Beast Movie: ವಿಜಯ್ ಸಿನಿಮಾ 'ಬೀಸ್ಟ್'ಗೂ 'ಮನಿ ಹೈಸ್ಟ್' ವೆಬ್ ಸಿರೀಸ್‌ಗೂ ಇರುವ ಸಾಮ್ಯತೆಯೇನು? ನೆಟ್ಟಿಗರ ವಾದವೇನು?
ದಳಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ಸಿನಿಮಾ 'ಬೀಸ್ಟ್' ಬಿಡುಗಡೆ ಸಜ್ಜಾಗಿ ನಿಂತಿದೆ. ಯುಗಾದಿ ಹಬ್ಬದಂದೆ ಸಿನಿಮಾ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ. ಏಪ್ರಿಲ್ 13 ರಂದು 'ಕೆಜಿಎಫ್ 2' ಬಿಡುಗಡೆಗೂ ಒಂದು ದಿನ ಮುನ್ನವೇ ರಿಲೀಸ್ ಆಗುತ್ತಿರುವ ಈ ಸಿನಿಮಾ ನೋಡಲು ದಳಪತಿ ವಿಜಯ್ ಫ್ಯಾನ್ಸ್ ಕಾತುರರಾಗಿದ್ದಾರೆ.
ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ 'ಬೀಸ್ಟ್' ಚಿತ್ರತಂಡ ಬೇಜಾನ್ ಪ್ರಚಾರ ಶುರು ಮಾಡಿದೆ. 'ಬೀಸ್ಟ್' ಟ್ರೈಲರ್ ನೋಡಿದ ಬಳಿಕ ಇದು ಆಕ್ಷನ್ ಥ್ರಿಲ್ಲರ್ ಎಂಬುದು ಕನ್ಫರ್ಮ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಅಭಿಮಾನಿಗಳು ಕೂಡ ಟ್ರೈಲರ್ ನೋಡಿ ಥ್ರಿಲ್ ಆಗಿದ್ದಾರೆ.
'ಬೀಸ್ಟ್' ಟ್ರೈಲರ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿದ್ದರೆ, ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಫೇಮಸ್ ವೆಬ್ ಸೀರಿಸ್ ಅನ್ನು ಕಾಪಿ ಮಾಡಿದೆ ಎಂದು ಹೇಳುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನ 'ಮನಿ ಹೈಸ್ಟ್' ಹಾಗೂ 'ಬೀಸ್ಟ್' ನಡುವೆ ಸಾಮ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಇವೆರಡರ ನಡುವೆ ಇರುವ ಸಾಮ್ಯತೆ ಏನು? ಎಂದು ತಿಳಿಯಲು ಮುಂದೆ ಓದಿ.

'ಮನಿ ಹೈಸ್ಟ್' ಕಥೆ ಕದ್ದಿದೆಯಾ ಬೀಸ್ಟ್?
'ಬೀಸ್ಟ್' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವುದಕ್ಕೆ ಶುರುಮಾಡಿದ್ದಾರೆ. ನೆಟ್‌ಫ್ಲಿಕ್ಸ್‌ನ ಜನಪ್ರಿಯ ವೆಬ್ ಸಿರೀಸ್ 'ಮನಿ ಹೈಸ್ಟ್' ಜೊತೆ ಹೋಲಿಕೆ ಮಾಡುತ್ತಿದ್ದಾರೆ. 'ಮನಿ ಹೈಸ್ಟ್'ನ ಕೆಲವು ಪಾತ್ರಗಳೊಂದಿಗೆ, ಸನ್ನಿವೇಶಗಳೊಂದಿಗೆ ಹೋಲಿಕೆ ಮಾಡಲು ಶುರುಮಾಡಿದ್ದಾರೆ. ಈ ಕಾರಣಕ್ಕೆ 'ಬೀಸ್ಟ್' ಸಿನಿಮಾ ಕಥೆಯನ್ನು ಕಾಪಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

