ವರಲಕ್ಷ್ಮಿ ಶರತ್‌ಕುಮಾರ್ ಮದುವೆ ಆದ್ಮೇಲೆ ಗಂಡನ ಹೆಸರೇ ಬದಲಾಯ್ತು? ಯಾಕೆ ಹೀಗಾಯ್ತು?
ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ವರಲಕ್ಷ್ಮಿ ಶರತ್‌ಕುಮಾರ್ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಹುದಿನದ ಗೆಳೆಯ, ಮುಂಬೈ ಮೂಲದ ನಿಕೊಲಾಯ್ ಸಚ್‌ದೇವ್ ಅವರನ್ನು ಥೈಲ್ಯಾಂಡ್‌ನಲ್ಲಿ ಮದುವೆ ಆಗಿದ್ದರು. ಕೇವಲ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಕಾರಣಕ್ಕೆ ಚೆನ್ನೈನಲ್ಲಿ ಆರತಕ್ಷತೆಯನ್ನು ಸಿನಿಮಾರಂಗದ ಗೆಳೆಯರಿಗಾಗಿ ಇಟ್ಟುಕೊಂಡಿದ್ದರು.
ವರಲಕ್ಷ್ಮಿ ತಮಿಳು ಚಿತ್ರರಂಗದ ದಿಗ್ಗಜ ಶರತ್‌ಕುಮಾರ್ ಅವರ ಮೊದಲ ಪತ್ನಿಯ ಪುತ್ರಿ. ಆದರೂ, ಶರತ್‌ಕುಮಾರ್ ಹಾಗೂ ಅವರ ಎರಡನೇ ಪತ್ನಿ ರಾಧಿಕಾ ಮುಂದೆ ನಿಂತು ವರಲಕ್ಷ್ಮಿ ಮದುವೆ ಮಾಡಿದ್ದರು. ಮುಂಬೈನಲ್ಲಿ ನಿಕೊಲಾಯ್ ಸಚ್‌ದೇವ್ ಆರ್ಟ್ ಗ್ಯಾಲರಿಯೊಂದರ ಮಾಲೀಕರಾಗಿದ್ದಾರೆ. ವಿವಾಹದ ಬಳಿಕ ಮಾಧ್ಯಮಗಳೊಂದಿಗೆ ಪ್ರತ್ಯಕ್ಷ ಆಗಿದ್ದ ಈ ಜೋಡಿ, ಕೆಲವು ನಿರ್ಧಾರಗಳನ್ನು ಕೈಗೊಂಡಿದೆ.

ವರಲಕ್ಷ್ಮಿ ಶರತ್‌ಕುಮಾರ್ ಪತಿ ನಿಕೊಲಾಯ್ ಸಚ್‌ದೇವ್ ಮದುವೆ ಬಳಿಕ ಒಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮದುವೆ ಬಳಿಕ ಪತ್ನಿ ವರಲಕ್ಷ್ಮಿ ಶರತ್‌ಕುಮಾರ್‌ಗೆ ಗೌರವ ಕೊಡುವುದಕ್ಕೆ ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಮದುವೆ ಬಳಿಕ ಅಂತಹದ್ದೇನಾಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಸಾಮಾನ್ಯವಾಗಿ ಮದುವೆ ಬಳಿಕ ಮಹಿಳೆಯರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ತಮ್ಮ ಹೆಸರಿನ ಮುಂದೆ ಪತ್ನಿಯ ಹೆಸರನ್ನು ಸೇರಿಸಿಕೊಳ್ಳುತ್ತಾರೆ. ನಟಿಯರು ಮದುವೆ ಆದಾಗಲೂ ಹಾಗೇ ಈಗಿರುವ ಹೆಸರಿನ ಮುಂದೆ ಪತಿಯ ಹೆಸರನ್ನು ಸೇರಿಸಿಕೊಳ್ಳುತ್ತಾರೆ. ಆದರೆ, ವರಲಕ್ಷ್ಮಿ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಮದುವೆ ಬಳಿಕ ಪತಿ ನಿಕೊಲಾಯ್ ಸಚ್‌ದೇವ್ ಅವರೇ ಪತ್ನಿ ಹೆಸರನ್ನು ಸೇರಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಯಾಕೆ ಈ ನಿರ್ಧಾರ?

ಹೌದು, ನಿಕೊಲಾಯ್ ಸಚ್‌ದೇವ್ ಇನ್ಮುಂದೆ ತಮ್ಮ ಹೆಸರಿನ ಮುಂದೆ ವರಲಕ್ಷ್ಮಿ ಶರತ್‌ಕುಮಾರ್ ಹೆಸರನ್ನು ಸೇರಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೇ ತಮ್ಮ ಮಗಳ ಹೆಸರಿನಲ್ಲೂ ವರಲಲಕ್ಷ್ಮಿ ಶರತ್‌ಕುಮಾರ್ ಹೆಸರನ್ನು ಸೇರಿಸುವುದಾಗಿ ಹೇಳಿಕೊಂಡಿದ್ದಾರೆ. ಈ ನಿರ್ಧಾರದ ಹಿಂದೊಂದು ಒಳ್ಳೆಯ ಉದ್ದೇಶವಿದೆ. ಅದೇನು ಅಂತ ನೋಡುವುದಾದರೇ,
ಸಿನಿಮಾರಂಗದಲ್ಲಿ ಶರತ್‌ಕುಮಾರ್ ಹಾಗೂ ಪುತ್ರಿ ವರಲಕ್ಷ್ಮಿಯ ಹೆಸರು ದೊಡ್ಡದಿದೆ. ಚಿತ್ರರಂಗದಲ್ಲಿ ಅವರು ತಮ್ಮದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಪತಿ ನಿಕೊಲಾಯ್ ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ತಮ್ಮ ಹಾಗೂ ಮಗಳ ಹೆಸರಿನ ಮುಂದೆ ವರಲಕ್ಷ್ಮಿ ಶರತ್‌ಕುಮಾರ್ ಎಂದು ಸೇರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಇದೇ ವೇಳೆ ಮದುವೆ ಬಳಿಕವೂ ವರಲಕ್ಷ್ಮಿ ಶರತ್‌ಕುಮಾರ್ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುತ್ತಾರೆಂದು ಹೇಳಿದ್ದಾರೆ. ನಿಕೊಲಾಯ್ ಸಚ್‌ದೇವ್ ಈ ಹಿಂದೆ ಕವಿತಾ ಎಂಬುವವರನ್ನು ವಿವಾಹವಾಗಿದ್ದರು. ಅವರಿಗೆ ಕಶಾ ನಿಯಾ ಸಚ್‌ದೇವ್ ಎಂಬ ಪುತ್ರಿನೂ ಇದ್ದಾರೆ. ಮದುವೆ ಮುನ್ನ ಈ ಜೋಡಿ ದುಬೈಗೆ ಶಾಪಿಂಗ್‌ಗೆ ಹೋಗಿತ್ತು. ಆ ವೇಳೆ ಈ ಜೋಡಿ ಕಶಾ ನಿಯಾ ಸಚ್‌ದೇವ್ ಕಾಣಿಸಿಕೊಂಡಿದ್ದರು.


Click it and Unblock the Notifications











