50ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ತಂದೆಯಾದ ಪ್ರಭುದೇವ: ಸಂಭ್ರಮವೋ ಸಂಭ್ರಮ

ಪ್ರಭುದೇವ ಯಾರಿಗೆ ಗೊತ್ತಿಲ್ಲ. ತನ್ನ ಡ್ಯಾನ್ಸ್‌ನಿಂದ ಡಾ.ರಾಜ್‌ಕುಮಾರ್ ಅವರನ್ನೇ ಬೆಚ್ಚಿಬೀಳಿಸಿದ ಡ್ಯಾನ್ಸರ್. ಡ್ಯಾನ್ಸ್ ಪ್ರೇಮಿಗಳು ಇವರನ್ನು ಇಂಡಿಯನ್ ಮೈಕಲ್ ಜಾಕ್ಸನ್ ಅಂತಲೇ ಕರೆಯುತ್ತಾರೆ.

ಈ ಬಹುಮುಖ ಪ್ರತಿಭೆಯ ಪ್ರಭುದೇವ ದೇಶದ ಉದ್ದಗಲಕ್ಕೂ ಫೇಮಸ್. ಇಲ್ಲಿವರೆಗೂ ಡ್ಯಾನ್ಸರ್ ಆಗಿ, ಆಕ್ಟರ್ ಆಗಿ, ಡೈರೆಕ್ಟರ್ ಆಗಿ ಸಿನಿಪ್ರೇಮಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. ಈಗ ಇವರ ಅಭಿಮಾನಿಗಳಿಗೆ ಖುಷಿಪಡುವಂತಹ ಸುದ್ದಿಯೊಂದನ್ನು ನೀಡಿದ್ದಾರೆ.

Prabhu Deva and wife Himani blessed with baby girl: Became Father At 50

ಹೌದು, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ 50ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ಟ್ರೆಂಡಿಂಗ್‌ನಲ್ಲಿದೆ. ಅಷ್ಟಕ್ಕೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಭುದೇವ

ಪ್ರಭುದೇವ ಹಾಗೂ ಎರಡನೇ ಪತ್ನಿ ಹಿಮಾನಿ ಸಿಂಗ್ ಇತ್ತೀಚೆಗೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದರು. ಫಿಜಿಯೋಥೆರಪಿಸ್ಟ್ ಆಗಿರುವ ಹಿಮಾನಿ ಸಿಂಗ್ ಕೋವಿಡ್ ಸಮಯದಲ್ಲಿ ಪರಿಚಯವಾಗಿದ್ದರು. ಆ ಬಳಿಕ ಇಬ್ಬರೂ ಕೇವಲ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದರು.

Prabhu Deva and wife Himani blessed with baby girl: Became Father At 50

ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಈ ಸಂಬಂಧ ಪ್ರಭುದೇವ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಪ್ರಭುದೇವ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಪ್ರಭುದೇವ ಕುಟುಂಬಕ್ಕೆ ಬಂದ ಮೊದಲ ಹೆಣ್ಣು ಮಗು

ಪ್ರಭುದೇವ ಎರಡನೇ ಮದುವೆ ಆಗಿದ್ದರೂ, ಬಹಿರಂಗ ಪಡಿಸಿರಲಿಲ್ಲ. ಕೇವಲ ಕುಟುಂಬದವರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಅವರ ಕುಟುಂಬದವರೇ ಮಾಹಿತಿಯನ್ನು ನೀಡಿದ್ದರು. ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಅದೇ ಮೊದಲ ಬಾರಿಗೆ ಹಿಮಾನಿ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದರು.

ಹೆಣ್ಣು ಮಗು ಜನಿಸಿದ್ದಕ್ಕೆ ಪ್ರಭುದೇವ ಕುಟುಂಬ ಫುಲ್ ಖುಷಿಯಾಗಿದೆ. ಮೂಲಗಳ ಪ್ರಕಾರ, ಇವರ ಕುಟುಂಬದಲ್ಲಿ ಬಹಳ ವರ್ಷಗಳಿಂದ ಹೆಣ್ಣು ಮಗು ಜನಿಸಿರಲಿಲ್ಲ. ಈಗ ಹೆಣ್ಣು ಮಗು ಹುಟ್ಟಿದ್ದಕ್ಕೆ ಅವರ ಇಡೀ ಕುಟುಂಬ ಸಂಭ್ರಮದಲ್ಲಿದೆಯೆಂದು ವರದಿಯಾಗಿದೆ.

ಮೊದಲ ಪತ್ನಿಗೆ ವಿಚ್ಛೇದನ

1995ರಲ್ಲಿ ಪ್ರಭುದೇವ ರಾಮ್‌ಲತ್ ಅನ್ನೋರನ್ನು ಪ್ರೀತಿಸಿ ಮದುವೆ ಆಗಿದ್ದರು. 2011ರಲ್ಲಿ ಪ್ರಭುದೇವ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. ಇವರಿಬ್ಬರ ವಿಚ್ಛೇದನ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಈ ವೇಳೆ ಪ್ರಭುದೇವ ನಟಿ ನಯನತಾರಾ ಜೊತೆ ಡೇಟಿಂಗ್ ನಡೆಸುತ್ತಿದ್ದರು.

ಆದರೆ, ಪ್ರಭುದೇವ ಹಾಗೂ ನಯನತಾರಾ ಇಬ್ಬರ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ. ಇದಾದ ಬಳಿಕ ಪ್ರಭುದೇವ ಮುಂಬೈ ಮೂಲದ ಹಿಮಾನಿ ಅವರನ್ನು ವಿವಾಹವಾಗಿದ್ದಾರೆ. ಸಹೋದರ ರಾಜು ಸುಂದರಂ ಈ ವಿಷಯವನ್ನು ಬಹಿರಂಗ ಪಡಿಸಿದ್ದರು.

More from Filmibeat

English summary
Prabhu Deva and wife Himani blessed with baby girl: Became Father At 50, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X