'ಬೀಸ್ಟ್'- 'ಮನಿ ಹೈಸ್ಟ್' ನಡುವೆ ಸಾಮ್ಯತೆ
'ಬೀಸ್ಟ್' ಸಿನಿಮಾದ ಟ್ರೈಲರ್ ನೋಡಿದ ಬಳಿಕ 'ಮನಿ ಹೈಸ್ಟ್' ವೆಬ್ ಸಿರೀಸ್‌ಗೆ ಸಾಮ್ಯತೆ ಇದೆ ಎನ್ನಲಾಗಿದೆ. ನೆಟ್ಟಿಗರು ವಿಜಯ್ ಪಾತ್ರವನ್ನು 'ಮನಿ ಹೈಸ್ಟ್' ಸಿರೀಸ್‌ನ ಗಾಂಡಿಯಾ ಪಾತ್ರದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಸಿರೀಸ್‌ನಲ್ಲಿ ಅಪಹರಣಕ್ಕೊಳಗಾದವರನ್ನು ಬಿಡುಗಡೆಗೊಳಿಸಲು ಆರ್ಮಿಯ ಅಧಿಕಾರಿಗಳನ್ನು ಕಳಿಸುವ ಪಾತ್ರವದು. 'ಬೀಸ್ಟ್' ಟ್ರೈಲರ್‌ನಲ್ಲೂ ಮಾಲ್‌ನಲ್ಲಿ ಬಂಧಿಯಾಗಿರುವವರನ್ನು ಬಿಡಿಸಲು ಬರುವ ಅಧಿಕಾರಿಯಾಗಿ ವಿಜಯ್ ಕಾಣಿಸಿಕೊಂಡಿದ್ದಾರೆ. 'ಮನಿ ಹೈಸ್ಟ್' ಹಾಗೂ 'ಬೀಸ್ಟ್' ಎರಡರ ಕಥೆ ಕೂಡ ರಾಬರಿ ಹಿನ್ನೆಲೆ ಮೇಲೆ ನಿಂತಿದೆ ಎಂದು ಹೇಳುತ್ತಿದ್ದಾರೆ.

ಬ್ರೇಕಿಂಗ್ ಬ್ಯಾಡ್ ಜೊತೆ ಹೋಲಿಕೆ
'ಬೀಸ್ಟ್ ಟ್ರೈಲರ್‌ನಲ್ಲಿ ವಿಜಯ್ ಕ್ಯಾರೆಕ್ಟರ್ ಅನ್ನು ಮತ್ತೊಂದು ಜನಪ್ರಿಯ ವೆಬ್ ಸಿರೀಸ್ ಜೊತೆನೂ ಹೋಲಿಕೆ ಮಾಡಲಾಗುತ್ತಿದೆ. 'ಬ್ರೇಕಿಂಗ್ ಬ್ಯಾಡ್' ಸಿರೀಸ್‌ನ ವಾಲ್ಟರ್ ವೈಟ್ ಕ್ಯಾರೆಕ್ಟರ್‌ಗೆ ವಿಜಯ್ ಪಾತ್ರವನ್ನು ಹೋಲಿಸುತ್ತಿದ್ದಾರೆ. ಈ ಕಾರಣಕ್ಕೆ ನೆಟ್ಟಿಗರು ಹೋಲಿಕೆ ಮಾಡುತ್ತಿರುವುದು 'ಬೀಸ್ಟ್' ಚಿತ್ರದ ಮೇಲೆ ಭಾರಿ ಪರಿಣಾಮ ಬೀರಲಿದೆ. ಆದರೂ, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದ್ದರೂ, ಚಿತ್ರತಂಡ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ಕೆಜಿಎಫ್ 2'ಗೆ 'ಬೀಸ್ಟ್' ಟಕ್ಕರ್
'ಬೀಸ್ಟ್' ಸಿನಿಮಾ ಏಪ್ರಿಲ್ 13ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದರ ಜೊತೆನೇ ಏಪ್ರಿಲ್ 14ರಂದು 'ಕೆಜಿಎಫ್ 2' ರಿಲೀಸ್ ಆಗುತ್ತಿದೆ. ಹೀಗಾಗಿ ಎರಡು ಬಿಗ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗುದ್ದಾಡಲಿದ್ದಾವೆ. ಈ ಮಧ್ಯೆನೇ 'ಬೀಸ್ಟ್' ಸಿನಿಮಾವನ್ನು 'ಮನಿ ಹೈಸ್ಟ್' ಜೊತೆ ಹೋಲಿಕೆ ಮಾಡಲಾಗುತ್ತಿದ್ದು, ಜನರು ಯಾವ ಸಿನಿಮಾವನ್ನು ಮೆಚ್ಚಿಕೊಳ್ಳುತ್ತಾರೆ ಅನ್ನೋದು ಇನ್ನು ಕೆಲವು ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











