ಕರ್ನಾಟಕದಿಂದ ತಮಗಾದ ನಷ್ಟದ ಲೆಕ್ಕ ಸುಪ್ರೀಂ ಮುಂದಿಟ್ಟ 'ಥಗ್‌ ಲೈಫ್' ನಿರ್ಮಾಪಕರು

ಮಣಿರತ್ನಂ ನಿರ್ದೇಶನದ 'ಥಗ್‌ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಕಮಲ್ ತಮ್ಮ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಹೈಕೋರ್ಟ್ ಹೇಳಿತ್ತು. ಕಮಲ್ ಹೇಳಿಕೆಗೂ 'ಥಗ್‌ ಲೈಫ್' ಸಿನಿಮಾ ಬಿಡುಗಡೆಯನ್ನು ತಡೆಯುವುದಕ್ಕೂ ಸಂಬಂಧವಿಲ್ಲ ಎಂದು ಕೋರ್ಟ್ ಹೇಳಿದೆ.

ಸದ್ಯ ಕರ್ನಾಟಕದಲ್ಲಿ 'ಥಗ್‌ ಲೈಫ್' ಸಿನಿಮಾ ಬಿಡುಗಡೆಗೆ ಇದ್ದ ಅಡ್ಡಿ ದೂರಾಗಿದೆ. ಮುಂದಿನ ವಾರವೇ ಸಿನಿಮಾ ತೆರೆಗೆ ತರಲು ಪ್ರಯತ್ನ ನಡೀತಿದೆ ಎನ್ನಲಾಗ್ತಿದೆ. ಜೂನ್ 5ರಂದು ಬೇರೆ ಭಾಗಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹುತೇಕ ಕಡೆಗಳಲ್ಲಿ ಒಂದೇ ವಾರಕ್ಕೆ ಸಿನಿಮಾ ತೆಗೆದು ಹಾಕಲಾಗಿದೆ. ಬಾಕ್ಸಾಫೀಸ್‌ನಲ್ಲಿ ಚಿತ್ರ ಮುಗ್ಗರಿಸಿ ನಿರ್ಮಾಪಕರಿಗೆ ನಷ್ಟ ಎದುರಾಗಿದೆ.

Raj Kamal Films reveals a loss of 30 Cr due to the film not releasing in Karnataka

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಕರ್ನಾಟಕದಲ್ಲಿ 'ಥಗ್‌ ಲೈಫ್' ಸಿನಿಮಾ ರಿಲೀಸ್ ಆಗದ ಕಾರಣ ತಮಗಾದ ನಷ್ಟದ ಬಗ್ಗೆ ನಿರ್ಮಾಪಕರು ಹೇಳಿದ್ದಾರೆ. ರಾಜ್ಯದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಕಲ್ಪಿಸದ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು ಗೊತ್ತೇಯಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಳಿತ್ತು. ನಿನ್ನೆ (ಜೂನ್ 19) ಅರ್ಜಿಯ ವಿಚಾರಣೆ ಮತ್ತೆ ನಡೆದಿತ್ತು.

ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿ 'ಥಗ್ ಲೈಫ್' ಸಿನಿಮಾದ ಮೇಲೆ ಯಾವುದೇ ನಿಷೇಧ ಹೇರಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ಒಂದುವೇಳೆ ಸಿನಿಮಾ ಬಿಡುಗಡೆಯಾದರೆ ಸೂಕ್ತ ಭದ್ರತೆಯನ್ನು ನೀಡುವುದಾಗಿಯೂ ರಾಜ್ಯ ಸರ್ಕಾರ ತಿಳಿಸಿತ್ತು. ರಾಜ್ಯ ಸರ್ಕಾರ ಭರವಸೆ ಬಳಿಕ, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅನಧಿಕೃತ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಜೂನ್ 19 ರ ಗುರುವಾರ ಮುಕ್ತಾಯಗೊಳಿಸಿತು.

