ಕಾಮರಾಜ್, ಎಂ.ಕೆ.ಸ್ಟಾಲಿನ್ ಸೋತರು.. ಸಮಾಜ ಅಭಿಮಾನಿ ಆಧಾರಿತ ಅನ್ನೋದು ಸಾಬೀತಾಯ್ತು"- ಪ್ರಕಾಶ್ ರಾಜ್
ಈ ಬಾರಿ ತಮಿಳುನಾಡಿ ರಾಜಕೀಯವೇ ಬದಲಾಗಿದೆ. 2026ರ ಚುನಾವಣೆಯಲ್ಲಿ ದಳಪತಿ ವಿಜಯ್ ಡಿಎಂಕೆ, ಎಐಡಿಎಂಕೆ ಪಕ್ಷಕ್ಕೆ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನ ಜನರು ರಾಜಕೀಯದಲ್ಲಿ ಹೊಸ ಅಲೆಯಲ್ಲಿ ಸೃಷ್ಟಿಸಿದ್ದಾರೆ. ಚೊಚ್ಚಲ ಪ್ರಯತ್ನದಲ್ಲಿಯೇ ವಿಜಯ್ ಗೆದ್ದು ಬೀಗಿದ್ದಾರೆ. ಇದು ರಾಜಕೀಯ ಪಂಡಿತರ ಲೆಕ್ಕಾಚಾರವನ್ನೂ ತಲೆ ಕೆಳಗೆ ಮಾಡಿದೆ.
ವಿಜಯ್ ರಾಜಕೀಯ ಪಕ್ಷ ಕಟ್ಟಿದಾಗ ಸಾಕಷ್ಟು ಮಂದಿ ಟೀಕೆ ಮಾಡಿದ್ದರು. ಕೆಲವು ವಿಜಯ್ ರಾಜಕೀಯ ನಡೆಯನ್ನು ಕಂಡು ಅಪಹಾಸ್ಯ ಮಾಡಿದ್ದರು. ಮತ್ತೆ ಕೆಲವರು ಟೀಕೆ ಮಾಡಿದ್ದರು. ಅದರಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಒಬ್ಬರು. ವಿಜಯ್ ರಾಜಕೀಯ ಪಕ್ಷ ಕಟ್ಟಿದಾಗ ಅಭಿನಂದಿಸಿದ್ದ ಪ್ರಕಾಶ್ ರಾಜ್, ಪ್ರಚಾರದ ವೇಳೆ ತೀವ್ರವಾಗಿ ಟೀಕಿಸಿದ್ದರು.

ರಾಜಕೀಯದ ಬಗ್ಗೆ ಅರಿವಿಲ್ಲ, ಜನರೊಂದಿಗೆ ಬೆರೆಯಲಿಲ್ಲ, ಕಷ್ಟ ಎಂದಾಗ ಅವರೊಂದಿಗೆ ಸ್ಪಂದಿಸಲಿಲ್ಲ. ತಮಿಳು ನಾಡಿ ಜನರ ವಿರುದ್ಧ ಧ್ವನಿ ಎತ್ತಿದ್ದೀರಾ? ಭಾಷೆಯ ವಿರುದ್ಧ ಧ್ವನಿ ಎತ್ತಿದ್ದೀರಾ? ಇದೆಲ್ಲ ಮಾಡದೆ ನೀವು ಸಿಎಂ ಆಗುವುದಕ್ಕೆ ಹೇಗೆ ಹೊರಟಿದ್ದೀರಾ? ಎಂದು ಪ್ರಕಾಶ್ ಪ್ರಶ್ನೆ ಮಾಡಿದ್ದರು. ಆದ್ರೀಗ ಅಲ್ಲಿನ ಜನರು ವಿಜಯ್ ಪಕ್ಷವನ್ನು ಗೆಲ್ಲಿಸಿದ್ದಾರೆ. ತಮಿಳುನಾಡಿನ ಚುನಾವಣಾ ಫಲಿತಾಂಶ ಹೊರ ಬಂದು ವಿಜಯ್ ಗೆಲ್ಲುತ್ತಿದ್ದಂತೆ ಪ್ರಕಾಶ್ ರಾಜ್ ಮತ್ತೊಂದು ಪೋಸ್ಟ್ ಮಾಡಿದ್ದು, "ಸಮಾಜ ಅಭಿಮಾನಿ ಆಧಾರಿತ ಅನ್ನೋದು ಸಾಬೀತಾಯ್ತು" ಎಂದು ಟೀಕಿಸಿದ್ದಾರೆ.
