2023ರಲ್ಲಿ ರಜನಿಕಾಂತ್ ಬಳಿ ಇರುವ ಒಟ್ಟು ಆಸ್ತಿ ಎಷ್ಟು? ಕಟ್ಟಿದ ಆದಾಯ ತೆರಿಗೆ ಎಷ್ಟು?
ಡಿಸೆಂಬರ್ ತಿಂಗಳು ರಜನಿಕಾಂತ್ ಅಭಿಮಾನಿಗಳಿಗೆ ಸಂಭ್ರಮ. ಯಾಕಂದ್ರೆ, ಡಿಸೆಂಬರ್ 12ರಂದು ತಲೈವಾ ಹುಟ್ಟುಹಬ್ಬ. ಹೀಗಾಗಿ ಒಂದು ತಿಂಗಳಿನಿಂದಲೇ ಹುಟ್ಟುಹಬ್ಬದ ಸಂಭ್ರಮ ಜೋರಾಗಿರುತ್ತೆ. ಈ ಬಾರಿ ಕೂಡ ರಜನಿ 73ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ.
ಇಂದು ರಜನಿಕಾಂತ್ (ಡಿಸೆಂಬರ್ 12) ಹುಟ್ಟುಹಬ್ಬವನ್ನು ವಿಶ್ವದಾದ್ಯಂತ ಆಚರಣೆ ಮಾಡುತ್ತಿದ್ದಾರೆ. ರಜನಿಗೆ ಭಾರತ ಅಷ್ಟೇ ಅಲ್ಲ ಜಪಾನ್, ಮಲೇಷ್ಯಾ, ದಕ್ಷಿಣ ಕೊರಿಯಾ, ಅಮೆರಿಕಾ, ಯುಕೆ, ದುಬೈನಲ್ಲಿ ಅಭಿಮಾನಿಗಳು ಇದ್ದಾರೆ. 'ಜೈಲರ್' ಮೆಗಾ ಹಿಟ್ ಆದ ಬೆನ್ನಲ್ಲೇ ರಜನಿ ಬರ್ತ್‌ಡೇ ಸಂಭ್ರಮ ಕೂಡ ಅಷ್ಟೇ ಜೋರಾಗಿದೆ.

'ಜೈಲರ್' ಮೂಲಕ ಮತ್ತೆ ಟ್ರ್ಯಾಕ್‌ಗೆ ಮರಳಿರೋ ಸೂಪರ್‌ಸ್ಟಾರ್ ಗಳಿಕೆಯಲ್ಲೂ ಏರಿಕೆಯಾಗಿದೆ. ತಲೈವಾ 2023ರಲ್ಲಿ ರಜನಿಕಾಂತ್ ಬಳಿ ಇರುವ ಆಸ್ತಿ ಎಷ್ಟು? 'ಜೈಲರ್' ಸಿನಿಮಾಗಾಗಿ ರಜನಿ ಪಡೆದ ಸಂಭಾವನೆ ಎಷ್ಟು? ಎಷ್ಟು ತೆರಿಗೆ ಪಾವತಿ ಮಾಡಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಸೂಪರ್‌ಸ್ಟಾರ್ ಆಸ್ತಿಯ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಒಂದು ಕಾಲದಲ್ಲಿ ಏಷ್ಯಾದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ಎರಡನೇ ನಟ ಅನ್ನುವ ಬಗ್ಗೆನೂ ವರದಿಯಾಗಿತ್ತು. ರಜನಿ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಟೈಮ್ಸ್ ನೌ ವರದಿ ಮಾಡಿರುವ ಪ್ರಕಾರ, ರಜನಿಕಾಂತ್ ಬಳಿ 2023ರ ವೇಳೆಗೆ 55 ಮಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಅಂದರೆ, ರಜನಿಕಾಂತ್ ಬಳಿ ಸುಮಾರು 437 ಕೋಟಿ ರೂಪಾಯಿ ಆಸ್ತಿಯಿದೆ ಎಂದು ವರದಿ ಮಾಡಲಾಗಿದೆ.

