ನಟಿಯರ ಒಪ್ಪಿಗೆ ಇಲ್ಲದೆ ಚುಂಬಿಸುತ್ತಿದ್ದರೇ ಕಮಲ್ ಹಾಸನ್; ಈ ನಟನ ವಿರುದ್ಧ ನಟಿಯರ 'ಮುತ್ತಿನ' ಆರೋಪವೇನು?
ಮಲಯಾಳಂ ಚಿತ್ರರಂಗದ ಕಾಮಕಾಂಡ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಸ್ಟಾರ್ ನಟರು ಹಾಗೂ ನಿರ್ದೇಶಕರ ವಿರುದ್ಧ ಕೆಲವು ನಟಿಯರು ಗಂಭೀರವಾದ ಲೈಂಗಿಕ ಕಿರುಕುಳದ ಆರೋಪ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ದಕ್ಷಿಣ ಭಾರತದ ಜನಪ್ರಿಯ ನಟಿ ರಾಧಿಕಾ ಶರತ್‌ಕುಮಾರ್ ಕೂಡ ಮಲಯಾಳಂ ಚಿತ್ರರಂಗದ ಮತ್ತೊಂದು ಕರಾಳ ಮುಖವನ್ನು ಬಿಚ್ಚಿಟ್ಟಿದ್ದರು.
ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಬೆತ್ತಲೆ ದೃಶ್ಯಗಳಿಗಾಗಿ ಕ್ಯಾರಾವಾನ್‌ನಲ್ಲಿ ಹಿಡನ್ ಕ್ಯಾಮರಾ ಇಟ್ಟಿರುತ್ತಿದ್ದರು ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ರಾಧಿಕಾ ಶರತ್‌ಕುಮಾರ್ ಹೇಳಿಕೆ ಸಂದರ್ಶನವೊಂದು ಮತ್ತೆ ವೈರಲ್ ಆಗುತ್ತಿದೆ. ಇದರಲ್ಲಿ ತಮಿಳಿನ ನಟನ ಬಲವಂತವಾಗಿ ಕಿಸ್ ಮಾಡುವ ಬಗ್ಗೆ ಮಾತಾಡಿದ್ದಾರೆ. ರಾಧಿಕಾ ಪರೋಕ್ಷವಾಗಿ ಕಮಲ್ ಹಾಸನ್ ವಿರುದ್ಧ ಹೇಳಿದ್ದಾರೆಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಈ ಹಿಂದೆ ಮತ್ತೊಬ್ಬ ಹಿರಿಯ ನಟಿ ರೇಖಾ ಉರ್ಫ್ ರೇಖಾ ಹ್ಯಾರೀಸ್ ಕೂಡ ಕಮಲ್ ಹಾಸನ್ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಕಮಲ್ ಹಾಸನ್ ಬಲವಂತವಾಗಿ ತನ್ನ ಒಪ್ಪಿಗೆ ಇಲ್ಲದೆ ಕಿಸ್ ಮಾಡಿದ್ದರು ಎಂದು ಹೇಳಿದ್ದರು. ಅದೂ ಕೂಡ ಇತ್ತೀಚೆಗೆ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಅಷ್ಟಕ್ಕೂ ಈ ಇಬ್ಬರು ಹಿರಿಯರು ನಟಿಯರು ಹೇಳಿದ್ದೇನು?
ಕೆಲವು ತಿಂಗಳ ಹಿಂದೆ ರಾಧಿಕಾ ಶರತ್ ಕುಮಾರ್ ಸಂದರ್ಶವೊಂದನ್ನು ನೀಡಿದ್ದರು. ಆ ಸಂದರ್ಶನದ ವೇಳೆ "ಒಬ್ಬ ಜನಪ್ರಿಯ ನಟ, ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವುದರಲ್ಲಿ ಫೇಮಸ್. ನನ್ನನ್ನು ಹಾಗೂ ನನ್ನ ಕಿರಿಯ ಸಹೋದರಿಯನ್ನು ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವಂತೆ ಒತ್ತಡ ಹಾಕಿ, ಕಿರುಕುಳ ನೀಡಲಾಗಿತ್ತು" ಎಂದು ರಾಧಿಕಾ ಶರತ್‌ಕುಮಾರ್ ಹೇಳಿದ್ದರು. ಆದರೆ, ಆ ನಟ ಯಾರು ಅನ್ನುವುದನ್ನು ಮಾತ್ರ ಬಹಿರಂಗಗೊಳಿಸಿರಲಿಲ್ಲ.

