ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಕೂಲಿ'ಗೆ ವಿದೇಶದಲ್ಲಿ ಬಾರಿ ಬೇಡಿಕೆ; ಅತೀ ದೊಡ್ಡ ಮೊತ್ತಕ್ಕೆ ಸೇಲ್
2025ರ ಸೆಕೆಂಡ್ ಹಾಫ್‌ನಲ್ಲಿ ರಿಲೀಸ್ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ 'ಕೂಲಿ' ಕೂಡ ಒಂದು. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಮೊದಲ ಬಾರಿಗೆ ಒಟ್ಟಿಗೆ ಸೇರಿರುವ ಸಿನಿಮಾ. ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ರಜನಿಕಾಂತ್ ಅಭಿಮಾನಿಗಳು ಈ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.
'ಕೂಲಿ' ಸಿನಿಮಾ ಬಿಡುಗಡೆ ಇನ್ನೇನು ಕೆಲವೇ ತಿಂಗಳು ಬಾಕಿ ಇವೆ ಅಷ್ಟೇ. ಇನ್ನೂ ಫಸ್ಟ್ ಲುಕ್ ರಿಲೀಸ್ ಮಾಡಿದ್ದಷ್ಟೇ ಆಗಲೇ ವಿದೇಶದಿಂದ ಸೂಪರ್‌ಸ್ಟಾರ್ ಸಿನಿಮಾ ಬೇಡಿಕೆ ಬಂದಿದೆ. ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ತಮಿಳು ಸಿನಿಮಾ ಆಗಿದ್ದರಿಂದ ದೊಡ್ಡ ಮೊತ್ತಕ್ಕೆ ಓವರ್‌ಸೀಸ್ ಹಕ್ಕುಗಳು ಮಾರಾಟ ಆಗಿದೆ. ಈ ಆಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾಗೆ ಭಾರೀ ಬೇಡಿಕೆ ಇದ್ದಿದ್ದರಿಂದ ಒಳ್ಳೆಯ ಡೀಲ್ ಮಾಡಿದೆ ಎಂದು ಹೇಳಲಾಗಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಬೇರೆ ಬೇರೆ ಭಾಷೆಯ ದಿಗ್ಗಜರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಕೂಲಿ ಕ್ರೇಜಿ ವಿದೇಶದವರೆಗೂ ಹರಡಿದೆ ಎನ್ನಲಾಗಿದೆ. ಅದರಲ್ಲೂ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಅಂತಹ ಅಪರೂಪದ ಕಾಂಬಿನೇಷನ್ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಹಾಗಿದ್ದರೆ, ಓವರ್‌ಸೀನ್ ವಿತರಣೆಯ ಹಕ್ಕು ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ ಎಂದು ತಿಳಿಯುವುದಕ್ಕೆ ಮುಂದೆ ಓದಿ.
'ಕೂಲಿ' ಸಿನಿಮಾದ ವಿದೇಶಿ ಹಕ್ಕುಗಳು ಸುಮಾರು ₹68 ಕೋಟಿ ರೂಪಾಯಿಗಳಿಗೆ ಮಾರಾಟ ಆಗಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ಈ ಸಿನಿಮಾದ ಓವರ್‌ಸೀಸ್ ಹಕ್ಕುಗಳನ್ನು ಆಯಂಗರನ್ ಇಂಟರ್‌ನ್ಯಾಷನಲ್ ಖರೀದಿ ಮಾಡಿದ್ದಾಗಿ ವರದಿಯಾಗಿದೆ. ಇದು ತಮಿಳು ಚಿತ್ರರಂಗದಲ್ಲೇ ಎರಡನೇ ಅತೀ ದೊಡ್ಡ ಡೀಲ್ ಎಂದು ಬಣ್ಣಿಸಲಾಗಿದೆ. ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಿನಿಮಾ ಖರೀದಿ ಆಗಿರಲಿಲ್ಲ ಎಂದು ಹೇಳಲಾಗಿದೆ.
