"ಇವರು ರಜನಿಕಾಂತ್.. ಮೂರನೇ ದರ್ಜೆ ನಟನಲ್ಲ": ಲಾಲ್ ಸಲಾಂ ಪೋಸ್ಟರ್ ನೋಡಿ ರೊಚ್ಚಿಗೆದ್ದ ನೆಟ್ಟಿಗರು!

ಸೂಪರ್‌ಸ್ಟಾರ್ ರಜನಿಕಾಂತ್ ಮುಂಬೈಗೆ ಕಾಲಿಡುತ್ತಿದ್ದಂತೆ ಸುದ್ದಿಯಲ್ಲಿದ್ದಾರೆ. ನಿನ್ನೆಯಷ್ಟೇ (ಮೇ 7) ತಲೈವಾ ಮಾಯಾನಗರಿಗೆ ಲ್ಯಾಂಡ್ ಆಗಿದ್ದರು. ಪುತ್ರಿ ಐಶ್ವರ್ಯಾ ನಿರ್ದೇಶನ ಮಾಡುತ್ತಿರುವ ಹೊಚ್ಚ ಹೊಸ ಸಿನಿಮಾದಲ್ಲಿ ರಜನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದ್ಹಾಗೆ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾದ ಹೆಸರು 'ಲಾಲ್ ಸಲಾಂ'. ಈಗಾಗಲೇ ಟೈಟಲ್ ಬಗ್ಗೆ ಮಾಹಿತಿ ಹೊರಹಾಕಿತ್ತು. ಇಂದು (ಮೇ 8) ರಜನಿಕಾಂತ್ ಪಾತ್ರದ ಹೆಸರು ಹಾಗೂ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ.

Rajinikanth Fans Disappointed with Lal Salaam movie Poster brutally trolled

ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಹೀಗಾಗಿ 'ಲಾಲ್ ಸಲಾಂ' ಸಿನಿಮಾದ ಪೋಸ್ಟರ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಇದರಿಂದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರಾಸೆಯಾಗಿದೆ. ರಜನಿ ಪೋಸ್ಟರ್‌ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹೆವೀ ಟ್ರೋಲ್ ಮಾಡುತ್ತಿದ್ದಾರೆ.

ರಜನಿ ಅಲ್ಲ.. ಮೊಯ್ದೀನ್ ಭಾಯ್

'ಲಾಲ್ ಸಲಾಂ' ಟೈಟಲ್‌ನಿಂದಲೇ ಕುತೂಹಲ ಕೆರಳಿಸಿತ್ತು. ಅದರಲ್ಲೂ ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅಂದ್ಮೇಲಂತೂ ಲುಕ್, ರೋಲ್ ಎಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ನಿರೀಕ್ಷೆಯಂತೆಯೇ ಸೂಪರ್‌ಸ್ಟಾರ್ ಮುಂಬೈಗೆ ಕಾಲಿಡುತ್ತಿದ್ದಂತೆ 'ಲಾಲ್ ಸಲಾಂ' ಲುಕ್ ಹಾಗೂ ಪಾತ್ರದ ಹೆಸರನ್ನು ರಿವೀಲ್ ಮಾಡಿದ್ದಾರೆ.

ರಜನಿಕಾಂತ್ ಪುತ್ರ ಅಪ್ಪನಿಗೆ ಯಾವ ಪಾತ್ರ ಕೊಟ್ಟಿದ್ದಾರೆ? ಸೂಪರ್‌ಸ್ಟಾರ್ ತಂದೆಯನ್ನು ತೆರೆಮೇಲೆ ಹೇಗೆ ತೋರಿಸುತ್ತಾರೆ? ಅನ್ನೋದನ್ನು ಎದುರು ನೋಡುತ್ತಿದ್ದರು. ಈ ಸಿನಿಮಾ ತಲೈವಾ ಮೊಯ್ದೀನ್ ಭಾಯ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರದ ಲುಕ್ ಹೇಗಿದೆ? ಅನ್ನೋದೂ ರಿವೀಲ್‌ ಆಗಿದೆ. ಆದರೆ, ಅಭಿಮಾನಿಗಳಿಗೆ ಯಾಕೋ ಈ ಲುಕ್ ಇಷ್ಟ ಆಗಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

