Udayanidhi: ಸನಾತನ ಧರ್ಮವನ್ನು ಡೆಂಘೀಗೆ ಹೋಲಿಸಿದ್ದ ಉದಯನಿಧಿಗೆ 'ಕಾಂತಾರ' ನೋಡಿ ಎಂದ ನೆಟ್ಟಿಗರು

ತಮಿಳುನಾಡಿನ ಸಿಎಂ ಎಂ ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ನೀಡಿದ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದಾರೆ. ಉದಯನಿಧಿ ಸ್ಟಾರ್ ತಮಿಳುನಾಡಿನ ಜನಪ್ರಿಯ ನಟ ಕೂಡ ಹೌದು. ಅಲ್ಲದೆ ತಮಿಳುನಾಡಿನ ಯುವಜನ ಮತ್ತು ಕ್ರೀಡಾ ಸಚಿವರು ಕೂಡ ಹೌದು.

ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ಡರು. "ಕೆಲವು ವಿಚಾರಗಳನ್ನು ವಿರೋಧಿಸಿದರೆ ಸಾಲೋದಿಲ್ಲ. ಅದನ್ನು ಸಂಪೂರ್ಣವಾಗಿ ಬುಡ ಸಮೇತ ಕಿತ್ತೆಸೆಯಬೇಕಾಗುತ್ತದೆ. ಡೆಂಘೀ, ಮಲೇರಿಯಾ, ಕೊರೊನಾ, ಸೊಳ್ಳೆಗಳನ್ನೆಲ್ಲಾ ವಿರೋಧಿಸೋಕೆ ಆಗೋದಿಲ್ಲ. ಅವುಗಳನ್ನು ನಿರ್ನಾಮಗೊಳಿಸಬೇಕು." ಎಂದಿದ್ದರು. ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

udayanidhi-stalin-controversy-kantara

ಈ ವಿವಾದ ಬಳಿಕ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಗ್ಯಾಪ್‌ನಲ್ಲೇ ರಕ್ಷಿತ್ ಶೆಟ್ಟಿಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಟ್ವೀಟ್‌ಗೆ ನೆಟ್ಟಿಗರು ತಿರುಗೇಟು ನೀಡಿದ್ದು, 'ಕಾಂತಾರ' ನೋಡುವಂತೆ ಸಲಹೆ ನೀಡಿದ್ದಾರೆ.

ರಕ್ಷಿತ್ ಶೆಟ್ಟಿಗೆ ಶುಭಕೋರಿದ ಉದಯನಿಧಿ

ತಮಿಳುನಾಡು ಸಿಎಂ ಪುತ್ರ ಉದಯನಿಧಿ ಸ್ಟಾಲಿನ್ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ರಕ್ಷಿತ್ ಶೆಟ್ಟಿಗೆ ಟ್ಯಾಗ್‌ ಮಾಡಿ 'ಸೈಡ್ ಬಿ'ಗಾಗಿ ಕಾಯುತ್ತಿರೋದಾಗಿ ಟ್ವೀಟ್ ಮಾಡಿದ್ದರು. " ರಕ್ಷಿತ್ ಶೆಟ್ಟಿ ಬ್ರದರ್.. ನಾನು ನಿಮ್ಮ ಇತ್ತೀಚೆಗಿನ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ತುಂಬಾ ಇಷ್ಟ ಪಟ್ಟಿದ್ದೇನೆ. ಅದ್ಭುತವಾದ ಸಿನಿಮಾ ಮೇಕಿಂಗ್. ಇಡೀ ತಂಡಕ್ಕೆ ಅಭಿನಂದನೆಗಳು. ಸೈಡ್‌ ಬಿಗಾಗಿ ಕಾಯುತ್ತಿರುವೇ" ಎಂದು ಉದಯನಿಧಿ ಸ್ಟಾಲಿನ್ ಟ್ವೀಟ್ ಮಾಡಿದ್ದರು.

