ಕಮಲ್ ಹಾಸನ್ ಜೊತೆ ನಟಿ ಪೂಜಾ ಕುಮಾರ್ ಡೇಟಿಂಗ್ ವದಂತಿ: ಪ್ರತಿಕ್ರಿಯೆ ನೀಡಿದ ನಟಿ
ಖ್ಯಾತ ನಟ ಕಮಲ್ ಹಾಸನ್ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಸಿನಿಮಾ, ರಾಜಕೀಯ ಅಂತ ಬ್ಯುಸಿಯಾಗಿರುವ ಕಮಲ್ ಹಾಸನ್ ಡಾಟಿಂಗ್ ವಿಚಾರ ವೈರಲ್ ಆಗಿದೆ. ಹೌದು, ಕಮಲ್ ಹಾಸನ್ ನಟಿ ಪೂಜಾ ಕುಮಾರ್ ಜೊತೆ ಡೇಟಿಂಗ್ ನಲ್ಲಿದ್ದಾರೆ. ಇಬ್ಬರ ಸಂಬಂಧವು ಸ್ನೇಹಕ್ಕಿಂತ ಮಿಗಿಲಾಗಿದೆ ಎಂದು ಹೇಳಲಾಗುತ್ತಿದೆ.
Recommended Video
ಪತ್ನಿ ಸಾರಿಕಾ ಅವರಿಂದ ದೂರ ಆದ ಬಳಿಕ ಕಮಲ್ ನಟಿ ಗೌತಮಿ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. 2016ರಲ್ಲಿ ಗೌತಮಿಯಿಂದ ದೂರ ಆದ ನಂತರ ನಟಿ ಪೂಜಾ ಕುಮಾರ್ ಜೊತೆ ಕಮಲ್ ಹೆಸರು ಕೇಳಿ ಬರುತ್ತಿದೆ. ಅಲ್ಲದೆ ಕಮಲ್ ಜೊತೆ ಪೂಜಾ 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಬಗ್ಗೆ ಈಗ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ನಟಿ ಪೂಜಾ ಕುಮಾರ್
ಪೂಜಾ ಕುಮಾರ್ ಇಂಡೋ-ಅಮೆರಿಕನ್ ನಟಿ. ತಮಿಳು, ತೆಲುಗು, ಹಿಂದಿ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಪೂಜಾ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಮಿಂಚುವ ಮೊದಲು ಪೂಜಾ ಟಿವಿ ನಿರೂಪಕಿಯಾಗಿ, ಮಾಡೆಲ್ ಆಗಿ ಖ್ಯಾತಿಗಳಿಸಿದ್ದಾರೆ. 1995ರಲ್ಲಿ ಮಿಸ್ ಇಂಡಿಯಾ ಯು ಎಸ್ ಎ ಆಗಿ ಹೊರಹೊಮ್ಮಿದ್ದಾರೆ. ಪೂಜಾ ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೂ ಪೂಜಾ ಹೆಸರು ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿಗಳಿಸಿದೆ.

ಕಮಲ್ ಹಾಸನ್ ಜೊತೆ ಮೂರು ಸಿನಿಮಾ
ಪೂಜಾ ಕಮಲ್ ಹಾಸನ್ ಜತೆ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 2013ರಲ್ಲಿ ರಿಲೀಸ್ ಆದ ವಿಶ್ವರೂಪಮ್, 2015ರಲ್ಲಿ ಬಂದ ಉತ್ತಮ್ ವಿಲನ್ ಮತ್ತು 2018ರಲ್ಲಿ ತೆರೆಗೆ ಬಂದ ವಿಶ್ವರೂಪಮ್-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಸಿನಿಮಾಗಳಲ್ಲಿ ಕಮಲ್ ಜೊತೆ ಮಿಂಚಿರುವ ಪೂಜಾ ತೆರೆಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ಸಕಲಕಲಾವಲ್ಲಭನ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ.

