ್‌ರನ್ನು ನಿವೃತ್ತ ಜೈಲರ್ ಅಂತಯೇ ತೋರಿಸಬೇಕಿತ್ತು. ಆದರೆ, ಅಭಿಮಾನಿಗಳು ಬಿಳಿ ಕೂದಲಿನಲ್ಲಿ ರಜನಿಯನ್ನು ತೋರಿಸಬಾರದು ಎಂದು ವಾರ್ನಿಂಗ್ ಕೊಟ್ಟಿದ್ದರು. ಇದರಿಂದ ಏನಾದರೂ ತೊಂದರೆಯಾಗಬಹುದು ಎಂದು ನೆಲ್ಸನ್ ಭಯ ಪಟ್ಟಿದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅದೇನೆ ಟೀಕೆಗಳು ಬಂದರೂ ಪರ್ವಾಗಿಲ್ಲ. ರಜನಿಕಾಂತ್‌ರನ್ನು ಅವರ ಪಾತ್ರಕ್ಕೆ ತಕ್ಕಂತೆ ಬಿಳಿ ಕೂದಲಿನಲ್ಲೇ ತೋರಿಸಬೇಕು ಎಂದು ನಿರ್ಧರಿಸಿದ್ದರು. ಅಂದುಕೊಂಡಂತೆ ರಜನಿಯನ್ನು ಹೊಸ ಗೆಟಪ್‌ನಲ್ಲಿಯೇ ತೋರಿಸಲಾಗಿದೆ. ಒಂದಿಷ್ಟು ದಿನ ಸಿನಿಮಾದ ಶೂಟಿಂಗ್ ಮಾಡಿದ ಬಳಿಕ ನೆಲ್ಸನ್‌ಗೆ ನಂಬಿಕೆ ಬಂದಿದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ಜೈಲರ್' ಸಕ್ಸಸ್ ಬಳಿಕ ರಜನಿಕಾಂತ್ 'ಜೈ ಭೀಮ್' ನಿರ್ದೇಶಕರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಸಿನಿಮಾದ ಹೆಸರು ಇನ್ನು ಇಟ್ಟಿಲ್ಲ. ತಲೈವರ್ 170 ಅನ್ನೋ ಶೀರ್ಷಿಕೆಯಲ್ಲಿ ಸಿನಿಮಾ ನಡೆಯುತ್ತಿದೆ. ಇದರ ಹಿಂದೆನೇ ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರುವ 171ನೇ ಸಿನಿಮಾಗೂ ರಜನಿಕಾಂತ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Nelson Dilipkumar Advised Against Rajinikanth grey hair in Jailer Movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X