"ಹದ್ದು-ಕಾಗೆ ಕಥೆ ಹೇಳಿ ವಿಜಯ್ ಟಾರ್ಗೆಲ್ ಮಾಡಿಲ್ಲ.. ನಮ್ಮಿಬ್ರನ್ನೂ ಹೋಲಿಕೆ ಮಾಡ್ಬೇಡಿ"; ಸೂಪರ್‌ಸ್ಟಾರ್ ರಜನಿ

ತಮಿಳು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ದಳಪತಿ ವಿಜಯ್ ಫ್ಯಾನ್ಸ್ ಕಿತ್ತಾಡುತ್ತಲೇ ಇರುತ್ತಾರೆ. ಇಬ್ಬರ ಸಿನಿಮಾ ರಿಲೀಸ್ ಆದಾಗ ಫ್ಯಾನ್ಸ್ ವಾರ್ ಮತ್ತೆ ಮುನ್ನಲೆಗೆ ಬಂದು ಬಿಡುತ್ತೆ. ರಜನಿ ಫ್ಯಾನ್ಸ್ ವಿಜಯ್ ಜೊತೆ ಹೋಲಿಕೆ ಮಾಡೋದು, ವಿಜಯ್ ಫ್ಯಾನ್ಸ್ ರಜನಿ ಜೊತೆ ಹೋಲಿಕೆ ಮಾಡಿ ಟೀಕೆ ಮಾಡೋದು ನಡೆಯುತ್ತಲೇ ಇರುತ್ತೆ.

'ಜೈಲರ್' ಸಿನಿಮಾ ಆಡಿಯೋ ಲಾಂಚ್ ವೇಳೆ ರಜನಿ ಹೇಳಿದ ಹದ್ದು-ಕಾಗೆ ಕಥೆ ತಮಿಳುನಾಡಿನಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. "ಹದ್ದಿನ ಗಾತ್ರ ಹಾಗೂ ಅದರ ತಾಕತ್ತು ಏನು ಅನ್ನೋದನ್ನು ಕಾಗೆ ಅರ್ಥ ಮಾಡಿಕೊಳ್ಳುವುದಿಲ್ಲ. ಹದ್ದಿನ ಜೊತೆ ಹೋರಾಟ ಮಾಡುವುಕ್ಕೆ ಹೋಗುತ್ತೆ. ಹದ್ದು ಎಷ್ಟು ಎತ್ತರಕ್ ಹಾರುತ್ತದೋ ಅಷ್ಟು ಎತ್ತರಕ್ಕೆ ಎಂದಿಗೂ ಕಾಗೆ ಹಾರಾಲು ಸಾಧ್ಯವಿಲ್ಲ" ಎಂದು ರಜನಿ ಹೇಳಿದ್ದರು.

Rajinikanth denies targeting Thalapathy Vijay in Lal Salaam audio launch

ಈ ಕಥೆಯನ್ನು ವಿಜಯ್‌ರನ್ನು ಟಾರ್ಗೆಟ್ ಮಾಡಲೆಂದೇ ಹೇಳಿದ್ದಾರೆಂದು ದಳಪತಿ ಫ್ಯಾನ್ಸ್ ಕಿಡಿ ಕಾರಿದ್ದರು. ರಜನಿ ವಿರುದ್ಧ ವಿಜಯ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು. ಅದಕ್ಕೀಗ ಸೂಪರ್‌ಸ್ಟಾರ್ ರಜನಿ ಸ್ಪಷ್ಟನೆ ಕೊಟ್ಟಿದ್ದಾರೆ. ನಿನ್ನೆ (ಜನವರಿ 26) ನಡೆದ 'ಲಾಲ್ ಸಲಾಂ' ಆಡಿಯೋ ಲಾಂಚ್‌ನಲ್ಲಿ ವಿಜಯ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ರಜನಿಕಾಂತ್ ಪುತ್ರಿ ಐಶ್ವರ್ಯಾ 'ಲಾಲ್ ಸಲಾಂ' ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ರಜನಿಕಾಂತ್ ಆಗಮಿಸಿದ್ದರು. ಈ ವೇಳೆ ಹದ್ದು-ಕಾಗೆ ಕಥೆ ಹೇಳಿ ದಳಪತಿ ವಿಜಯ್‌ರನ್ನು ಟಾರ್ಗೆಟ್ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ವೇದಿಕೆ ಮೇಲೆ ರಜನಿ ಆಡಿದ ಮಾತಿನ ಝಲಕ್ ಹೀಗಿದೆ.

