"ಜೈಲರ್‌ನಲ್ಲಿ ಡಿಲೀಟ್ ಮಾಡಿದ ದೃಶ್ಯವೇ? ರಜನಿಗೆ ಕಣ್ಣು ಕಾಣಲ್ವಾ?": ವಿಜಯ್ ಫ್ಯಾನ್ಸ್‌ನಿಂದ ಟ್ರೋಲ್

ನಿನ್ನೆ (ಡಿಸೆಂಬರ್ 12) ರಜನಿಕಾಂತ್ ತನ್ನ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ರಜನಿಕಾಂತ್ ನಟಿಸುತ್ತಿರುವ 170ನೇ ಸಿನಿಮಾದ ಟೈಟಲ್ ಹಾಗೂ ಅದಕ್ಕೊಂದು ಟೀಸರ್ ಅನ್ನು ರಿಲೀಸ್ ಮಾಡಿತ್ತು. ಆ ಟೀಸರ್ ರಜನಿಕಾಂತ್ ಅಭಿಮಾನಿಗಳಿಗೆ ಇಷ್ಟ ಆಗಿದ್ದರೆ, ಇತ್ತ ದಳಪತಿ ವಿಜಯ್ ಫ್ಯಾನ್ಸ್ ಹೆವೀ ಟ್ರೋಲ್ ಮಾಡುತ್ತಿದ್ದಾರೆ.

ಸೂರ್ಯ ನಟಿಸಿದ 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ ಟಿ.ಎಸ್. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ರಜನಿಕಾಂತ್ ನಟಿಸುತ್ತಿರುವ 170ನೇ ಸಿನಿಮಾ. ಈ ಸಿನಿಮಾ ಸಾಮಾಜಿಕ ಕಳಕಳಿಯನ್ನು ಇರುವ ಸಿನಿಮಾ ಇರಬಹುದು. ಅದಕ್ಕೆ ತಕ್ಕಂತೆ ಟೈಟಲ್ ಇಟ್ಟಿರಬಹುದೆಂದು ನಿರೀಕ್ಷೆ ಮಾಡಲಾಗಿತ್ತು.

Rajinikanth 170th movie Vettaiyan title teaser trolled by vijay fans

ಆದರೆ, ರಜನಿಕಾಂತ್ ಇಮೇಜ್‌ಗೆ ತಕ್ಕಂತೆ ಟೈಟಲ್ ಇಡಲಾಗಿದೆ. ರಜನಿ ನಟಿಸಿದ 'ಚಂದ್ರಮುಖಿ' ಫ್ಲ್ಯಾಶ್ ಬ್ಯಾಕ್‌ನಲ್ಲಿ 'ವೆಟ್ಟೈಯಾನ್' ಅವತಾರವೆತ್ತಿ ಬರುತ್ತಾರೆ. ಅದನ್ನೇ ಟೈಟಲ್ ಆಗಿ ಇಡಲಾಗಿದೆ. 170ನೇ ಸಿನಿಮಾದ ಮೊದಲ ಟೀಸರ್ ರಜನಿ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಅದೇ ದಳಪತಿ ವಿಜಯ್ ಫ್ಯಾನ್ಸ್ ಆಡಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.

ರಜನಿಕಾಂತ್ ಸಿನಿಮಾ 'ವೆಟ್ಟೈಯಾನ್' ಟೈಟಲ್ ಟೀಸರ್ ಅಂದಕೊಂಡಿದ್ದಕ್ಕಿಂತ ಅರ್ಧ ಗಂಟೆ ತಡವಾಗಿಯೇ ರಿಲೀಸ್ ಆಗಿತ್ತು. ಅದಕ್ಕೆ ರಜನಿಕಾಂತ್ ಅಭಿಮಾನಿಗಳು ಒಂದಿಷ್ಟು ಹಿಡಿ ಶಾಪ ಹಾಕಿದ್ದಂತೂ ನಿಜ. ಕೊನೆಗೂ ಈ ಟೀಸರ್ ತಲೈವಾ ಅಭಿಮಾನಿಗಳಿಗಂತೂ ಸಖತ್ ಕಿಕ್ ಕೊಟ್ಟಿದೆ. ಆದರೆ, ವಿಜಯ್ ಫ್ಯಾನ್ಸ್ ಮಾತ್ರ ಡಿಸೈನ್ ಡಿಸೈನ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.

Rajinikanth 170th movie Vettaiyan title teaser trolled by vijay fans

"ರಜನಿಯ 170ನೇ ಸಿನಿಮಾ 'ವೆಟ್ಟೈಯಾನ್'ನಲ್ಲಿ ಅಂತಹ ವಿಶೇಷತೆ ಏನೂ ಇಲ್ಲ. ಇದು ಕೂಡ ಜೈಲರ್ ಸಿನಿಮಾವನ್ನೇ ಹೋಲುತ್ತಿದೆ." ಕೆಲ ವಿಜಯ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ರಜನಿಕಾಂತ್ ಕೂಲಿಂಗ್ ಗ್ಲಾಸ್ ಹಾಕೊಂಡು ಬೆತ್ತ ಹಿಡಿದು ಬರುತ್ತಿರುವ ದೃಶ್ಯವನ್ನು ಕಂಡು "ರಜನಿಗೆ ಕಣ್ಣು ಕಾಣುತ್ತಿಲ್ಲವೇ" ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು "ವೆಟ್ಟೈಯಾನ್ ಇದು ಜೈಲರ್ ಸಿನಿಮಾದಲ್ಲಿ ಡಿಲೀಟ್ ಮಾಡಿದ ದೃಶ್ಯವೇ" ಎಂದು ಆಡಿಕೊಂಡಿದ್ದಾರೆ. ಇದೆಲ್ಲಾ ಏನೇ ಇದ್ದರೂ ರಜನಿಕಾಂತ್ 170ನೇ ಸಿನಿಮಾ ಕೆಲವು ವಿಷಯಗಳಿಗೆ ಗಮನ ಸೆಳೆದಿವೆ. ಬಿಜಿಎಂ ಅನಿರುದ್ಧ್ ಎಂದು ವಿಭೀನ್ನ ಶೀರ್ಷಿಕೆ ನೀಡಿದ್ದಾರೆ. ರಜನಿಕಾಂತ್ ಪಂಚಿಂಗ್ ಡೈಲಾಗ್ ಹೇಳುತ್ತಲೇ ರಣಹದ್ದು ಎಂದು ಸದ್ದು ಮಾಡಿದ್ದಾರೆ.

'ವೆಟ್ಟೈಯಾನ್' ಸಿನಿಮಾದ ಜೊತೆಗೆ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿರುವ 'ಲಾಲ್ ಸಲಾಂ' ಸಿನಿಮಾದಲ್ಲೂ ರಜನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿನ ರಜನಿ ಝಲಕ್ ಅನ್ನೂ ರಿಲೀಸ್ ಮಾಡಲಾಗಿದೆ. ಈ ಎರಡೂ ಬರ್ತ್‌ಡೇ ಟೀಸರ್‌ಗಳು ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

More from Filmibeat

English summary
Thalapathy Vijay fans trolling Rajinikanth 170th movie Vettaiyan title teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X