ಚೆನ್ನೈನ ಬಂದರಿನ 100 ಕೂಲಿಗಳಿಗೆ ಒನ್‌ಇಂಡಿಯಾದಿಂದ 'ಕೂಲಿ' ವೀಕ್ಷಣೆಗೆ ವ್ಯವಸ್ಥೆ

ಸೂಪರ್‌ಸ್ಟಾರ್ ರಜನಿಕಾಂತ್‌ ನಟೆನಯ 'ಕೂಲಿ' ಸಿನಿಮಾ ಕಳೆದ ವಾರವಷ್ಟೇ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಐದನೇ ದಿನ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ರಜನಿಕಾಂತ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ ಸಿನಿಮಾ ನೋಡಿ ಸಿನಿಮಾ ಪ್ರೇಮಿಗಳು ಥ್ರಿಲ್ ಆಗಿದ್ದಾರೆ.

ಈ ಹಿನ್ನೆಲೆ ಒನ್ ಇಂಡಿಯಾ ಹಾಗೂ ಫಿಲ್ಮಿಬೀಟ್ ರಿಯಲ್ ಲೈಫ್‌ ಕೂಲಿ ಕಾರ್ಮಿಕರಿಗೆ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾವನ್ನು ತೋರಿಸಿದೆ. ಚೆನ್ನೈ ಬಂದರಿನಲ್ಲಿ ಕೆಲಸ ಮಾಡುತ್ತಿರುವ ಸುಮಾರು 100 ಕೂಲಿ ಕಾರ್ಮಿಕರಿಗೆ ತನ್ನ 50 ಮಂದಿ ಓದುಗರೊಂದಿಗೆ ರಜನಿಯ 'ಕೂಲಿ' ಸಿನಿಮಾದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

OneIndia Bridges Reel and Real Chennai Harbour Coolies Join Fans for Coolie Movie Celebration

ಬಹುನಿರೀಕ್ಷಿತ 'ಕೂಲಿ' ಸಿನಿಮಾವನ್ನ ಒನ್‌ ಇಂಡಿಯಾ ಕೂಡ ವಿಶೇಷವಾಗಿ ತನ್ನ ವೆಬ್‌ಸೈಟ್ ಓದುಗರೊಂದಿಗೆ ಹಾಗೂ ರಿಯಲ್‌ ಲೈಫ್ ಕೂಲಿ ಕಾರ್ಮಿಕರನ್ನು ವಿಶೇಷ ಪ್ರದರ್ಶನಕ್ಕೆ ಕರೆತಂದು ಇಟ್ಟಿಗೆ ಸೇರಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ರಿಯಲ್ ಲೈಫ್ ಹೀರೋಗಳೊಂದಿಗೆ 'ಕೂಲಿ' ಸಿನಿಮಾದ ನಿಜವಾದ ಸಂಭ್ರಮಾಚರಣೆ ಮಾಡಿದೆ.

ಒನ್ ಇಂಡಿಯಾ ಹಾಗೂ ಫಿಲ್ಮಿಬೀಟ್ 'ಕೂಲಿ' ಸಿನಿಮಾ ಕೂಲಿಗಳ ಜೊತೆ ರಿಯಲ್ ಲೈಫ್ ಕೂಲಿಗಳನ್ನು "ಚೆನ್ನೈ ಬಂದರಿನಿಂದ ದೊಡ್ಡ ಪರದೆಯವರೆಗೆ" (From Chennai Harbour to the Big Screen) ಎಂಬ ವಿಶೇಷ ಅಭಿಯಾನದ ಮೂಲಕ ಒಂದು ಸೂರಿನಡಿ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದೆ. ಈ ರಿಯಲ್ ಲೈಫ್ ಹೀರೋಗಳಿಗೆ ತಮ್ಮದೇ ಕುರಿತಾದ ಕಥೆಯನ್ನು ಬೆಳ್ಳಿ ಪರದೆ ಮೇಲೆ ನೋಡಲು ಒನ್‌ ಇಂಡಿಯಾದ ಈ ಅಭಿಯಾನ ಸೇತುವೆಯಾಗಿದೆ. ಪ್ರತಿ ದಿನ ಕಷ್ಟ ಪಟ್ಟು ದುಡಿಯುವವರನ್ನು ಗೌರವಾನ್ವಿತ ಅತಿಥಿಗಳಾಗಿ 'ಕೂಲಿ' ಸಿನಿಮಾವನ್ನು ವೀಕ್ಷಿಸಲು ಆಹ್ವಾನಿಸಲಾಗಿತ್ತು. ಸ್ಪರ್ಧೆಯ ಮೂಲಕ ಸುಮಾರು 50 ಮಂದಿ ಓದುಗರಿಗೆ 'ಕೂಲಿ' ಸಿನಿಮಾವನ್ನು ತೋರಿಸಲಾಯ್ತು.

