"ಬಾತ್‌ರೂಮ್‌ಗೆ ಹೋಗುವಾಗ ಧರಿಸುವ ಡ್ರೆಸ್‌ನಲ್ಲೇ ಬಂದಿದ್ದೀಯಲ್ಲ"; ಗರ್ಭಿಣಿ ಅಮಲಾ ಪೌಲ್‌ ಫುಲ್ ಟ್ರೋಲ್

'ಹೆಬ್ಬುಲಿ' ಸಿನಿಮಾದ ನಟಿ ಯಾರಿಗೆ ಗೊತ್ತಿಲ್ಲ ಹೇಳಿ? ಅಮಲಾ ಪೌಲ್ ಕನ್ನಡದಲ್ಲಿ ನಟಿಸಿದ್ದು ಒಂದೇ ಒಂದು ಸಿನಿಮಾ ಆಗಿದ್ದರೂ ಕನ್ನಡಿಗರಿಗೆ ಚಿರಪರಿಚಿತ. ಕಿಚ್ಚ ಸುದೀಪ್ ಜೊತೆ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದ ನಟಿ ಸಿನಿಪ್ರಿಯರ ಅಚ್ಚು ಮೆಚ್ಚಿನ ನಟಿ. ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅಮಲಾ ಪೌಲ್ ಬದುಕು ನಿಜಕ್ಕೂ ಇಂಟ್ರೆಸ್ಟಿಂಗ್. ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ವಿವಾದಗಳೇನು ಕಮ್ಮಿಯಿಲ್ಲ. ಆದರೂ, ಅದ್ಯಾವುದಕ್ಕೂ ಧೃತಿಗೆಡದೆ ಬದುಕಿನಲ್ಲಿ ಮುನ್ನುಗ್ಗುತ್ತಿದ್ದಾರೆ. ನಟಿ ಅಮಲಾ ಪೌಲ್‌ರದ್ದು ಡೋಂಟ್‌ ಕೇರ್ ಸ್ವಭಾವ. ಯಾರು ಏನೇ ಹೇಳಿದರೂ ಅದನ್ನು ಧಿಕ್ಕರಿಸಿ ನಿಂತು ಬಿಡುತ್ತಾರೆ.

Netizens are criticising pregnant actress Amala Paul for her dressing sense in Aadujeevitham

ಇತ್ತೀಚೆಗೆ ಅಮಲಾ ಪೌಲ್ ಮತ್ತೊಮ್ಮೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗರ್ಭಿಣಿಯಾಗಿರುವ ನಟಿ ಇತ್ತೀಚೆಗೆ ನಡೆದ 'ಆಡುಜೀವಿತಂ' ಸಿನಿಮಾದ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ನೀಲಿ ಬಣ್ಣದ ಸ್ಲೀವ್‌ಲೆಸ್‌ ಡ್ರೆಸ್‌ ತೊಟ್ಟು ಬಂದಿದ್ದರು. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಆ ಕಾರ್ಯಕ್ರಮದ ಬಳಿಕ ನೆಟ್ಟಿಗರ ಕಣ್ಣು ಕೆಂಪಾಗಿದ್ದು ಯಾಕೆ? ತಿಳಿಯುವುದಕ್ಕೂ ಮುನ್ನ ಅಮಲಾ ಪೌಲ್ ವೈವಾಹಿಕ ಬದುಕಿನ ಬಗ್ಗೆ ತಿಳಿಯೋಣ.

'ಹೆಬ್ಬುಲಿ' ನಟಿ ಅಮಲಾ ಪೌಲ್ ಮೊದಲು ತಮಿಳಿನ ನಿರ್ದೇಶಕ ಎ ಎಲ್ ವಿಜಯ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಇಬ್ಬರ ನಡುವೆ ಹೊಂದಾಣಿಕೆಯಾಗದೆ ಬೇರೆಯಾಗಿದ್ದರು. ಮೊದಲ ಮದುವೆ ಮುರಿದು ಬಿದ್ದ ಬಳಿಕ ಅಮಲಾ ಪೌಲ್ ಹೆಸರು ಪಂಜಾಬಿ ಗಾಯಕನೊಂದಿಗೆ ಕೇಳಿ ಬಂದಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದೂ ಕೂಡ ಮುರಿದು ಬಿದ್ದಿತ್ತು.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಮಲಾ ಪೌಲ್ ಬಹುದಿನದ ಗೆಳೆಯ ಜಗತ್ ದೇಸಾಯಿ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೇವಲ ಒಂದು ತಿಂಗಳ ಅಂತರದಲ್ಲಿ ತಮ್ಮ ಅಭಿಮಾನಿಗಳಿಗೆ ಗರ್ಭಿಣಿ ಅಂತ ಅನೌನ್ಸ್ ಮಾಡಿದ್ದರು. ಸದ್ಯ ಅಮಲಾ ಪೌಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯಾದ ಬಳಿಕ ಅಮಲಾ ಪೌಲ್ ಆಗಾಗ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

Netizens are criticising pregnant actress Amala Paul for her dressing sense in Aadujeevitham

ಅಮಲಾ ಪೌಲ್ ಸಾಮಾನ್ಯವಾಗಿ ಮಾಡರ್ನ್ ಡ್ರೆಸ್‌ ಅನ್ನು ಧರಿಸುತ್ತಾರೆ. ಕೆಲವು ಅವರ ಧರಿಸುವ ಡ್ರೆಸ್‌ನಿಂದಲೇ ಟೀಕೆಗೆ ಗುರಿಯಾಗಿದ್ದು ಇದೆ. ಇತ್ತೀಚೆಗೆ ನಟಿ ಅಮಲಾ ಪೌಲ್ ತಮ್ಮ ಸಿನಿಮಾ ಆಡುಜೀವಿತಂ ಪ್ರೆಸ್‌ಮೀಟ್‌ಗೆ ಬಂದಿದ್ದರು. ಈ ವೇಳೆ ಕಡುನೀಲಿ ಬಣ್ಣದ ಸ್ಲೀವ್‌ಲೆಸ್ ಡ್ರೆಸ್‌ ಹಾಗೂ ಸ್ನೀಕರ್ ಅನ್ನು ಧರಿಸಿ ಬಂದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಣ್ಣುಗಳು ಕೆಂಪಾಗುತ್ತಿವೆ.

"ಇದೆಂಥಾ ಡ್ರೆಸ್.. ಬೆಡ್‌ನಿಂದ ಎದ್ದ ಕೂಡಲೇ ಬಾತ್‌ರೂಮ್‌ಗೆ ಹಾಕಿಕೊಂಡು ಹೋಗುವ ಡ್ರೆಸ್" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ನಟಿಯರ ವಿರುದ್ಧ ಕಿಡಿಕಾರಿದ್ದಾರೆ. "ನಾನು ಅಮಲಾ ಪೌಲ್ ದೊಡ್ಡ ಅಭಿಮಾನಿಯಾಗಿದ್ದೆ. ಈಗ ಅಭಿಮಾನಿಯಲ್ಲ" ಎಂದು ಮತ್ತೊಬ್ಬರು ಹೇಳಿದ್ದಾರೆ. ನೆಗೆಟಿವ್ ಕಮೆಂಟ್‌ಗಳು ಬರುತ್ತಿದ್ದಂತೆ ಮತ್ತೆ ಕೆಲವು ಮಂದಿ ಅಮಲಾ ಪೌಲ್ ಬೆಂಬಲಕ್ಕೆ ಬಂದಿದ್ದಾರೆ.

More from Filmibeat

English summary
Pregnant actress Amala Paul was criticised for her dressing sense:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X