Prabhu Deva: ಮೊದಲ ಬಾರಿಗೆ ಮಗುವಿನೊಂದಿಗೆ ಪ್ರಭುದೇವ ಪ್ರತ್ಯಕ್ಷ.. ಪತ್ನಿ, ಮಗಳ ಜೊತೆ ತಿಮ್ಮಪ್ಪನ ದರ್ಶನ!

ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಕೆಲವು ದಿನಗಳ ಹಿಂದಷ್ಟೇ ಜನಿಸಿದ ಹೆಣ್ಣು ಮಗುವಿನೊಂದಿಗೆ ತಿರುಪತಿಗೆ ತೆರಳಿದಿದ್ದರು. ಇವರಿಗೆ ಪತ್ನಿಯೂ ಜೊತೆಯಾಗಿದ್ದು, ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದರು.

ಭಾರತದಲ್ಲಿರುವ ಅತ್ಯುತ್ತಮ ಡ್ಯಾನ್ಸರ್‌ಗಳಲ್ಲಿ ಪ್ರಭುದೇವ ಕೂಡ ಒಬ್ಬರು. ಇವರ ಡ್ಯಾನ್ಸ್‌ಗೆ ಮರುಳಾಗದವರೇ ಇಲ್ಲ. ಹಾಗಂತ ಡ್ಯಾನ್ಸರ್ ಅಷ್ಟೇ ಅಲ್ಲ. ನೃತ್ಯ ನಿರ್ದೇಶಕ ಕೂಡ ಹೌದು. ಸಿನಿಮಾ ದಿಗ್ಗಜರಿಗೆ ನೃತ್ಯ ನಿರ್ದೇಶನ ಕೂಡ ಮಾಡಿದ್ದಾರೆ.

Prabhudeva, Tirupati with Wife Daughter

ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ದಳಪತಿ ವಿಜಯ್, ಅಜಿತ್, ಸೂರ್ಯ, ಶಾಹಿದ್ ಕಪೂರ್ ಸೇರಿದಂತೆ ದಿಗ್ಗಜರಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಪ್ರಭುದೇವ ಭಾರತದ ಅತ್ಯಂತ ಕಠಿಣವಾದ ನೃತ್ಯ ನಿರ್ದೇಶಕ ಎಂದು ಇತ್ತೀಚೆಗೆ ನಟಿ ಮೀನಾ ಸಂದರ್ಶನವೊಂದರಲ್ಲಿ ಹೇಳಿದ್ದರು. ವಿಶ್ವದ ಮೂಲೆ ಮೂಲೆಯಲ್ಲಿರುವ ಸಿನಿಮಾ ಪ್ರಿಯರಿಗೆ ಪ್ರಭುದೇವ ಚಿರಪರಿಚಿತ.

ಡ್ಯಾನ್ಸರ್ ಅಷ್ಟೇ ಅಲ್ಲ.. ನಟನೂ ಹೌದು

ಪ್ರಭುದೇವ ಆರಂಭದಲ್ಲಿ ಕೇವಲ ನೃತ್ಯ ನಿರ್ದೇಶಕರಾಗಿ ಪರಿಚಿತರಾದರು. ಬಳಿಕ ನಟನಾಗಿಯೂ ಜನಪ್ರಿಯತೆ ಗಳಿಸಿದರು. ಕೇವಲ ತಮಿಳು ಸಿನಿಮಾಗಳು ಅಷ್ಟೇ ಅಲ್ಲ. ತೆಲುಗು, ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ಈ ಎಲ್ಲಾ ಚಿತ್ರರಂಗದಲ್ಲೂ ನಟನಾಗಿ, ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

ಪ್ರಭುದೇವ ಇತ್ತೀಚೆಗೆ ನಟನೆ, ನೃತ್ಯ ನಿರ್ದೇಶನದ ಜೊತೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾದ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ದುಡಿದಿದ್ದು ಇವರ ಹೆಗ್ಗಳಿಕೆ. ಆದರೆ, ಇವರ ವೈಯಕ್ತಿಕ ಬದುಕು ಮಾತ್ರ ವಿವಾದಗಳು ಆವರಿಸಿಕೊಂಡಿದೆ.