ಅದೇ ರಾಧಿಕಾ ಶರತ್‌ಕುಮಾರ್ ಸಂದರ್ಶನದ ವಿಡಿಯೋ ವೈರಲ್ ಮತ್ತೆ ವೈರಲ್ ಆಗುತ್ತಿದೆ. ನೆಟ್ಟಿಗರು ರಾಧಿಕಾ ಶರತ್‌ಕುಮಾರ್ ಹೇಳಿದ್ದು ಕಮಲ್ ಹಾಸನ್ ಬಗ್ಗೆನೇ ಎಂದು ಬೊಟ್ಟು ಮಾಡುತ್ತಿದ್ದಾರೆ. ಕಮಲ್ ಹಾಸನ್ ಸಿನಿಮಾಗಳಲ್ಲಿ ಇಂತಹ ಕಿಸ್ಸಿಂಗ್ ದೃಶ್ಯಗಳು ಇರುತ್ತವೆ. ಈ ಹಿಂದೆ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಚುಂಬನದ ದೃಶ್ಯಗಳು ಇವೆ. ಈ ಕಾರಣಕ್ಕೆ ಕೆಲವು ನಟಿಯರು ನಟಿಸುವುದಕ್ಕೆ ಹಿಂದೇಟು ಹಾಕುತ್ತಿದ್ದರು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ರೇಖಾ ಅಲಿಯಾಸ್ ರೇಖಾ ಹ್ಯಾರೀಸ್ 'ಕಾದಲೋರ ಕವಿಥೈಗಳ್' ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದ ಬಳಿಕ 'ಪುನ್ನಗೈ ಮನ್ನನ್' ಅನ್ನುವ ಸಿನಿಮಾದಲ್ಲಿ ಕಮಲ್ ಹಾಸನ್‌ಗೆ ನಾಯಕಿಯಾಗಿ ನಟಿಸಿದ್ದರು. ಕೆ.ಬಾಲಚಂದರ್ ಈ ಸಿನಿಮಾವನ್ನ ನಿರ್ದೇಶಿಸುತ್ತಿದ್ದರು. ಈ ಸಿನಿಮಾ ದೃಶ್ಯವೊಂದರಲ್ಲಿ ಕಮಲ್ ಹಾಸನ್ ಇದೇ ರೇಖಾ ಹ್ಯಾರೀಸ್‌ಗೆ ಅವರ ಒಪ್ಪಿಗೆ ಇಲ್ಲದೆ ಮುತ್ತಿಟ್ಟಿದ್ದರು ಅಂತ ವಿವಾದ ಎದ್ದಿತ್ತು.
ರೇಖಾ ಯಾವುದೇ ಸಂದರ್ಶನ ನೀಡಿದರೂ, ಈ ವಿಷಯ ಪ್ರಸ್ತಾಪ ಆಗುತ್ತಲೇ ಇತ್ತು. ಈ ಕಾರಣಕ್ಕೆ 2019ರಲ್ಲಿ ನ್ಯೂಸ್ ಮಿನಿಟ್‌ಗೆ ನೀಡಿದ ಸಂದರ್ಶನದಲ್ಲಿ ರೇಖಾ ಈ ಘಟನೆಯ ಬಗ್ಗೆ ವಿವರಿಸಿದ್ದಾರೆ. ಆ ದೃಶ್ಯ ಬೇಕು ಅಂತ ನಿರ್ದೇಶಕರು ಹೇಳಿದರು. ಕಮಲ್ ಹಾಸನ್ ನಟಿಸಿದರು. ಸಿನಿಮಾಗೆ ದೃಶ್ಯದ ಅವಶ್ಯಕತೆ ಇತ್ತು" ಎಂದಿದ್ದರು. ಆದರೆ, ಈ ಬಗ್ಗೆ ಯಾರೊಂದಿಗೂ ದೂರನ್ನು ನೀಡಲಿಲ್ಲ. ಕಮಲ್ ಹಾಸನ್‌ರಿಂದ ಕ್ಷಮೆಯನ್ನು ಬಯಸಲಿಲ್ಲ. ಅಲ್ಲದೆ ಆ ಸಂದರ್ಶನದಲ್ಲಿ ಮತ್ತೆ ಆ ವಿಷಯವನ್ನು ಕೆದಕುವುದಕ್ಕೆ ಸಿದ್ಧಳಿಲ್ಲ ಎಂದು ಹೇಳಿಕೊಂಡಿದ್ದರು.


Click it and Unblock the Notifications