ಕಮಲ್ ಜೊತೆ ಡೇಟಿಂಗ್ ನಲ್ಲಿದ್ದಾರಾ ಪೂಜಾ?
ವಿಶ್ವರೂಪಂ ಸಿನಿಮಾ ನಂತರ ನಟ ಕಮಲ್ ಹಾಸನ್ ಮತ್ತು ಪೂಜಾ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಕಮಲ್ ಹಾಸನ್ ಫ್ಯಾಮಿಲಿ ಕಾರ್ಯಕ್ರಮಗಳಿಗೆ ಪೂಜಾ ಹಾಜರಾಗುತ್ತಾರೆ. ಇಬ್ಬರ ಅನ್ಯೋನ್ಯತೆ ನೋಡಿ ಅನೇಕರು ಇಬ್ಬರ ನಡುವಿನ ಸಂಬಂಧ ಸ್ನೇಹಕ್ಕಿಂತ ಮಿಗಿಲಾಗಿದೆ ಎಂದು ಹೇಳಲಾಗುತ್ತಿದೆ. ಪೂಜಾ ಮತ್ತು ಕಮಲ್ ಇಬ್ಬರು ನಾಲ್ಕೈದು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ ಎನ್ನುವ ವಿಚಾರ ಅನೇಕ ಬಾರಿ ಸುದ್ದಿಯಾಗಿದೆ.

ಪ್ರತಿಕ್ರಿಯೆ ನೀಡಿರುವ ಪೂಜಾ
ಇಬ್ಬರ ಸ್ನೇಹ-ಸಂಬಂಧದ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನಟಿ ಪೂಜಾ ಪ್ರತಿಕ್ರಿಯೆ ನೀಡಿದ್ದಾರೆ. ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಪೂಜಾ "ನಾನು, ಕಮಲ್ ಹಾಸನ್ ಸರ್ ಮತ್ತು ಅವರ ಕುಟುಂಬವನ್ನು ಬಹಳ ಸಮಯದಿಂದ ಪರಿಚಯ. ನಾನು ಅವರ ಜೊತೆ ಕೆಲ ಮಾಡಲು ಪ್ರಾರಂಭಿಸಿದಾಗಿನಿಂದಲೂ ಅವರ ಕುಟುಂಬದ ಜೊತೆ ಉತ್ತಮ ಸ್ನೇಹವಿದೆ. ಅವರ ಸಹೋದರ, ಮತ್ತು ಅವರ ಮಕ್ಕಳು ಸ್ರುತಿ ಮತ್ತು ಅಕ್ಷರಾ ಎಲ್ಲರೂ ಗೊತ್ತು. ಅವರ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ" ಎಂದು ಹೇಳಿದ್ದಾರೆ.

ಇದೆಲ್ಲ ಸುಳ್ಳುಸುದ್ದಿ
"ಇಬ್ಬರ ನಡುವೆ ಅಂತಹ ಯಾವುದೆ ಸಬಂಧವಿಲ್ಲ. ಅವರ ಮನೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ಕಮಲ್ ಜೊತೆ ಡೇಟಿಂಗ್ ಮಾಡುತ್ತಿದ್ದೀನೆ ಎನ್ನುವ ಸುದ್ದಿ ಸುಳ್ಳು. ಹರಿದಾಡುತ್ತಿರುವ ವದಂತಿಯಲ್ಲಿ ಯಾವುದೆ ಸತ್ಯವಿಲ್ಲ, ರೂಮರ್ ಅಷ್ಟೆ" ಎಂದು ಹೇಳಿದ್ದಾರೆ.

ಇಂಡಿಯನ್-2 ಸಿನಿಮಾದಲ್ಲಿ ಕಮಲ್ ಹಸನ್
ಕಮಲ್ ಹಾಸನ್ ಸದ್ಯ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಗಲೆ ಚಿತ್ರೀಕರಣ ಪ್ರಾರಂಭಿಸಿದ್ದು, ಸಾಕಷ್ಟು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಚಿತ್ರಕ್ಕೆ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಯೂ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