Rajinikanth Fans Disappointed with Lal Salaam movie Poster brutally trolled

ಹೆವಿ ಟ್ರೋಲ್ ಆಯ್ತು ರಜನಿ ರೋಲ್

'ಲಾಲ್ ಸಲಾಂ' ಸಿನಿಮಾದಲ್ಲಿ ರಜನಿಕಾಂತ್ ರೋಲ್ ಹೆವಿ ಟ್ರೋಲ್ ಆಗುತ್ತಿದೆ. " ಈ ಸಿನಿಮಾದಲ್ಲಿ ತಲೈವರ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಿದ್ದರೂ, ನೀವು ಒಂದೊಳ್ಳೆ ಲುಕ್ ಕೊಡಲು ಸಾಧ್ಯವಿಲ್ಲವೇ?. ಈ ಲುಕ್ ಹಾಗೂ ಪೋಸ್ಟರ್ ಅನ್ನು ಮೆಚ್ಚಿ ಕೊಂಡಾಡುತ್ತಿರುವ ರಜನಿ ಅಭಿಮಾನಿಗಳು ದಯವಿಟ್ಟು ಸರಿಯಾದ ಅಭಿಪ್ರಾಯ ತಿಳಿಸಿ. ಈ ಮೂಲಕ ನಿರ್ದೇಶಕರು ಸುಧಾರಿಸಿಕೊಳ್ಳಬಹುದು" ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದರು.

"ಪೋಸ್ಟರ್ ಇನ್ನೂ ಅದ್ಭುತವಾಗಿ ಇರಬಹುದಿತ್ತು. ದೇವರಾಣೆಗೂ ಇವರು 'ರಜನಿಕಾಂತ್'. ಸಾಧಾರಣ ಪೋಸ್ಟರ್‌ಗಳ ಮೂಲಕ ಕಾಣಿಸಿಕೊಳ್ಳುವ ಮೂರನೇ ದರ್ಜೆ ಸ್ಟಾರ್ ನಟರಲ್ಲ" ಎಂದು ಇನ್ನೊಬ್ಬ ನೆಟ್ಟಿಗರು ಕಿಡಿಕಾರಿದ್ದಾರೆ. ಹಾಗೇ ಮತ್ತೊಬ್ಬರು "ಐಶ್ವರ್ಯಾ ರಜನಿಕಾಂತ್ ಮೇಡಂ ದಯವಿಟ್ಟು ಲಾಲ್ ಸಲಾಂ ಪೋಸ್ಟರ್ ಅನ್ನು ಬದಲಾಯಿಸಿ" ಎಂದು ಟ್ವೀಟ್ ಮಾಡುತ್ತಿದ್ದಾರೆ.

7 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ ಐಶ್ವರ್ಯಾ

ಐಶ್ವರ್ಯಾ ರಜನಿಕಾಂತ್ 7 ವರ್ಷಗಳ ಹಿಂದೆ ನಿರ್ದೇಶನ ಮಾಡಿದ್ದರು. ಆ ಬಳಿಕ ಒಂದೇ ಒಂದು ಸಿನಿಮಾವನ್ನೂ ನಿರ್ದೇಶನ ಮಾಡಿಲ್ಲ. ಕೊನೆಯದಾಗಿ 'ವೈ ರಾಜಾ ವೈ' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ ನಿರ್ದೇಶಿಸುತ್ತಿರುವ 'ಲಾಲ್ ಸಲಾಂ' ಸಿನಿಮಾ ಕೂಡ ಕ್ರಿಕೆಟ್ ಹಾಗೂ ಕಮ್ಯೂನಿಸಂ ಮೇಲೆ ಆಧರಿಸಿದೆ ಎಂದು ಹೇಳಲಾಗುತ್ತಿದೆ.

ಇದರಲ್ಲಿ ರಜನಿಕಾಂತ್ ಮೋಯ್ದಿನ್ ಭಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಇವರ ಪಾತ್ರವನ್ನು ಸಂಪೂರ್ಣವಾಗಿ ಮುಂಬೈನಲ್ಲಿಯೇ ಶೂಟಿಂಗ್ ಮಾಡಲಾಗುತ್ತಿದೆ. ಈ ಸಿನಿಮಾಗೆ ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Rajinikanth Fans Disappointed with Lal Salaam movie Poster brutally trolled, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X