ಇದೇ ವೇಳೆ 'ಥಗ್ ಲೈಫ್' ಸಿನಿಮಾ ನಿರ್ಮಾಪಕರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸತೀಶ್ ಪರಾಶರನ್, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯಾಗದ ಕಾರಣ ಸುಮಾರು 30 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದರು. ಆದರೂ ಈಗ ರಾಜ್ಯಸರ್ಕಾರ ಸಿನಿಮಾ ಬಿಡುಗಡೆಗೆ ಒಪ್ಪಿರುವುದು ತೃಪ್ತಿ ತಂದಿದೆ ಎಂದಿದ್ದಾರೆ.

'ಥಗ್ ಲೈಫ್' ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗದೇ 30 ಕೋಟಿ ರೂ. ನಷ್ಟವಾಯ್ತಾ? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕಮಲ್ ಹಾಸನ್ ಸಿನಿಮಾಗಳಲ್ಲಿ ಕರ್ನಾಕದಲ್ಲಿ ಅಷ್ಟು ದೊಡ್ಡ ಕ್ರೇಜ್ ಆಗಲಿ, ಮಾರ್ಕೆಟ್ ಆಗಲಿ ಇಲ್ಲ. ಒಂದು ವೇಳೆ ಕಮಲ್ ವಿವಾದ ಸೃಷ್ಟಿಸಿಕೊಳ್ಳದೇ ಸಿನಿಮಾ ಬಿಡುಗಡೆ ಆಗಿದ್ದರೂ 5ರಿಂದ 10 ಕೋಟಿ ರೂ. ಕಲೆಕ್ಷನ್ ಮಾತ್ರ ಆಗುತ್ತಿತ್ತು. ಇನ್ನು ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿದರೆ 10 ಕೋಟಿ ರೂ. ಕಲೆಕ್ಷನ್ ಮಾಡುವುದು ಕೂಡ ಕಷ್ಟವಿತ್ತು. ಹಾಗಿರುವಾಗ 30 ಕೋಟಿ ರೂ. ನಷ್ಟವಾಗಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಸುಪ್ರೀಂ ಒಪ್ಪಿಗೆ ಸಿಕ್ಕರೂ ವಿತರಕರು ಹಿಂದೇಟು ಹಾಕುತ್ತಿದ್ದಾರೆ. ವೆಂಕಟೇಶ್ ಎಂಬುವವರು ವಿತರಣೆ ಹಕ್ಕು ಕೊಂಡುಕೊಂಡಿದ್ದರು. ಆದರೆ ಚಿತ್ರದಿಂದ ನಷ್ಟವಾಗುವ ಭೀತಿ ಎದುರಾಗಿದ್ದ ನಾವು ಸಿನಿಮಾ ಬಿಡುಗಡೆ ಮಾಡಲ್ಲ ಎನ್ನುತ್ತಿದ್ದಾರೆ. ನಮ್ಮ ಅನುಮತಿ ಇಲ್ಲದೇ ಬೇರೆ ವಿತರಕರು ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

ಸದ್ಯ ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಗ್ಗೆ ಯಾವುದೇ ನಿರೀಕ್ಷೆಯಿಲ್ಲ. ತಮಿಳು ಪ್ರೇಕ್ಷಕರೇ ಸಿನಿಮಾ ನೋಡಿ ಬೇಸರಗೊಂಡಿದ್ದಾರೆ. ಟ್ರೋಲ್ ಮಾಡಿ ಕರ್ನಾಟಕ ಪ್ರೇಕ್ಷಕರು ಸಿನಿಮಾ ನೋಡದೇ ಬಚಾವಾದರು ಎಂದಿದ್ದಾರೆ. ಹಾಗಾಗಿರುವಾದ ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾದರೂ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಗುವುದು ಅನುಮಾನ.

More from Filmibeat

English summary
We have lost around 30 CR as Thug Life was not released in Karnataka says Raj Kamal Films International
Read more about: kamal haasan box office kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X