OneIndia Bridges Reel and Real Chennai Harbour Coolies Join Fans for Coolie Movie Celebration

ಈ ವಿಶೇಷ ಅಭಿಯಾನದ ಉದ್ದೇಶದ ಕುರಿತು ಒನ್‌ಇಂಡಿಯಾದ ಸಿಇಓ ರಾವಣನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಒನ್‌ಇಂಡಿಯಾದಲ್ಲಿ ನಾವು ಕಥೆಯೊಳಗೆ ಅಡಗಿರುವ ಶಕ್ತಿಯನ್ನು ನಂಬುತ್ತೇವೆ. ಹಾಗಂತ ಕೇವಲ ತೆರೆಯ ಮೇಲಿರುವ ಕಥೆಯನ್ನಷ್ಟೇ ಅಲ್ಲ. ಪ್ರತಿದಿನ ಮೌನವಾಗಿ ಬದುಕುತ್ತಿರುವ ರಿಯಲ್ ಕಥೆಗಳಲ್ಲಿರುವ ಶಕ್ತಿಯನ್ನೂ ನಂಬುತ್ತೇವೆ. ಚೆನ್ನೈ ಬಂದರಿನ ರಿಯಲ್ ಲೈಫ್ ಕೂಲಿಗಳು ಹಾಗೂ ನಮ್ಮ ಓದುಗರನ್ನು'ಕೂಲಿ' ಸಿನಿಮಾದ ವಿಶೇಷ ಪ್ರದರ್ಶನಕ್ಕೆ ಒಗ್ಗೂಡಿಸುವ ಮೂಲಕ ರಿಯಲ್ ಲೈಫ್ ಹೀರೋಗಳ ಮೇಲೆ ಬೆಳಕು ಚೆಲ್ಲಲು ಬಯಸಿದ್ದೇವೆ. ಇದು ರಿಯಲ್ ಲೈಫ್, ರಿಯಲ್ ಫೈಟ ಹಾಗೂ ರಿಯಲ್ ಭಾರತವನ್ನು ಗೌರವಿಸುವ ನಮ್ಮ ವಿಧಾನ " ಎಂದಿದ್ದಾರೆ.

ಚಿತ್ರಮಂದಿರಗಳಲ್ಲಿ ಕೇವಲ ಚಪ್ಪಾಳೆಗಳಷ್ಟೇ ಪ್ರತಿಧ್ವನಿಸುವುದಿಲ್ಲ. ಅಲ್ಲಿ ಹೃದಯಸ್ಪರ್ಶಿ ಪ್ರತಿಕ್ರಿಯೆಗಳು ಇರುತ್ತವೆ. ಕೃತಜ್ಞತೆಯ ಭಾವನೆ ಇರುತ್ತೆ. ಹಾಗೇ ಚಿತ್ರಮಂದಿರದೊಳಗೆ ಸಂಭ್ರಮದ ವಾತಾರವಣವಿರುತ್ತೆ. ಸಿನಿಮಾದ ಪ್ರಮುಖ ದೃಶ್ಯಗಳಲ್ಲಿ ಕೇಳಿಸುವ ಹರ್ಷೋದ್ಗಾರಗಳಿಂದ ಹಿಡಿದು ಆಳವಾದ ಭಾವನಾತ್ಮಕ ಸನ್ನಿವೇಶಗಳು ಸಿನಿಮಾ ಹಾಗೂ ನಿಜ ಜೀವನದ ಹೀರೋಗಳ ನಡುವೆ ಬಾಂಧವ್ಯವನ್ನು ಬೆಸೆಯುತ್ತದೆ.

OneIndia Bridges Reel and Real Chennai Harbour Coolies Join Fans for Coolie Movie Celebration

ಈ ವಿಶಿಷ್ಟ ಅಭಿಯಾನದ ಮೂಲಕ ಒನ್‌ಇಂಡಿಯಾ ಮನರಂಜನೆಯ ಜೊತೆಗೆ ಸಹಾನುಭೂತಿ ಬೆಸೆದಿದೆ, ಕಥೆ ಹೇಳುವುದರೊಂದಿಗೆ ಸಾಮಾಜಿಕ ಪರಿಣಾಮವನ್ನು ಬೆರೆಸುವ ತನ್ನ ಸಾಮರ್ಥ್ಯವನ್ನು ಮತ್ತೆ ತೋರಿಸಿದೆ. ಸಿನಿಮಾ ಬಿಡುಗಡೆ ಅನ್ನೋದು ಕೇವಲ ಪ್ರಚಾರವಷ್ಟೇ ಅಲ್ಲ. ಅದೊಂದು ತನ್ನದೇ ಸ್ವಂತ ಕಥೆಯಾಗಿ ಬದಲಾಗಬಹುದು ಎಂದು ಮತ್ತೊಮ್ಮೆ ಸಾಬೀತು ಮಾಡಿದೆ.

More from Filmibeat

English summary
OneIndia and filmibeat Bridges Reel and Real: Chennai Harbour Coolies Join Fans for Coolie Movie Celebration.
Read more about: rajinikanth tamil movie coolie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X