For Quick Alerts
  ALLOW NOTIFICATIONS  
  For Daily Alerts

  ರಜನಿ ನಿರ್ಧಾರ ಬೇಸರ ತಂದಿದೆ, ಆದರೆ ಅವರ ಆರೋಗ್ಯ ನನಗೆ ಮುಖ್ಯ: ಕಮಲ್ ಹಾಸನ್

  |

  ರಜನೀಕಾಂತ್ ತಮ್ಮ ಆರೋಗ್ಯ ಸಮಸ್ಯೆ ಮುಂದಿಟ್ಟು, ರಾಜಕೀಯ ಪ್ರವೇಶ ನಿರ್ಧಾರದಿಂದ ಹಿಂದೆ ಸರಿದ ವಿಷಯವನ್ನು ಇಂದು ಬೆಳಿಗ್ಗೆ ಘೋಷಿಸಿದ್ದಾರೆ.

  ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಮತ್ತೊಬ್ಬ ಸೂಪರ್ ಸ್ಟಾರ್, ರಜನೀಕಾಂತ್ ಗೆಳೆಯ ಹಾಗೂ ರಾಜಕಾರಣಿ ಕಮಲ್ ಹಾಸನ್, 'ರಜನಿಕಾಂತ್ ನಿರ್ಧಾರ ಬೇಸರ ತಂದಿದೆ' ಎಂದಿದ್ದಾರೆ.

  ಇಂದು ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಮಲ್ ಹಾಸನ್, 'ಪ್ರಚಾರ ಸಭೆ ಮುಗಿಯುವ ಒಳಗಾಗಿ ನಾನು ಅವರನ್ನು (ರಜನಿ) ಭೇಟಿ ಮಾಡುವೆ, ನನ್ನ ರಜನಿಯ ಆರೋಗ್ಯವೇ ನನಗೆ ಮುಖ್ಯ, ಆತ ಎಲ್ಲಿದ್ದರೂ ಚೆನ್ನಾಗಿಯೇ ಇರಬೇಕು' ಎಂದಿದ್ದಾರೆ ರಜನೀಕಾಂತ್.

  ರಜನೀಕಾಂತ್ ರಾಜಕೀಯ ಪಕ್ಷ ಆರಂಭಿಸುತ್ತೇನೆ ಎಂದಾಗ ಕಮಲ್ ಹಾಸನ್ ಅದನ್ನು ಸ್ವಾಗತಿಸಿದ್ದರು, ಆದರೆ ತಾವು ರಜನೀಕಾಂತ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದೂ ಸಹ ರಜನೀಕಾಂತ್ ಹೇಳಿದ್ದರು.

  ಈಗ ತಮ್ಮ ಗೆಳೆಯ ರಾಜಕೀಯ ಪಕ್ಷ ಸ್ಥಾಪಿಸುವುದರಿಂದ ಹಿಂದೆ ಉಳಿದಿರುವ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಿಪಡಿಸಿದ್ದಾರೆ ಅಷ್ಟೇ ಅಲ್ಲದೆ, ಅವರೊಂದಿಗೆ ಈ ಬಗ್ಗೆ ಮಾತನಾಡುವುದಾಗಿ ಸಹ ಹೇಳಿದ್ದಾರೆ ಕಮಲ್ ಹಾಸನ್.

  ರಜನೀಕಾಂತ್ ಅವರು, ಡಿಸೆಂಬರ್ 31 ರಂದು ತಮ್ಮ ಹೊಸ ಪಕ್ಷದ ಘೋಷಣೆ ಮಾಡುವುದಾಗಿ ಹೇಳಿದ್ದರು. ಆದರೆ ಆರೋಗ್ಯ ಸಮಸ್ಯೆ ಎದುರಾದ ಕಾರಣ ಸಕ್ರಿಯ ರಾಜಕೀಯ ಪ್ರವೇಶ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಇಂದು ಬೆಳಿಗ್ಗೆ ಘೋಷಿಸಿದರು ರಜನೀಕಾಂತ್.

  English summary
  Kamal Haasan said its sad that Rajinikant took back his decision of not entering politics, on the other hand he also said My Rajini's health is also important for me.
  Tuesday, December 29, 2020, 17:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X