ಎರಡು ವರ್ಷಗಳಿಂದ ಸತತ ಸೋಲುಗಳಿಂದ ಕಂಗೆಟ್ಟಿದ್ದ ರಜನಿಕಾಂತ್ 'ಜೈಲರ್' ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಈ ಸಿನಿಮಾದಿಂದ ರಜನಿಕಾಂತ್ ಸುಮಾರು 110 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆಂದು ವರದಿಯಾಗಿದೆ.
ಸೂಪರ್‌ಸ್ಟಾರ್ 2023ರಲ್ಲಿ ಕಟ್ಟಿದೆ ತೆರಿಗೆ, ಗಳಿಸಿದ ಆಸ್ತಿ, ಹೂಡಿಕೆ, ಕಾರುಗಳು ಸೇರಿದಂತೆ, ವಾಸವಿರುವ ಮನೆಯ ಬೆಲೆ ಎಲ್ಲವನ್ನೂ ಹಲವು ಮಾಧ್ಯಮಗಳು ಹುಟ್ಟುಹಬ್ಬದ ಈ ಸಂದರ್ಭದಲ್ಲಿ ವರದಿ ಮಾಡಿವೆ.
ರಜನಿಕಾಂತ್ ಒಟ್ಟು ಆಸ್ತಿ
ಒಟ್ಟು ಆಸ್ತಿ $55 ಮಿಲಿಯನ್ (Rs. 437 ಕೋಟಿ)
ಸರಾಸರಿ ಸಂಭಾವನೆ Rs. 50 ಕೋಟಿ
ಹೂಡಿಕೆ ಮಾಡಿರುವ ಹಣ Rs. 110 ಕೋಟಿ
ದುಬಾರಿ ಕಾರುಗಳು Rs. 2.5 ಕೋಟಿ
ತೆರಿಗೆ Rs. 13 ಕೋಟಿ
ಜೈಲರ್‌ನಿಂದ ಸಂಭಾವನೆ Rs. 110 ಕೋಟಿ
ಜಾಹೀರಾತು Nil
ಇದು ರಜನಿಕಾಂತ್ ಹುಟ್ಟುಹಬ್ಬದಂದು ಹಲವು ಮಾಧ್ಯಮಗಳು ವರದಿ ಮಾಡಿರುವ ಒಟ್ಟು ಆಸ್ತಿಯ ಮೌಲ್ಯ. ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಈ ವರದಿಯನ್ನು ನೀಡಲಾಗಿದೆ. ಆದರೆ, ಇದನ್ನೇ ಅಧಿಕೃತ ಎಂದು ಪರಿಗಣಿಸುವಂತಿಲ್ಲ. ರಜನಿಕಾಂತ್ ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಒಬ್ಬರು. ಅಲ್ಲದೆ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ರಜನಿಕಾಂತ್ ಬಳಿ ಮೂರು ದುಬಾರಿ ಕಾರುಗಳಿವೆ. ಇನ್ನೋವಾ ಕ್ರಿಸ್ಟಾ, ರೇಂಜ್ ರೋವರ್, ಹಾಗೂ ಬೆಂಟ್ಲಿ ಕಾಡುಗಳಿವೆ. ಚೆನ್ನೈನಲ್ಲಿ ಒಂದು ಕಲ್ಯಾಣ ಮಂಟಪವನ್ನು ಕಟ್ಟಿದ್ದಾರೆ. ಇಷ್ಟೇ ಅಲ್ಲದೆ, ಬೇರೆ ಬೇರೆ ಕಡೆಗಳಲ್ಲಿ ಅಪಾರ್ಟ್‌ಮೆಂಟ್ ಅನ್ನು ಹೊಂದಿದ್ದಾರೆ. ಚೆನ್ನೈನ ದುಬಾರಿ ಏರಿಯಾ ಪೋಯಿಸ್ ಗಾರ್ಡನ್‌ನಲ್ಲಿರುವ ಮನೆಯ ಬಲೆ 50 ರಿಂದ 60 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.


Click it and Unblock the Notifications