ಇನ್ನೊಂದು ಕಡೆ ರಜನಿಕಾಂತ್ ವೃತ್ತಿ ಬದುಕಿನಲ್ಲೇ ಇಷ್ಟು ದೊಡ್ಡ ಮೊತ್ತಕ್ಕೆ ಓವರ್‌ಸೀಸ್ ವಿತರಣೆಯ ಹಕ್ಕು ಮಾರಾಟ ಆಗಿಲ್ಲ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಮೆಗಾ ಹಿಟ್ ಆಗಿರುವ 'ಜೈಲರ್', '2.0' ಅಂತಹ ಸಿನಿಮಾಗಳ ದಾಖಲೆಯನ್ನೂ ಕೂಡ ಮೀರಿಸಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ 'ಜೈಲರ್' ಸಿನಿಮಾ ₹35 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಇದು ದುಪ್ಪಟ್ಟು ಹಣವನ್ನು ಗಳಿಸಿದ್ದರಿಂದ 'ಕೂಲಿ' ಬೃಹತ್ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ.

'ಕೂಲಿ' ಸಿನಿಮಾ ಇಷ್ಟೊಂದು ಹೈಪ್ ಸೃಷ್ಟಿಯಾಗುವುದಕ್ಕೆ ಕಾರಣವಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ನಾಗಾರ್ಜುನ, ಉಪೇಂದ್ರ ಹಾಗೂ ಆಮಿರ್ ಖಾನ್ ಅತಿಥಿ ಪಾತ್ರಗಳಲ್ಲಿ ಎಂಟ್ರಿ ಕೊಡುತ್ತಿದ್ದಾರೆ. 'ಕೂಲಿ' ಗಗನಕ್ಕೆ ಏರುವುದಕ್ಕೆ ಇದೂ ಒಂದು ಕಾರಣ. ಇಲ್ಲಿವರೆಗೂ ಅತೀ ಹೆಚ್ಚು ಮೊತ್ತಕ್ಕೆ ಓವರ್‌ಸೀಸ್ ಡೀಲ್ ಆಗಿರುವ ಸಿನಿಮಾಗಳ ಪಟ್ಟಿಯನ್ನು ಪಿಂಕ್ ವಿಲ್ಲಾ ವರದಿ ಮಾಡಿದೆ.
ವಿಜಯ್ - ಜನನಾಯಗನ್ - ₹75 ಕೋಟಿ
ರಜನಿಕಾಂತ್ - ಕೂಲಿ- ₹68 ಕೋಟಿ
ಕಮಲ್ ಹಾಸನ್ - ಥಗ್ ಲೈಫ್ - ₹63 ಕೋಟಿ
ವಿಜಯ್- ಲಿಯೋ- ₹60 ಕೋಟಿ
ವಿಜಯ್ - G.O.A.T- ₹53 ಕೋಟಿ
'ಜೈಲರ್' ಸೂಪರ್ ಸಕ್ಸಸ್ ಬಳಿಕ 'ಕೂಲಿ' ಸಿನಿಮಾದ ಬಜೆಟ್ ಏರಿಕೆಯಾಗಿತ್ತು. 375 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಿದ್ದು, ಈಗಾಗಲೇ ಸ್ಯಾಟಲೈಟ್, ಡಿಜಿಟಲ್ ಹಾಗೂ ಮ್ಯೂಸಿಕ್ ರೈಟ್ಸ್‌ನಿಂದಲೇ 230 ರಿಂದ 240 ಕೋಟಿ ರೂಪಾಯಿಯನ್ನು ಕಲೆ ಹಾಕಿದೆ ಎಂದೂ ವರದಿಗಳಾಗಿವೆ. ಇನ್ನು ಥಿಯೇಟರ್‌ಗಳಲ್ಲಿ ಈ ಸಿನಿಮಾ ಅದ್ಯಾವ ಮಟ್ಟಿಗೆ ಮೋಡಿ ಮಾಡಲಿದೆ ಎಂದು ನೋಡಬೇಕಿದೆ.


Click it and Unblock the Notifications