ಪ್ರಕಾಶ್ ರಾಜ್ ರಾಜಕೀಯ ಮುಖಂಡರನ್ನು ನಿರಂತರವಾಗಿ ಟೀಕೆ ಮಾಡುತ್ತಾರೆ. ಅವರಿಗೆ ತಪ್ಪು ಅನಿಸಿದ್ದನ್ನು ತಪ್ಪು ಎಂದು ನೇರವಾಗಿ ಹೇಳಿಬಿಡುತ್ತಾರೆ. ಹೀಗೆ ವಿಜಯ್ ರಾಜಕೀಯ ನಡೆಯನ್ನು ಪ್ರಕಾಶ್ ರಾಜ್ ತೀವ್ರವಾಗಿ ಖಂಡಿಸಿದ್ದರು. ಈಗ ಗೆದ್ದ ಬಳಿಕವೂ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ರು, ತಮಿಳುನಾಡಿನ ಜನತೆಯನ್ನು ಪ್ರಶ್ನೆ ಮಾಡಿದ್ದಾರೆ. ಸಮಾಜ ಅಭಿಮಾನಿ ಆಧಾರಿತ ಅನ್ನೋದು ಸಾಬೀತಾಗಿದೆ ಎಂದು ಹೇಳಿಕೊಂಡಿದ್ದಾರೆ. ಅದರಲ್ಲಿ ಏನಿದೆ ಎಂದು ನೋಡುವುದಾರೇ,
"ನಮಸ್ಕಾರ ತಮಿಳುನಾಡು.. ಕಾಮರಾಜ್ ಸೋತರು.. ಎಂ.ಕೆ.ಸ್ಟಾಲಿನ್ ಸೋಲುಂಡರು. ಇಂದು ಸಮಾಜ ಅಭಿಮಾನಿ ಆಧಾರಿತವಾಗಿದ್ದು, ಅದು ರಾಜಕೀಯವಾಗಿಲ್ಲ ಎಂದು ಸಾಬೀತಾಗಿದೆ. ರಾಜಕೀಯದ ಜಾಗೃತಿಯನ್ನು ಮೂಡಿಸುವ ಕೆಲಸ ಯಾವಾಗಲೂ ವಿರೋಧ ಪಕ್ಷದ್ದು. ನಮ್ಮ ಪ್ರಯಾಣವನ್ನು ಮುಂದುವರಿಸೋಣ. ಗೆದ್ದವರಿಗೆ ಅವರ ಯಶಸ್ವಿ ಸಾರ್ವಜನಿಕ ಸೇವೆಗಾಗಿ ಅಭಿನಂದನೆಗಳು.. #justasking" ಎಂದು ಬರೆದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಮೂಲಕ ತಮಿಳುನಾಡಿನ ಜನರು ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲದ ವಿಜಯ್‌ರನ್ನು ಕೇವಲ ಅಭಿಮಾನದ ಆಧಾರದಿಂದ ಗೆಲ್ಲಿಸಿದ್ದಾಗಿ ಟೀಕಿಸಿದ್ದಾರೆ. ಹಾಗೇ ವಿರೋಧ ಪಕ್ಷ ರಾಜಕೀಯದ ಅರಿವನ್ನು ಮೂಡಿಸುವ ಕೆಲಸ ಮುಂದುವರೆಸುತ್ತೆ ಎಂದು ವಿಜಯ್‌ಗೆ ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದಂತೆ ಇದೆ. ಇತ್ತೀಚೆಗೆ ವಿಜಯ್ ವಿರುದ್ಧ ತಿರುಗಿಬಿದ್ದಿರುವ ಪ್ರಕಾಶ್ ರಾಜ್ ಚುನಾವಣಾ ಪ್ರಚಾರದಲ್ಲೂ ತೀವ್ರವಾಗಿ ಟೀಕಿಸಿದ್ದರು.
"ಸಿನಿಮಾದಲ್ಲಿ ನಟರು ಹೇಗಾದರೂ ಕಾಣಿಸಿಕೊಳ್ಳಬಹುದು. ಡಾಕ್ಟರ್, ಎಂಜಿನಿಯರ್, ಮುಖ್ಯಮಂತ್ರಿ, ರೈತ ಹೀಗೆ ಏನು ಬೇಕಾದರೂ ಆಗಬಹುದು. ಆದರೆ, ರಾಜಕೀಯದ ಬಗ್ಗೆ ಜ್ಞಾನವೇ ಇಲ್ಲದೆ, ಜನರೊಂದಿಗೆ ಬೆರೆಯದೆ, ಅವರ ಕಷ್ಟಗಳಿಗೆ ಸ್ಪಂದಿಸದೆ ಹೇಗೆ ಸಿಎಂ ಆಗೋಕೆ ಸಾಧ್ಯ. ತಮಿಳುನಾಡಿನ ಜನರ ಸಮಸ್ಯೆಗಳ ಬಗ್ಗೆ ನೀವು ಎಂದಾದರೂ ದನಿ ಎತ್ತಿದ್ದೀರಾ? ಭಾಷೆಯ ವಿರುದ್ಧ ಹೋರಾಟ ಮಾಡಿದ್ದೀರಾ?" ಎಂದು ಚುನಾವಣಾ ಪ್ರಚಾರದ ವೇಳೆ ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದರು.
ಹಾಗೇ ಜನರ ಅಭಿಮಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುದ್ದೀರ ಎಂದು ಟೀಕಿಸಿದ್ದರು. ನಿಮ್ಮ ಸಿನಿಮಾ ಬಿಡುಗಡೆಯಾದಾಗ, ಜನರು ಬಿಸಿಲಿನಲ್ಲಿ ನಿಂತು ಕಟೌಟ್ ಹಾಕಿ, ಟಿಕೆಟ್ ಖರೀದಿ ಮಾಡಿ, ನಿಮ್ಮ ಅಭಿನಯದ ಇಷ್ಟ ಆದರೆ, ಶಿಳ್ಳೆ ಹೊಡೆಯಬಹುದು. ಆದರೆ, ಅವರಿಗೆ ದೇಶವನ್ನು ಆಳುವ ಅಧಿಕಾರ ಕೊಡಲು ಸಾಧ್ಯವೇ ಇಲ್ಲ. ರಾಜಕೀಯವೇ ಬೇರೆ.. ಸಿನಿಮಾವೇ ಬೇರೆ ಎಂದು ಪ್ರಕಾಶ್ ರಾಜ್ ಟೀಕಿಸಿದ್ದರು.


Click it and Unblock the Notifications
