Thalaivar 170: ಶೂಟಿಂಗ್ ಸ್ಪಾಟ್‌ನಲ್ಲಿ ರಜನಿ - ಅಮಿತಾಭ್.. ವೈರಲ್ ಆಯ್ತು ಫೋಟೋ!

ಸೂಪರ್‌ಸ್ಟಾರ್ ರಜನಿಕಾಂತ್ ಹೊಸ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಶುರುವಾಗಿದೆ. 170ನೇ ಸಿನಿಮಾದ ಮೊದಲ ಹಂತ ಶೂಟಿಂಗ್ ಮುಗಿದಿದ್ದು, ಈ ಸಿನಿಮಾ ಫೋಟೊ ಒಂದನ್ನು ಲೈಕಾ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ರಜನಿಕಾಂತ್ ನಟಿಸುತ್ತಿರುವ 170ನೇ ಸಿನಿಮಾದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಈ ವಿಷಯ ಈಗಾಗಲೇ ಲೈಕಾ ಸಂಸ್ಥೆನೇ ರಿವೀಲ್ ಮಾಡಿತ್ತು. ಈಗ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಶೆಹೆನ್‌ಷಾ ಅಮಿತಾಭ್ ಬಚ್ಚನ್ ಶೂಟಿಂಗ್ ಸ್ಪಾಟ್‌ನಲ್ಲಿ ಜೊತೆಗಿರುವ ಫೋಟೋವನ್ನು ರಿಲೀಸ್ ಮಾಡಿದೆ. ಇದೇ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

thalaiva-170-rajinikanth-amithabh-bachchan

'ಜೈಲರ್' ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೂಪರ್‌ಸ್ಟಾರ್ ಫುಲ್ ಆಕ್ಟೀವ್ ಆಗಿದ್ದಾರೆ. ಸತತ ಸೋಲುಗಳನ್ನು ಕಂಡಿದ್ದ ರಜನಿಕಾಂತ್‌ಗೆ ಮೆಗಾ ಹಿಟ್ ಸಿಕ್ಕಂತಾಗಿತ್ತು. ಹೀಗಾಗಿ 170ನೇ ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಅದರಲ್ಲೂ ಅಮಿತಾಭ್ ಬಚ್ಚನ್ ತಂಡ ಸೇರಿಕೊಂಡ ಬಳಿಕ ತಲೈವಾ ಫ್ಯಾನ್ಸ್ ಮತ್ತಷ್ಟು ಥ್ರಿಲ್ ಆಗಿದ್ದಾರೆ.

'ತಲೈವಾ 170' ಫಸ್ಟ್ ಶೆಡ್ಯೂಲ್

'ಜೈಲರ್' ಶೂಟಿಂಗ್ ನಡೆಯುತ್ತಿರುವಾಗಲೇ ರಜನಿಕಾಂತ್ 170ನೇ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿತ್ತು. 'ಜೈ ಭೀಮ್' ಸಿನಿಮಾದ ನಿರ್ದೇಶಕ ಟಿ.ಎಸ್.ಜ್ಞಾನವೇಲ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ರಜನಿಕಾಂತ್ ಲುಕ್ ಟೆಸ್ಟ್‌ ಮಾಡಿದ ಬಳಿಕವೇ ಶೂಟಿಂಗ್ ಶುರುವಾಗಿತ್ತು. ಮೊದಲ ಶೆಡ್ಯೂಲ್ ಅನ್ನು ಕೇರಳದ ತಿರುವನಂತಪುರಂನಿಂದ ಆರಂಭ ಮಾಡಲಾಗಿತ್ತು. ಈ ಸಿನಿಮಾ ಕೂಡ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ರಜನಿ ಈ ಸಂದರ್ಭದಲ್ಲಿ ಹಿಂಟ್ ಕೊಟ್ಟಿದ್ದರು. ಈಗ ಲೈಕಾ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದು, ದಿಗ್ಗಜರಿಬ್ಬರ ಫೋಟೊ ರಿಲೀಸ್ ಮಾಡಿದೆ.

