ಒಂದೆ ಸಿನಿಮಾದಲ್ಲಿ ರಜನಿ- ಕಮಲ್: ನನಸಾಯ್ತು ಅಭಿಮಾನಿಗಳ ವರ್ಷಗಳ ಕನಸು

ಭಾರತೀಯ ಚಿತ್ರರಂಗ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಸಕಲಕಲಾವಲ್ಲಭ ಕಮಲ್ ಹಾಸನ್ ಇಬ್ಬರನ್ನು ಒಂದೆ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಅನೇಕ ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದಾರೆ. ಇಬ್ಬರು ಕೊನೆಯದಾಗಿ ನೆನೈಥಲೆ ಇನಿಕ್ಕುಮ್ ಸಿನಿಮಾ ನಂತರ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ.

ಈ ಸಿನಿಮಾ ನಂತರ ಇಂಡಸ್ಟ್ರಿಯಲ್ಲಿ ಇಬ್ಬರು ಉತ್ತಮ ಸ್ನೇಹಿತರು. ಈ ಸಿನಿಮಾ ರಿಲೀಸ್ ಆಗಿ ಸುಮಾರು 40 ವರ್ಷಗಳ ಮೇಲಾಗಿದೆ. ಆದರೆ ನಂತರ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸುಮಾರು ನಾಲ್ಕು ದಶಕಗಳ ನಂತರ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಹೌದು, ಇಬ್ಬರು ಸೂಪರ್ ಸ್ಟಾರ್ಸ್ ಒಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಲೈವರ್ ಮುಂದಿನ ಸಿನಿಮಾಗೆ ಕಮಲ್ ಹಾಸನ್ ಕೂಡ ಜೊತೆಯಾಗಲಿದ್ದಾರಂತೆ. ರಜನಿಕಾಂತ್ ಸದ್ಯ ತಲೈವರ್ 168 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಕಮಲ್ ಹಾಸನ್ ಇಂಡಿಯನ್-2 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Rajinikanth And Kamal Haasan Together In Film After Decades

ಈ ಎರಡು ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಕಮಲ್ ಮತ್ತು ರಜನಿ ಸಿನಿಮಾ ಸೆಟ್ಟೇರಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ವಿಶೇಷ ಅಂದರೆ ಸಿನಿಮಾ ಕಮಲ್ ಹಾಸನ್ ಅವರ ರಾಜ್ ಕಮಲ್ ಬ್ಯಾನಲ್ ನಲ್ಲಿ ಮೂಡಿ ಬರಲಿದೆ. ಈ ಸಿನಿಮಾದಲ್ಲಿ ಕಮಲ್ ಸಂಪೂರ್ಣವಾಗಿ ಕಾಣಿಸಿಕೊಳ್ಳುವುದು ಅನುಮಾನ, ಚಿತ್ರದಲ್ಲಿ ಗೆಸ್ಟ್ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ. ಸದ್ಯ ವಿಜಯ್ ಗೆ ಮಾಸ್ಟರ್ ಸಿನಿಮಾ ನಿರ್ದೇಶನ ಮಾಡುತ್ತಿರುವ ಲೋಕೇಶ್ ಈ ಸಿನಿಮಾ ನಂತರ ರಜನಿ ಮತ್ತು ಕಮಲ್ ಜೊತೆ ಸೇರಿಕೊಳ್ಳಲಿದ್ದಾರೆ. ಈ ಬಹುನಿರೀಕ್ಷೆಯ ಸಿನಿಮಾ ಏಪ್ರಿಲ್ ನಲ್ಲಿ ಸೆಟ್ಟೇರಲಿದೆ.

More from Filmibeat

English summary
Tamil Super star Rajinikanth and Kamal Haasan together in film after decades.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X