ತಿರುಗೇಟು ಕೊಟ್ಟ ನೆಟ್ಟಿಗರು

ಸನಾತನ ಧರ್ಮದ ಬಗ್ಗೆ ಹೇಳಿಕೆ ಕೊಟ್ಟು ವಿವಾದಕ್ಕೆ ಸಿಲುಕಿರೋ ಉದಯನಿಧಿ ಸ್ಟಾಲಿನ್‌ಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಈಗ 'ಸಪ್ತ ಸಾಗರದಾಚೆ ಎಲ್ಲೋ' ವಿಶ್ ಮಾಡಿದ ಬಳಿಕ ನೆಟ್ಟಿಗರು ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ. "ರಕ್ಷಿತ್ ಶೆಟ್ಟಿ ಸಂಪೂರ್ಣ ಸನಾತನಿ.. ಈಗ ನೀವು ನಿಮ್ಮ ಕಮೆಂಟ್‌ಗಳನ್ನು ಬದಲಾಯಿಸುತ್ತಿರಾ?" ಎಂದು ಕಮೆಂಟ್ ಮಾಡಿದ್ದಾರೆ. "ಒಂದೊಂದು ಕಾಮೆಂಟ್ ಗಳು ಅದ್ಬುತ ವರ್ಣಿಸಲು ಪದಗಳೇ ಸಾಲುತ್ತಿಲ್ಲ" ಎಂದು ಉದಯನಿಧಿಗೆ ಕಿಂಡಲ್ ಮಾಡಿದ್ದಾರೆ.

'ಕಾಂತಾರ' ಸಿನಿಮಾ ನೋಡುವಂತೆ ಸಲಹೆ

ಸನಾತನ ಧರ್ಮವನ್ನು ಬುಡ ಸಮೇತ ಕಿತ್ತೆಸೆಯಬೇಕು ಅನ್ನೋ ಉದಯನಿಧಿ ಸ್ಟಾಲಿನ್ ಹೇಳಿಕೆ ಕೆಲವರ ನಿದ್ದೆ ಕೆಡಿಸಿದೆ. ಹೀಗಾಗಿ ನೆಟ್ಟಿಗರು 'ಕಾಂತಾರ' ಸಿನಿಮಾ ನೋಡುವಂತೆ ಸಲಹೆ ನೀಡುತ್ತಿದ್ದಾರೆ. " ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾವನ್ನು ತಪ್ಪದೆ ನೋಡಿ. ಇದರಲ್ಲಿ ವರಾಹ ಸ್ವಾಮಿಯ ಮಹಿಮೆಯನ್ನು ತಿಳಿಸಿದ್ದಾರೆ. ಹಾಗೇ ನಿಮ್ಮ ಮನೆಯಲ್ಲಿ ನಿಮ್ಮ ಅಮ್ಮ ಹೇಗೆ ವರಾಹಿ ಅಮ್ಮನ ಭಕ್ತೆಯಾದರು ಅನ್ನೋದನ್ನು ಕಂಡುಕೊಳ್ಳಿ" ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

ನಿಮ್ಮನ್ನು ಓಡಿಸೋದು ಗೊತ್ತಿದೆ.

ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಕ್ಕೆ ನೆಟ್ಟಿಗರ ಆಕ್ರೋಶ ಕಮ್ಮಿಯಾಗಿಲ್ಲ. "ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎನ್ನುವ ಈ **ಮಗನಿಗೆ ಒಂದು ಸಲಹೆ. ನಿನಗೆ ಇಷ್ಟ ಇದ್ದರೆ ಇಲ್ಲಿ ಇರು. ನಿನ್ನ ಬ್ರಿಟಿಷ್ ಸಂತತಿಯಿಂದಲೇ ನಮ್ಮ ಧರ್ಮವನ್ನು ಏನು ಮಾಡಲಾಗಿಲ್ಲ. ಇನ್ನು ನೀನೇನು ಕಿಸಿಯುತ್ತೀಯ. ನಿನ್ನನ್ನು ಇಲ್ಲಿಂದ ಓಡಿಸಲು ನಮಗೆ ತಿಳಿದಿದೆ." ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

More from Filmibeat

English summary
Netizens Suggested to watch Kantara after Udayanidhi Stalin controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X