ತಿರುವನಂತಪುರಂ To ಮುಂಬೈ

'ಜೈ ಭೀಮ್' ನಿರ್ದೇಶಕ ಟಿ.ಎಸ್.ಜ್ಞಾನವೇಲ್ ವೇಗವಾಗಿ ಶೂಟಿಂಗ್ ಮುಗಿಸುತ್ತಿದ್ದಾರೆ. ತಿರುವನಂತಪುರಂನಿಂದ ಶುರುವಾಗಿದ್ದ ಶೂಟಿಂಗ್ ಕನ್ಯಾಕುಮಾರಿಗೆ ಶಿಫ್ಟ್ ಆಗಿತ್ತು. ಅಲ್ಲಿಂದ ತಿರುನೆಲ್ವಿಲಿ ಕಡೆ ಸಾಗಿತ್ತು. ಈಗ ಮೊದಲ ಹಂತದ ಚಿತ್ರೀಕರಣ ಮುಂಬೈನಲ್ಲಿ ಮುಕ್ತಾಯಗೊಂಡಿದೆ. ಇದೇ ವೇಳೆ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಜೊತೆಗಿರುವ ಫೋಟೋವನ್ನು ರಿವೀಲ್ ಮಾಡಲಾಗಿದೆ.

3 ದಶಕಗಳ ಬಳಿಕ ರಜನಿ-ಬಿಗ್ ಬಿ

ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಇಬ್ಬರೂ ಆತ್ಮೀಯ ಸ್ನೇಹಿತರು. ಈ ಹಿಂದೆ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಕಳೆದ ಮೂರು ದಶಕಗಳಿಂದ ಈ ಜೋಡಿ ಒಟ್ಟಿಗೆ ನಟಿಸಿರಲಿಲ್ಲ. ಈಗ 33 ವರ್ಷಗಳ ಬಳಿಕ ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ದಿಗ್ಗಜರಿಬ್ಬರ ಅಭಿಮಾನಿಗಳಿಗೆ ಖಂಡಿತಾ ಹಬ್ಬ. ಮೊದಲ ದಿನವೇ ಬಿಗ್ ಬಿ ಜೊತೆ ಫೋಟೊ ತೆಗೆಸಿಕೊಂಡು "33 ವರ್ಷದ ಬಳಿಕ ಮತ್ತೆ ನನ್ನ ಗುರು ಅಮಿತಾಭ್ ಬಚ್ಚನ್ ಜೊತೆ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯ ಸಂತೋಷದಿಂದ ಮಿಡಿಯುತ್ತಿದೆ" ಎಂದು ಪೋಸ್ಟ್ ಮಾಡಿದ್ದರು.

ಸಿನಿಮಾದಲ್ಲಿ ಸ್ಟಾರ್‌ಗಳ ಸಮಾಗಮ

ರಜನಿಕಾಂತ್ 170ನೇ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಜೊತೆಗೆ ದೊಡ್ಡ ತಾರಾಗಣವೇ ನಟಿಸುತ್ತಿದೆ. ಫಕತ್ ತುಳಸಿ, ಮಂಜು ವಾರಿಯರ್, ರಿತಿಕಾ ಸಿಂಗ್, ತುಷಾರಾ ಭಯಾನ್, ರಾಣಾ ದಗ್ಗುಪಾಟಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಅನಿರುದ್ಧ್ ಈ ಸಿನಿಮಾಗೂ ಸಂಗೀತ ನೀಡುತ್ತಿದ್ದಾರೆ. ಸದ್ಯ ಅಮಿತಾಭ್ ಬಚ್ಚನ್ ಸೋಫಾ ಮೇಲೆ ಕುಳಿತಿದ್ದು, ರಜನಿಕಾಂತ್ ಭುಜದ ಮೇಲೆ ಕೈಯಿಟ್ಟಿರು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More from Filmibeat

English summary
Rajinikanth Amitabh Bachchan seen on the set of thalaivar 170 in mumbai photo goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X