Rajinikanth 171: ಆರೋಗ್ಯ ತಪಾಸಣೆಗೆ ಅಮೆರಿಕಕ್ಕೆ ತೆರಳಲಿರೋ ರಜನಿ.. ತಲೈವಾ-ಲೋಕೇಶ್ ಸಿನಿಮಾ ಈ ವರ್ಷ ಸೆಟ್ಟೇರಲ್ಲ!

ಒಂದ್ಕಡೆ ಸೂಪರ್‌ಸ್ಟಾರ್ ರಜನಿಕಾಂತ್. ಮತ್ತೊಂದು ಕಡೆ ಲೋಕೇಶ್ ಕನಗರಾಜ್. ಇಬ್ಬರ ಕ್ರೇಜಿ ಕಾಂಬಿನೇಷನ್‌ನಲ್ಲಿ ಈಗಾಗಲೇ ಹೊಚ್ಚ ಹೊಸ ಸಿನಿಮಾ ಅನೌನ್ಸ್ ಆಗಿದೆ. ರಜನಿಕಾಂತ್ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುವುದು ಫಿಕ್ಸ್ ಆಗಿದೆ.

ಇತ್ತ ರಜನಿಕಾಂತ್ 'ಜೈಲರ್' ಸಿನಿಮಾ ಮೆಗಾ ಹಿಟ್ ಆಗುತ್ತಿದ್ದಂತೆ 171ನೇ ಸಿನಿಮಾ ಯಾವಾಗ ಶುರುವಾಗುತ್ತೋ ಅಂತ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಆದರೆ, ರಜನಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಒಂದಿದೆ.

ಡೆಡ್ಲಿ ಕಾಂಬಿನೇಷನ್ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಸಿನಿಮಾ ಸದ್ಯಕ್ಕಂತೂ ಸೆಟ್ಟೇರಲ್ಲ. ಈ ವರ್ಷ ಅಂತೂ ಅಸಾಧ್ಯ ಅಂತಾನೇ ಹೇಳಲಾಗುತ್ತಿದೆ. ಅದಕ್ಕೆ ರಜನಿ ಅಮೆರಿಕ ತೆರಳುತ್ತಿರೋದು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಏನಿದೆ ಅಸಲಿ ಕಾರಣ? ಅನ್ನೋದನ್ನು ತಿಳಿಯಲು ಮುಂದೆ ಓದಿ.

rajinikanth-171-lokesh-kanagaraj

ಈ ವರ್ಷ ರಜನಿ 171 ಸಿನಿಮಾ ಸೆಟ್ಟೇರಲ್ಲ

ಹೌದು, ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಸಿನಿಮಾ ಶುರುವಾಗುವುದನ್ನೇ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ, ಇವರಿಬ್ಬರ ಸಿನಿಮಾ ಈ ವರ್ಷ ಸೆಟ್ಟೇರುವುದಿಲ್ಲ ಅನ್ನೋದು ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಆದಷ್ಟು ಬೇಗ ಆರಂಭ ಆದರೆ, ಮತ್ತೊಂದು ಮೆಗಾ ಕಾಂಬಿನೇಷನ್ ಸಿನಿಮಾವನ್ನು ಆದಷ್ಟು ಬೇಗ ಕಣ್ತುಂಬಿಕೊಳ್ಳಬಹುದು ಅನ್ನೋ ಆಸೆಯಲ್ಲಿದ್ದರು.

ಮುಂದಿನ ವರ್ಷಕ್ಕೆ ರಜನಿ 171 ಶುರು

ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್ ಸಿನಿಮಾ ಈ ವರ್ಷ ಅಂತೂ ಸೆಟ್ಟೆರಲ್ಲ ಅನ್ನೋದು ಕಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ. ಮೂಲಗಳ ಪ್ರಕಾರ, ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಸಿನಿಮಾ 2024, ಮಾರ್ಚ್ ತಿಂಗಳಲ್ಲಿ ಆರಂಭ ಆಗುತ್ತಿದೆ. ಹೀಗಾಗಿ ಸದ್ಯ ಈ ಜೋಡಿ ಸಿನಿಮಾ ಸೆಟ್ಟೇರುವ ಯಾವುದೇ ಲಕ್ಷಣಗಳೂ ಇಲ್ಲ.

rajinikanth-171-lokesh-kanagaraj

ಆರೋಗ್ಯ ತಪಾಸಣೆ ಅಮೆರಿಕಗೆ ರಜನಿ

'ಜೈಲರ್' ಸಿನಿಮಾದ ಯಶಸ್ಸಿನ ಬೆನ್ನನಲ್ಲೇ ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯ ತಪಾಸಣೆಗೆ ಅಮೆರಿಕಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ರಜನಿಕಾಂತ್ ಪ್ರತಿ ವರ್ಷದಂತೆ ಈ ವರ್ಷ ಕೂಡ ಅಮೆರಿಕಗೆ ತೆರಳುತ್ತಿದ್ದಾರೆ. ಅಲ್ಲಿ ಆರೋಗ್ಯ ತಪಾಸಣೆ ನಡೆಯುವ ಬೆನ್ನಲ್ಲೇ ಒಂದು ವರ್ಷಗಳ ಕಾಲ ಅಲ್ಲಿ ಇರುತ್ತಾರೆ. ಹಾಗೇ ಮಗಳೇ ನಿರ್ದೇಶನ 'ಲಾಲ್ ಸಲಾಂ' ಹಾಗೂ ಜೈ ಭೀಮ್ ನಿರ್ದೇಶಕನ ಸಿನಿಮಾದ ಆಕ್ಟೀವಿಟಿಯಲ್ಲಿ ಭಾಗವಹಿಸಲಿದ್ದಾರೆ.

ಲೋಕೇಶ್ ಕನಗರಾಜ್ ಬ್ಯುಸಿ

ಲೋಕೇಶ್ ಕನಗರಾಜ್ ನಿರ್ದೇಶನ 'ಲಿಯೋ' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಈಗಾಗಲೇ ಸಿನಿಮಾದ ಪ್ರಚಾರ ಆರಂಭ ಆಗಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿದೆ. ಹೀಗಾಗಿ ಲೋಕೇಶ್ 'ಲಿಯೋ' ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಲಿಯೋ' ರಿಲೀಸ್ ಆಗುತ್ತಿದ್ದಂತೆ 'ರಜನಿ 171' ಸ್ಕ್ರಿಪ್ಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ.

More from Filmibeat

English summary
Rajinikanth 171 Directed by Lokesh Kanagaraj movie on 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X