ದೆಹಲಿ ಬೀದಿಗಳಲ್ಲಿ 'ಫಲುಡ' ಸವಿದ ವಿಕ್ರಂ,ಕಾರ್ತಿ,ತ್ರಿಶಾ: ಮುಂದಿನ ನಿಲ್ದಾಣ ಎಲ್ಲಿ?
ಮಣಿರತ್ನಂ ನಿರ್ದೇಶಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ಪೊನ್ನಿಯಿನ್ ಸೆಲ್ವನ್ 2' ಬಿಡುಗಡೆ ಸಜ್ಜಾಗಿದೆ. ಈ ಸಂಬಂಧ ಇಡೀ ತಂಡ ಉತ್ತರ ಭಾರತದಲ್ಲಿ ಪ್ರಚಾರ ಮಾಡುತ್ತಿದೆ. ಇತ್ತೀಚೆಗೆ ಇಡೀ ತಂಡ ದೆಹಲಿಯಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದೆ.
'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ಇದೇ ಏಪ್ರಿಲ್ 28ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಬಾರಿ ಹಿಂದಿ ಬೆಲ್ಟ್‌ನಲ್ಲಿ ಗೆಲ್ಲಲೇ ಬೇಕು ಅನ್ನೋ ಕಾರಣಕ್ಕೆ ಸಿನಿಮಾದ ಇಡೀ ತಂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ.

ವಿಕ್ರಂ, ಕಾರ್ತಿ, ಐಶ್ವರ್ಯಾ, ತ್ರಿಶಾ ಕೃಷ್ಣ, ಶೋಭಿತಾ ಧುಲಿಫಲ ಇತ್ತೀಚೆಗೆ ದೆಹಲಿಗೆ ಹೋಗಿದ್ದರು. ಅಲ್ಲಿನ ಬೀದಿಗಳಲ್ಲಿ ಯಾವುದೇ ಬಾಡಿ ಗಾರ್ಡ್ ಇಲ್ಲಿದೆ, ಸ್ವತಂತ್ರವಾಗಿ ವಿಕ್ರಂ, ಕಾರ್ತಿ, ಐಶ್ವರ್ಯಾ, ತ್ರಿಶಾ ಕೃಷ್ಣ, ಶೋಭಿತಾ ಧುಲಿಫಲ ಎಲ್ಲರೂ ಫಲುಡ ಸವಿದಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಶೀಘ್ರದಲ್ಲೇ ಈ ಪ್ರಚಾರದ ಡೈರಿಯನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ. ಈಗಾಗಲೇ 'ಪೊನ್ನಿಯಿನ್ ಸೆಲ್ವನ್ 2' ಟ್ರೈಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿವೆ. ಈ ಸಿನಿಮಾ ಬರೋದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ.
ಬಿಡುಗಡೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಇಡೀ ಚಿತ್ರತಂಡ ಕೂಡ ಭರದಿಂದ ಪ್ರಚಾರ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಮೋಷನ್ ಮಾಡಿರುವ ಪಿಎಸ್-2 ಬಳಗ ಇದೇ 22ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲಿದೆ.

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. 'ಪೊನ್ನಿಯಿನ್ ಸೆಲ್ವನ್ -2' ಸಿನಿಮಾದಲ್ಲಿ ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಆಗಿದೆ. ಮಣಿರತ್ನಂ ನಿರ್ದೇಶನ ಹೈಲೈಟ್ ಆದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್ ಇದೆ.
ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ 'ಪೊನ್ನಿಯಿನ್ ಸೆಲ್ವನ್' ಆಧಾರಿಸಿದ ಸಿನಿಮಾವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಚಾಪ್ಟರ್ ಮೆಗಾ ಹಿಟ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ 500 ಕೋಟಿ ರೂ. ಲೂಟಿ ಮಾಡಿತ್ತು.
ಅದೇ ಸಕ್ಸಸ್‌ನಲ್ಲೇ 'ಪೊನ್ನಿಯಿನ್ ಸೆಲ್ವನ್ 2' ಸೀಕ್ವೆಲ್ ತೆರೆಗೆ ಬರ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ತೆರೆಕಾಣಲಿದೆ. ದೆಹಲಿ ಬಳಿಕ ಈ ತಂಡ ಕೊಚ್ಚಿಗೆ ಪಯಣ ಬೆಳೆಸಲಿದೆ.


Click it and Unblock the Notifications











