Mahalakshmi-Ravindar: ಹಣದ ಮುಂದೆ ಬೇರೆನೂ ಬೇಕಿಲ್ಲ.. ರವೀಂದರ್ ಪ್ರೀತಿಯಲ್ಲಿ ಮಹಾಲಕ್ಷ್ಮಿ ಬಿದ್ದಿದ್ದೇ ಈ ಕಾರಣಕ್ಕೆ!
ಸಿನಿಮಾ ತಾರೆಯರು ಸದಾ ಸೋಶಿಯಲ್ ಮೀಡಿಯಾ ಕಣ್ಣಲ್ಲಿ ಬೀಳುತ್ತಲೇ ಇರುತ್ತಾರೆ. ಅದರಲ್ಲೂ ಇವರ ಮದುವೆ, ಸಂಸಾರದ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇರುತ್ತೆ. ಕಳೆದ ಒಂದು ವರ್ಷದಿಂದ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆ ವಿಷಯ ಅತಿಯಾಗಿ ಚರ್ಚೆಯಾಗುತ್ತಿದೆ.
ಕಳೆದ ವರ್ಷ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗೆ ಮೊದಲ ವಿವಾಹ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪತ್ನಿ ಮಹಾಲಕ್ಷ್ಮಿಗಾಗಿ ರವೀಂದರ್ ಪತ್ರ ಬರೆದು ಉಡುಗೊರೆಯಾಗಿ ನೀಡಿದ್ದರು. ಈ ಜೋಡಿ ವಿವಾಹವಾದಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗುತ್ತಲೇ ಇದ್ದಾರೆ.

ಕೆಲವೇ ದಿನಗಳ ಹಿಂದಷ್ಟೇ ರವೀಂದರ್ ಉದ್ಯಮಿಯೊಬ್ಬರಿಗೆ ವಂಚನೆ ಮಾಡಿದ ಆರೋಪದ ಮೇರೆಗೆ ಬಂಧನಕ್ಕೆ ಒಳಗಾಗಿದ್ದಾರೆ. ಈ ಬೆನ್ನಲ್ಲೇ ಮಹಾಲಕ್ಷ್ಮಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರೋ ಚರ್ಚೆ ಏನು? ತಿಳಿಯಲು ಮುಂದೆ ಓದಿ.
ಇಬ್ಬರಿಗೂ ಎರಡನೇ ಮದುವೆ
ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಕೆಲವು ತಮಿಳು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಆದರೆ, ಸಿನಿಮಾಗಿಂತ ಹೆಚ್ಚಾಗಿ ಬಿಗ್‌ಬಾಸ್‌ನಿಂದ ಫೇಮಸ್ ಆದರು. ಬಳಿಕ ಫ್ಯಾಟ್‌ಮ್ಯಾನ್ ಅನ್ನೋ ಯೂಟ್ಯೂನ್ ಚಾನೆಲ್ ಅನ್ನು ಆರಂಭಿಸಿದ್ದರು. ಇತ್ತ ಮಹಾಲಕ್ಷ್ಮಿ ಕೂಡ ತಮಿಳು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಅದ್ಯಾವಾಗ ಮಹಾಲಕ್ಷ್ಮಿ ನಿರ್ಮಾಪಕ ರವೀಂದರ್ ಅನ್ನು ವಿವಾಹವಾದರೋ ಅಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದ್ದಾರೆ.

ಮಹಾಲಕ್ಷ್ಮಿ ಮೇಲಿನ ಆರೋಪವೇನು?
ರವೀಂದರ್ ಚಂದ್ರಶೇಖರನ್ ಅವರನ್ನು ಕೈ ಹಿಡಿದ ಕ್ಷಣದಿಂದ ಮಹಾಲಕ್ಷ್ಮಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ರವೀಂದ್ರ ಬಳಿ ಇರುವ ಕೋಟಿ ಕೋಟಿ ಹಣವನ್ನು ನೋಡಿನೇ ಮಹಾಲಕ್ಷ್ಮಿ ಮದುವೆ ಆಗಿದ್ದಾರೆಂದು ಆರೋಪ ಮಾಡಿದ್ದೂ ಇದೆ. ಆದರೆ, ಈ ಜೋಡಿ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ಕಳೆದ ಒಂದು ವರ್ಷದಿಂದ ಇವರ ಜೀವನ ಆರಾಮಾಗಿಯೇ ಇದೆ.
ಹಣಕ್ಕಾಗಿಯೇ ಮದುವೆ ಆದ್ರಾ?
ಕೆಲವೇ ದಿನಗಳ ಹಿಂದಷ್ಟೇ ರವೀಂದರ್ ಚಂದ್ರಶೇಖರನ್ ಅನ್ನು ಉದ್ಯಮಿಯೊಬ್ಬರಿಗೆ ವಂಚನೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಬೆಳವಣಿಗೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಮಹಾಲಕ್ಷ್ಮಿ ಬಗ್ಗೆ ಮತ್ತೆ ಚರ್ಚೆ ಮಾಡುತ್ತಿದ್ದಾರೆ. ರವೀಂದರ್ ಮಾಡಿರುವ ಹಣವನ್ನು ಕಂಡು ಮಹಾಲಕ್ಷ್ಮಿ ಕಣ್ಣುಗಳು ಹಳದಿಯಾಗಿವೆ. ಅದನ್ನು ನೋಡಿಯೇ ಮಹಾಲಕ್ಷ್ಮಿ ಪ್ರೀತಿಯ ನಾಟಕವಾಗಿ ಮದುವೆ ಆಗಿದ್ದಾರೆಂದು ಚರ್ಚೆ ಶುರುವಾಗಿದೆ.
ಏನಂತಿದ್ದಾರೆ ನೆಟ್ಟಿಗರು?
"ರವೀಂದ್ರ ಬಂಧನದಿಂದ ಮಹಾಲಕ್ಷ್ಮಿ ಹಾಗೂ ಅವರು ಕುಟುಂಬ ಕಂಗಾಲಾಗಿದ್ದಾರೆ. ಅಲ್ಲದೆ ರವೀಂದರ್ ಪ್ರೀತಿಯ ಬಲೆಗೆ ಬೀಳುವಂತೆ ಮಾಡಿದ್ರು ಅಂತ ಮಹಾಲಕ್ಷ್ಮಿ ತನ್ನ ಸ್ನೇಹಿತರೊಂದಿಗೆ ಹೇಳಿಕೊಂಡು ಓಡಾಡುತ್ತಿದ್ದಾರೆ" ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಮೊದಲ ವಿವಾಹ ವಾರ್ಷಿಕೋತ್ಸವದಂದು ರವೀಂದ್ರ ಪತ್ನಿ ಮಹಾಲಕ್ಷ್ಮಿಗೆ ಬರೆದ ಪತ್ರದ ಬಗ್ಗೆನೂ ಚರ್ಚೆ ಮಾಡುತ್ತಿದ್ದಾರೆ.


Click it and Unblock the Notifications











