'ಪೊನ್ನಿಯಿನ್ ಸೆಲ್ವನ್ 2' ಮೊದಲ ವಿಮರ್ಶೆ: ವಿವಾದಾತ್ಮಕ ವಿಮರ್ಶಕ ಹೇಳಿದ್ದೇನು?

ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಪೊನ್ನಿಯಿನ್ ಸೆಲ್ವನ್ 2' ರಿಲೀಸ್‌ಗೆ ರೆಡಿಯಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಉತ್ತರ ಭಾರತ, ಬೆಂಗಳೂರು,ಕೊಚ್ಚಿ ಅಂತ ಓಡಾಡಿಕೊಂಡಿದ್ದಾರೆ.

'ಪೊನ್ನಿಯಿನ್ ಸೆಲ್ವನ್' ಮೊದಲ ಚಾಪ್ಟರ್‌ಗೆ ದಕ್ಷಿಣ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೇ ಜೋಷ್‌ನಲ್ಲೇ ಪಾರ್ಟ್‌ 2 ರಿಲೀಸ್ ಮಾಡೋಕೆ ಚಿತ್ರತಂಡ ಮುಂದಾಗಿದೆ. ಐಪಿಎಲ್ ಅನ್ನೂ ಲೆಕ್ಕಿಸದೇ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದೆ.

Ponniyin Selvan 2 Movie Review By Umair Sandhu: He says Boring and Torture

ಏಪ್ರಿಲ್ 28ರಂದು 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ, ಅದಕ್ಕೂ ಎರಡು ದಿನ ಮುನ್ನವೇ ವಿವಾದಾತ್ಮಕ ವಿಮರ್ಶಕ ವಿಮರ್ಶೆ ಮಾಡಿದ್ದಾರೆ. ಹೌದು, ಉಮೈರ್ ಸಂಧು ಈ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು, ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಕ್ಸಾಫೀಸ್ ದೋಚಲು ಸಜ್ಜಾದ 'ಪೊನ್ನಿಯನ್ ಸೆಲ್ವನ್ 2'

'ಪೊನ್ನಿಯಿನ್ ಸೆಲ್ವನ್ 2' ತಂಡ ಬಾಕ್ಸಾಫೀಸ್ ದೋಚುವುದಕ್ಕೆ ಸಜ್ಜಾಗಿ ನಿಂತಿದೆ. ಮೊದಲ ಚಾಪ್ಟರ್ ಗಲ್ಲಾಪೆಟ್ಟಿಯಲ್ಲಿ ಉತ್ತಮ ಗಳಿಕೆಯನ್ನೇ ಮಾಡಿತ್ತು. ಚಿತ್ರತಂಡವೇ ಈ ಸಿನಿಮಾ ಸುಮಾರು 500 ಕೋಟಿ ರೂಪಾಯಿ ಕಲೆ ಹಾಕಿದೆ ಎಂದು ಹೇಳಿಕೊಂಡಿತ್ತು.

ಈ ಕಾರಣಕ್ಕೆ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ಈ ಬಾರಿಯೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಮೊದಲ ಪಾರ್ಟ್ 500 ಕೋಟಿ ರೂ. ಲೂಟಿ ಮಾಡಿದ್ದರೂ, ಸಿನಿಮಾ ಬಜೆಟ್‌ಗೆ, ಸ್ಟಾರ್ ಕಾಸ್ಟ್‌ಗೆ ಇದು ಕಡಿಮೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ 'ಪಿಎಸ್‌ 2' ನಿರ್ಮಾಣ ಸಂಸ್ಥೆಗೆ ದೊಡ್ಡ ಯಶಸ್ಸು ತಂದು ಕೊಡುತ್ತೆ ಅನ್ನೋ ನಿರೀಕ್ಷೆಯತ್ತು ಚಿತ್ರತಂಡ. ಆದರೆ, ವಿಮರ್ಶಕ ಉಮೈರ್ ಸಂಧು ಎಲ್ಲವನ್ನೂ ತಲೆ ಕೆಳಗೆ ಮಾಡಿದ್ದಾರೆ.

ಸಿನಿಮಾ ಬಗ್ಗೆ ಉಮೈರ್ ಸಂಧು ಹೇಳಿದ್ದೇನು?

