Bigg Boss: " ನಿನಗೆ ಗಂಟೆಗೆ 5 ಸಾವಿರ ಅಲ್ಲವೇ?".. 'ಜಾಣ' ನಟಿಗೆ ನಿಂದನೆ.. ತಿರುಗೇಟು ಕೊಟ್ಟ ಕಸ್ತೂರಿ ಶಂಕರ್

ಕ್ರೇಜಿಸ್ಟಾರ್ ಸಿನಿಮಾ 'ಜಾಣ' ನೋಡಿದವರಿಗೆ ಕಸ್ತೂರಿ ಶಂಕರ್ ಯಾರು ಅನ್ನೋದು ಗೊತ್ತಿರುತ್ತೆ. ಈ ನಟಿಯನ್ನು ನೆನಪಿಸಿಕೊಳ್ಳುವುದಕ್ಕೆ ಪ್ರೇಮಲೋಕದ ಪಾರಿಜಾತವೇ ಅನ್ನೋ ಹಾಡೊಂದೇ ಸಾಕು. ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದೇ ಹೋದರೂ ಕನ್ನಡಿಗರಿಗೆ ಈಕೆ ಚಿರಪರಿಚಿತ.

ಇದೇ ಇತ್ತೀಚೆಗೆ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಕಸ್ತೂರಿ ಶಂಕರ್ ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಗಮನ ಸೆಳೆಯುತ್ತಾರೆ. ಯಾವುದೇ ವಿಷಯದ ಬಗ್ಗೆ ಆಕೆ ಸರಿಯಿಲ್ಲ ಎಂದು ಎನಿಸಿದರೆ, ಅದಕ್ಕೆ ಪ್ರತಿಕ್ರಿಯಿಸಲು ಹಿಂದೇಟು ಹಾಕುವುದಿಲ್ಲ. ಇತ್ತೀಚೆಗೆ ಬಿಗ್ ಬಾಸ್ ಬಗ್ಗೆ ಹೇಳಿಕೆ ಕೊಟ್ಟು ನೆಟ್ಟಿಗರ ಕೆಂಗಣ್ಣೀಗೆ ಗುರಿಯಾಗಿದ್ದಾರೆ.

Netizens Targeted actress Kasturi Shankar for her controversial comment on bigg boss tamil

ಕೆಲವೇ ದಿನಗಳ ಹಿಂದಷ್ಟೇ ತಮಿಳಿನಲ್ಲಿ ಬಿಗ್ ಬಾಸ್ ಆರಂಭ ಆಗಿದೆ. ಈ ಹೊಸ ಸೀಸನ್ ವಿರುದ್ಧ ಕಸ್ತೂರಿ ಶಂಕರ್ ಕಮೆಂಟ್ ಮಾಡಿದ್ದರು. ಅದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು "ನೀವು ಬಿಗ್ ಬಾಸ್ ಕಾರ್ಯಕ್ರಮವನ್ನು ವೀಕ್ಷಿಸುತ್ತೀರಾ?" ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಕಸ್ತೂರಿ ಶಂಕರ್ "ಇಲ್ಲ.. ಒಂದೇ ಮನೆಯಲ್ಲಿ ಹಲವರನ್ನು ಕೂರಿಸಿ, ಅವರ ಕೃತಕ ಭಾವನೆಗಳನ್ನು ನೋಡಲು ನನಗೆ ಇಷ್ಟವಿಲ್ಲ." ಎಂದು ಪ್ರತಿಕ್ರಿಯಿಸಿದ್ದರು.

ಇಷ್ಟೇ ಅಲ್ಲದೆ " ಇಂತಹ ಕಾರ್ಯಕ್ರಮಗಳನ್ನು ನಾನು ನೋಡುವುದಿಲ್ಲ. ಅದಕ್ಕೆ ಸಮಯವಿಲ್ಲ. ಕುಟುಂಬ, ಕೆಲಸ ಹಾಗೇ ಜವಾಬ್ದಾರಿಗಳಿವೆ" ಎಂದು ಕಸ್ತೂರಿ ಶಂಕರ್ ಹೇಳಿದ್ದರು. ಇದು ಕಸ್ತೂರಿ ಶಂಕರ್ ಈ ಹೇಳಿಕೆಗೆ ನೆಟ್ಟಿಗರ ಕಣ್ಣುಗಳು ಕೆಂಪಗಾಗಿದ್ದವು.

Netizens Targeted actress Kasturi Shankar for her controversial comment on bigg boss tamil

ವಿಚಿತ್ರ ಅಂದರೆ, ಇದೇ ಕಸ್ತೂರಿ ಶಂಕರ್ ಬಿಗ್ ಬಾಸ್ ತಮಿಳಿನ 3ನೇ ಸೀಸನ್‌ನಲ್ಲಿ ಸ್ಪರ್ಧಿಯಾದರು. ಸುಮಾರು 63 ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಇದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೇಲೂ ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಕೆಲವರು ಕೆಟ್ಟದಾಗಿ ಕಮೆಂಟ್ ಕೂಡ ಮಾಡಿದ್ದರು. ಅದಕ್ಕೂ ಕಸ್ತೂರಿ ಶಂಕರ್ ತಿರುಗೇಟು ನೀಡಿದ್ದಾರೆ.

ಕೆಲವರು ಕಸ್ತೂರಿ ಶಂಕರ್ ಅವರನ್ನು ನಿಂದಿಸಿದ್ದಾರೆ. "ನೀವು ಗಂಟೆಗೆ 5000 ಪಡೆಯುವುದಿಲ್ಲವೇ? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು. ಅದಕ್ಕೆ ಕಸ್ತೂರಿ ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ. "ನಿಮ್ಮ ಮನೆಯವರು ನಿನ್ನನ್ನು ಹೀಗೆನಾ ಬೆಳೆಸಿರೋದು" ಎಂದು ಕಸ್ತೂರಿ ಶಂಕರ್ ತಿರುಗೇಟು ಕೊಟ್ಟಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಬಿಗ್ ಬಾಸ್ ಬಗ್ಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಂತೆ ಕಸ್ತೂರಿ ಪರ ಮತ್ತು ವಿರೋಧವಾಗಿ ಹಲವರು ಆರೋಪ ಮಾಡುತ್ತಿದ್ದಾರೆ. ಈಗ ಕಸ್ತೂರಿ ಶಂಕರ್ ಸಿನಿಮಾಗಳ ಜೊತೆಗೆ ಧಾರಾವಾಹಿಗಳು ಮತ್ತು ಇತರೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Netizens Targeted actress Kasturi Shankar for her controversial comment on bigg boss tamil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X