Prabhudeva, Tirupati with Wife Daughter

ಪ್ರಭುದೇವ ವಿವಾದಗಳು

ಮೊದಲ ಪತ್ನಿಗೆ ವಿಚ್ಛೇದನ ನೀಡಲು ಮುಂದಾದಾಗ ಪ್ರಭುದೇವ ವಿವಾದಕ್ಕೆ ಸಿಲುಕಿದ್ದರು. ತನ್ನ ಜೊತೆ ನೃತ್ಯ ಮಾಡುತ್ತಿದ್ದ ರಮಾಲತ್ ಎಂಬುವವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರಿಗೆ ಮೂವರು ಮಕ್ಕಳಿದ್ದರು. ಅದರಲ್ಲಿ ಒಬ್ಬ ಮಗ ಅನಾರೋಗ್ಯದಿಂದ ನಿಧನರಾದರು. ಇದಾದ ಕೆಲವು ದಿನಗಳ ಬಳಿಕ ಲೇಡಿ ಸೂಪರ್‌ಸ್ಟಾರ್ ನಯನತಾರಾ ಪ್ರೀತಿಯಲ್ಲಿ ಬಿದ್ದಿದ್ದರು.

ಹೀಗಾಗಿ ಮೊದಲ ಪತ್ನಿ ರಮಾಲತ್‌ಗೆ ವಿಚ್ಛೇದನವನ್ನು ನೀಡಿದರು. ಇದು ಕೆಲವು ದಿನ ಬೀದಿ ರಂಪಾಟ ಆಗಿತ್ತು. ಡಿವೋರ್ಸ್ ಆದ ಬಳಿಕ ನಯನತಾರಾ ಜೊತೆನೂ ಬೇಕಪ್ ಮಾಡಿಕೊಂಡರು. ಈಗ ಎರಡನೇ ಮದುವೆಯಾಗಿ ಅವರಿಗೊಂದು ಹೆಣ್ಣು ಮಗು ಜನಿಸಿದೆ.

ಪ್ರಭುದೇವ 2ನೇ ಮದುವೆ

ನಯನತಾರಾ ಜೊತೆ ಬ್ರೇಕಪ್ ಮಾಡಿಕೊಂಡ ಬಳಿಕ ಪ್ರಭುದೇವ ಮತ್ಯಾರೊಂದಿಗೂ ಇವರ ಹೆಸರು ತಳುಕು ಹಾಕಿಕೊಂಡಿರಲಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಪ್ರಭುದೇವ ವೈದ್ಯೆ ಹಿಮಾನಿ ಸಿಂಗ್ ಅವರನ್ನು ರಹಸ್ಯವಾಗಿ ಮದುವೆ ಆಗಿದ್ದರು.

ಪ್ರಭುದೇವ ಹಾಗೂ ಹಿಮಾನಿ ಜೋಡಿಗೆ ಇತ್ತೀಚೆಗಷ್ಟೇ ಹೆಣ್ಣು ಮಗು ಜನಿಸಿತ್ತು. ಈ ಬಗ್ಗೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಸಂತಸ ವ್ಯಕ್ತಪಡಿಸಿದ್ದರು. ಕೆಲವು ಸಮಯ ಅವರಿಗಾಗಿ ಮೀಸಲಿಡಲು ನಿರ್ಧರಿಸಿದ್ದಾರೆ. ಅಲ್ಲದೇ ಕೆಲ ಸಮಯ ಸಿನಿಮಾದಿಂದ ದೂರವಿರಲು ತೀರ್ಮಾನಿಸಿದ್ದಾರೆ.

ಮಗುವಿನೊಂದಿಗೆ ತಿಮ್ಮಪ್ಪನ ದರ್ಶನ

ತನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿನೂ ಸಿಕ್ಕಿದೆ. ನಿನ್ನೆ (ಜುಲೈ 20) ಪತ್ನಿ ಹಿಮಾನಿ ಸಿಂಗ್ ಹಾಗೂ ಹೆಣ್ಣು ಮಗುವಿನೊಂದಿಗೆ ತಿರುಪತಿಗೆ ಬಂದಿದ್ದರು. ಇಂದು (ಜುಲೈ 21) ಕುಟುಂಬದೊಂದಿಗೆ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಸದ್ಯ ಪ್ರಭುದೇವ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Prabhu Deva Tirupati visit with wife and daughter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X