ಸ್ವಯಂ ಘೋಷಿತ ವಿವಾದಾತ್ಮಕ ನಿರ್ದೇಶಕ ಉಮೈರ್ ಸಂಧು ಪೊನ್ನಿಯಿನ್ ಸೆಲ್ವನ್ ಬಿಡುಗಡೆ ಎರಡು ದಿನ ಬಾಕಿ ಇರುವಂತೆಯೇ ಟ್ವೀಟ್ ಮೂಲಕ ತನ್ನ ಅಭಿಪ್ರಾಯ ತಿಳಿಸಿದ್ದಾರೆ. " ಸಿನಿಪ್ರಿಯರಿಗೆ ಈ ಸಿನಿಮಾ ಬೇಸರ ತರಿಸುತ್ತೆ. ಅಲ್ಲದೆ ಚಿತ್ರಹಿಂಸೆ ಅಂತಲೂ ಅನಿಸುತ್ತೆ. ನೋಡಬೇಡಿ" ಅಂತ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವಿರುದ್ಧ ಕೆಲವರು ಕಿಡಿಕಾರಿದ್ದಾರೆ.

'ಪೊನ್ನಿಯಿನ್ ಸೆಲ್ವನ್ 2' ಐತಿಹಾಸಿಕ ಸಿನಿಮಾ. ಹೀಗಾಗಿ ಚೋಳ ಸಾಮ್ರಾಜ್ಯದ ಬಗ್ಗೆ ತಿಳಿದುಕೊಳ್ಳುವ ಉತ್ಸಾಹದಲ್ಲಿ ದಕ್ಷಿಣ ಭಾರತದ ಜನರಿದ್ದಾರೆ. ಈ ಮಧ್ಯೆನೇ ಉಮೈರ್ ಸಂಧು ನೆಗೆಟಿವ್ ಆಗಿ ವಿಮರ್ಶೆ ಮಾಡಿದ್ದಾರೆ. ಅಸಲಿಗೆ ಉಮೈರ್ ಸಂಧು ವಿಮರ್ಶೆಯನ್ನು ಯಾರೂ ನಂಬುವಂತಿಲ್ಲ. ಕೆಲವೊಮ್ಮೆ ಇವರು ಹೇಳಿದ್ದು ಸುಳ್ಳಾಗಿದೆ. ಹೀಗಾಗಿ ಪ್ರೇಕ್ಷಕರು ಹೇಗೆ ತೆಗೆದುಕೊಳ್ಳುತ್ತಾರೋ ಎದುರು ನೋಡಬೇಕಿದೆ.

ಕಿಡಿಕಾರಿದ್ದ ಸುಹಾಸಿನಿ

'ಪೊನ್ನಿಯಿನ್ ಸೆಲ್ವನ್' ಮೊದಲ ಚಾಪ್ಟರ್ ಬಿಡುಗಡೆಯಾದಾಗಲೂ ಉಮೈರ್ ಸಂಧು ಬಿಡುಗಡೆಗೂ ಮುನ್ನವೇ ನೆಗೆಟಿವ್ ವಿಮರ್ಶೆ ಮಾಡಿದ್ದರು. ಇದರಿಂದ ಮಣಿರತ್ನಂ ಪತ್ನಿ ಹಾಗೂ ನಟಿ ಸುಹಾಸಿನಿ ಕಿಡಿಕಾರಿದ್ದರು. " ಯಾವ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ್ದೀರಿ" ಎಂದು ಕಿಡಿಕಾರಿದ್ದರು.

'ಪೊನ್ನಿಯಿನ್ ಸೆಲ್ವನ್ 2' ಈ ವರ್ಷ ರಿಲೀಸ್ ಆಗುತ್ತಿರುವ ತಮಿಳಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಹೀಗಾಗಿ ಈ ಸಿನಿಮಾ ರಿಲೀಸ್ ಆದ್ಮೇಲೆ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋದನ್ನು ತಿಳಿಯೋ ಕುತೂಹಲ ಎಲ್ಲರಲ್ಲೂ ಇದೆ.

More from Filmibeat

English summary
Ponniyin Selvan 2 Movie Review By Umair Sandhu: He says Boring and Torture, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X