"ಹದ್ದು-ಕಾಗೆ ಕಥೆಯನ್ನು ವಿಭಿನ್ನವಾಗಿಯೇ ಅರ್ಥೈಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ವಿರುದ್ಧವೇ ಈ ಕಥೆ ಹೇಳಿದ್ದಾಗಿ ಹಬ್ಬಿಸಿದ್ದರು. ಇದು ನಿಜಕ್ಕೂ ಬೇಸರ ತರಿಸಿತ್ತು. ವಿಜಯ್ ನನ್ನ ಕಣ್ಣ ಮುಂದೆ ಬೆಳೆದ ನಟ." ಎಂದು ರಜನಿಕಾಂತ್ ವೇದಿಕೆ ಮೇಲೆ ಹೇಳಿದ್ದಾರೆ.

Rajinikanth denies targeting Thalapathy Vijay in Lal Salaam audio launch

"ಧರ್ಮಾಥಿನ್ ತಲೈವನ್' ಸಿನಿಮಾ ವೇಳೆ ವಿಜಯ್‌ಗೆ ಕೇವಲ 13 ವರ್ಷ. ಸಿನಿಮಾ ಶೂಟಿಂಗ್ ಮುಗಿದ ಬಳಿಕ ಎಸ್ ಎ ಚಂದ್ರಶೇಖರ್ ಕರೆದುಕೊಂಡು ವಿಜಯ್‌ರನ್ನು ಭೇಟಿ ಮಾಡಿದ್ದರು. ಆ ವೇಳೆ ವಿಜಯ್‌ಗೆ ಸಿನಿಮಾದಲ್ಲಿ ನಟಿಸಲು ಇಷ್ಟವಿದೆ. ನೀವು ಓದಿನಲ್ಲಿ ಗಮನ ಹರಿಸುವಂತೆ ಹೇಳಿ ಎಂದಿದ್ದರು. ಆಗ ನಾನು ವಿದ್ಯಾಭ್ಯಾಸವನ್ನು ಮುಗಿಸುವಂತೆ ಸಲಹೆ ನೀಡಿದ್ದೆ." ಎಂದು ವಿಜಯ್ ಬಾಲ್ಯದ ದಿನಗಳನ್ನು ರಜನಿ ಹೇಳಿದ್ದಾರೆ.

'ಲಾಲ್ ಸಲಾಂ' ಆಡಿಯೋ ಲಾಂಚ್ ವೇಳೆ ವಿಜಯ್ ಹಾಗೂ ತನ್ನನ್ನು ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. "ನಮ್ಮಿಬ್ಬರ ನಡುವೆ ಪೈಪೋಟಿ ಇದೆ ಎಂದು ಹೇಳುತ್ತಿರುವುದನ್ನು ಕೇಳಿದ್ದೇನೆ. ತಮಗೆ ತಾವೇ ಕಾಂಪಿಟೇಟರ್ ಎಂದು ವಿಜಯ್ ಹೇಳಿಕೊಂಡಿದ್ದಾರೆ. ನನ್ನ ನಿಲುವು ಕೂಡ ಅದೇನೆ. ನಾವಿಬ್ಬರು ಕಾಂಪಿಟೇಟರ್‌ಗಳು ಎಂದು ಹೇಳುವುದು ಅಗೌರವ ನೀಡಿದಂತೆ. ನಮ್ಮ ಅಭಿಮಾನಿಗಳನ್ನು ನಮ್ಮನ್ನು ಹೋಲಿಕೆ ಮಾಡಬೇಡಿ ಅಂತ ಮನವಿ ಮಾಡಿಕೊಳ್ಳುತ್ತೇನೆ." ಎಂದು ರಜನಿಕಾಂತ್ ಹೇಳಿದ್ದಾರೆ.

'ಜೈಲರ್' ಸೂಪರ್‌ ಸಕ್ಸಸ್ ಬಳಿಕ ರಜನಿ ಪುತ್ರಿ ನಿರ್ದೇಶಿಸಿದ 'ಲಾಲ್ ಸಲಾಂ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಫೆಬ್ರವರಿ 9ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾದ ತುಣುಕುಗಳು ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ಲೈಕಾ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

More from Filmibeat

English summary
Rajinikanth denies targeting Thalapathy Vijay:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X