ಹುಡುಗರು' ಚಿತ್ರದ ನಟಿ ಅಭಿನಯ ವಿಶಾಲ್ ಜೊತೆ ಡೇಟಿಂಗ್‌ನಲ್ಲಿದ್ದರೇ? ತಮ್ಮ ಸಂಬಂಧದ ಬಗ್ಗೆ ಏನಂತಾರೆ?
ಪುನೀತ್ ರಾಜ್‌ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ನಟಿಸಿದ್ದ 'ಹುಡುಗರು' ಕನ್ನಡದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದಲ್ಲಿ ಮೂವರ ಅಭಿನಯವನ್ನು ಮೆಚ್ಚಿ ಹೊಗಳಿದವರೇ ಇಲ್ಲ. ಆದರೆ, ಇವರೊಂದಿಗೆ ರಾಧಿಕಾ ಪಂಡಿತ್ ನಟನೆಯನ್ನೂ ಹೊಗಳಿ ಅಟ್ಟಕ್ಕೇರಿಸಿದ್ದರು. ಆದರೆ, ಇವರನ್ನೆಲ್ಲ ಹೊರತು ಪಡಿಸಿದ ಇನ್ನೊಬ್ಬರ ನಟಿ ಗಮನ ಸೆಳೆದಿದ್ದರು ಅವರೇ ಅಭಿನಯ.
ಶ್ರೀನಗರ ಕಿಟ್ಟಿಗೆ ಜೋಡಿಯಾಗಿ ನಟಿಸಿದ್ದ ಅಭಿನಯ ಕನ್ನಡಿಗರ ಮನಗೆದ್ದಿದ್ದರು. ವಿಶೇಷ ಅಂದರೆ, ಇವರಿಗೆ ಹುಟ್ಟಿನಿಂದಲೇ ಕಿವಿನೂ ಕೇಳಿಸುವುದಿಲ್ಲ. ಮಾತಾಡಲು ಬರುವುದಿಲ್ಲ. ಇಂತಹ ಸವಾಲುಗಳನ್ನು ಇಟ್ಟುಕೊಂಡು ಸಿನಿಮಾರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ತಮಿಳು, ಕನ್ನಡ, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಅಭಿನಯದ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ವೇಳೆ ತಮ್ಮ ವೃತ್ತಿ ಬದುಕು, ವೈಯಕ್ತಿಕ ಬದುಕು ಹಾಗೂ ತಮಿಳು ನಟ ವಿಶಾಲ್ ಜೊತೆಗಿನ ಡೇಟಿಂಗ್ ಹಾಗೂ ಮದುವೆ ಬಗೆಗಿನ ಸುದ್ದಿಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅಲ್ಲದೇ 15 ವರ್ಷಗಳಿಂದ ನನಗೆ ಬಾಯ್‌ಫ್ರೆಂಡ್ ಇದ್ದಾನೆ ಎಂದು ಹೇಳಿಕೊಂಡಿದ್ದಾರೆ. ಸಂದರ್ಶನದ ಈ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ಏನಿದೆ ಎಂದು ನೋಡುವುದಾರೇ..
ನಟಿ ಅಭಿನಯ ಸಂದರ್ಶನದಲ್ಲಿ ಕೆಲವು ಪರ್ಸನಲ್ ವಿಷಯಗಳನ್ನು ತೆರೆದಿಟ್ಟಿದ್ದಾರೆ. ನಾನು ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ. ನನಗೂ ಒಬ್ಬ ಗೆಳೆಯನಿದ್ದಾನೆ. ಸುಮಾರು 15 ವರ್ಷಗಳಿಂದ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ. ಅವನೊಂದಿಗೆ ನಾನು ಯಾವುದೇ ವಿಷಯದ ಬಗ್ಗೆ ಮಾತಾಡಬಲ್ಲೆ. ನಮ್ಮಿಬ್ಬರ ಮಾತುಕತೆಯಲ್ಲಿ ಯಾವುದೇ ಜಡ್ಜ್‌ಮೆಂಟ್ ಇರುವುದಿಲ್ಲ. ನಾವಿಬ್ಬರು ಬಾಲ್ಯದ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ತಮಿಳು ನಟ ವಿಶಾಲ್ ಹಾಗೂ ಅವರ ಡೇಟಿಂಗ್ ಹಾಗೂ ಮದುವೆ ಬಗ್ಗೆ ಹಬ್ಬಿದ್ದ ಸುದ್ದಿಯ ಬಗ್ಗೆನೂ ಕ್ಲಾರಿಟಿ ಕೊಟ್ಟಿದ್ದಾರೆ. ಇತ್ತೀಚೆಗೆ ವಿಶಾಲ್ ಅವರನ್ನು ನೋಡಿದೆ. ವೇದಿಕೆ ಮೇಲೆ ಅವರ ಕೈಗಳು ನಡುಗುತ್ತಿದ್ದವು. ಅವರಿಗೆ ಈ ಬಗ್ಗೆ ಮೇಸೆಜ್ ಮಾಡಿದ್ದೆ. ಅದಕ್ಕೆ ಅವರು ವೈಲರ್ ಫೀವರ್ ಎಂದು ಹೇಳಿದ್ದರು. ಈಗ ಅವರು ಆರಾಮಾಗಿದ್ದಾರೆ. ಅವರು ಒಳ್ಳೆಯ ವ್ಯಕ್ತಿ. ಅವರೊಂದಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಹಾಗೇ ವಿಶಾಲ್ ಹಾಗೂ ಅಭಿನಯ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಗುಟ್ಟಾಗಿ ಮದುವೆ ಆಗಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬಂದಿತ್ತು. ಈ ಬಗ್ಗೆನೂ ತಮಿಳು ನಟಿ ಅಭಿನಯ ಪ್ರತಿಕ್ರಿಯೆ ನೀಡಿದ್ದಾರೆ. ವಿಶಾಲ್ ಪ್ರಪೋಸ್ ಮಾಡಿ ತನ್ನನ್ನು ಮದುವೆ ಆದ ಅನ್ನೋ ವದಂತಿಗಳು ಹಬ್ಬಿದ್ದವು. ಅದೆಲ್ಲವೂ ಸುಳ್ಳು. ಇಂತಹ ಸುಳ್ಳು ಸುದ್ದಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಅಭಿನಯ ವಿಶೇಷ ಚೇತನ ನಟಿಯಾಗಿದ್ದರಿಂದ ಆರಂಭದ ದಿನಗಳಲ್ಲಿ ಇವರ ಪ್ರತಿಭೆಯನ್ನು ಚಿತ್ರರಂಗ ಕಡೆಗಣಿಸಿತ್ತು. ಕಿವಿ ಕೇಳಿದ, ಮಾತು ಬಾರದ ಹುಡುಗಿ ಹೇಗೆ ನಟನೆ ಮಾಡಬಹುದು ಎಂದು ಅನುಮಾನಗಳಿಂದ ನೋಡುತ್ತಿದ್ದರು. ಆದರೆ, ನಾವು ಸಹ ಸಮರ್ಥರು ಎಂದು ತೋರಿಸುವುದಕ್ಕೆ ಚಿತ್ರರಂಗದಲ್ಲಿ ಸಾಹಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಶನದಲ್ಲಿ ತನ್ನ ತಾಯಿಯ ಬಗ್ಗೆನೂ ನೆನಪುಗಳನ್ನು ಮಾಡಿಕೊಂಡಿದ್ದಾರೆ.


Click it and Unblock the Notifications











