'ಜೈಲರ್' ಬ್ಲಾಕ್‌ಬಸ್ಟರ್.. ತಲೈವಾಗೆ ಚೆಕ್ ಕೊಟ್ಟ ಮಾರನ್: ಎಷ್ಟು ಕೋಟಿ ಅಂತ ಜೂಮ್ ಮಾಡಿ ನೋಡ್ತಿದ್ದಾರೆ ಫ್ಯಾನ್ಸ್!
ಸೂಪರ್‌ಸ್ಟಾರ್ ರಜನಿಕಾಂತ್ ಫುಲ್ ಆಕ್ಟೀವ್ ಆಗಿಬಿದ್ದಾರೆ. 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದೇ ತಡ ಮತ್ತೆ ಹಳೇ ಹುರುಪಿನೊಂದಿಗೆ ಓಡಾಡುತ್ತಿದ್ದಾರೆ. 'ಜೈಲರ್' ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಗೆದ್ದು ಬೀಗುತ್ತಿದೆ.
'ಜೈಲರ್' ಸಿನಿಮಾ ರಿಲೀಸ್ ಆಗಿ ಸುಮಾರು 22 ದಿನಗಳಾಗಿವೆ. 21 ದಿನ ಕೂಡ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಚೆನ್ನಾಗಿಯೇ ಆಗುತ್ತಿದೆ. 21ನೇ ದಿನ ಬಾಕ್ಸಾಫೀಸ್‌ನಲ್ಲಿ ಡ್ರಾಪ್ ಆಗಿದ್ದೇನೋ ನಿಜ. ವಿಶ್ವದಾದ್ಯಂತ 600 ಕೋಟಿ ರೂ. ಕಲೆಕ್ಷನ್ ಕಷ್ಟ ಅನ್ನೋದು ನಿಜವೇ. ಆದರೆ, ಈ 21 ದಿನಗಳಲ್ಲಿ ಗಳಿಸಿದ ಕಲೆಕ್ಷನ್ ರಜನಿ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿದೆ.

ದಕ್ಷಿಣ ಭಾರತದ ದುಬಾರಿ ನಟರಲ್ಲಿ ರಜನಿಕಾಂತ್ ಕೂಡ ಒಬ್ಬರು ಅನ್ನೋದರಲ್ಲಿ ಅನುಮಾನವೇ ಇಲ್ಲ. ರಜನಿಕಾಂತ್ ಹೊಸ ಸಿನಿಮಾ ಸೆಟ್ಟೇರಿದಾಗಲೆಲ್ಲಾ ಸಂಭಾವನೆ ಬಗ್ಗೆ ಚರ್ಚೆಯಾಗುತ್ತೆ. 100 ಕೋಟಿ, 150 ಕೋಟಿ ಅಂತೆಲ್ಲ ಸುದ್ದಿಯಾಗುತ್ತೆ. ಈಗ ಫಿಲ್ಮ್ ಕ್ರಿಟಿಕ್ ಮನೋಬಾಲ ವಿಜಯಬಾಲನ್ ರಜನಿಕಾಂತ್‌ಗೆ ಚೆಕ್ ಕೊಡುವ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಆ ಫೋಟೊ ವೈರಲ್ ಆಗುತ್ತಿದೆ. ಫ್ಯಾನ್ಸ್ ಸಂಭಾವನೆಯನ್ನು ಟ್ರ್ಯಾಕ್ ಮಾಡುವುದಕ್ಕೆ ಯತ್ನಿಸುತ್ತಿದ್ದಾರೆ.
'ಜೈಲರ್'ಗೆ ಚೆಕ್ ಕೊಟ್ಟ ಮಾರನ್?
ದಕ್ಷಿಣ ಭಾರತದ ಫಿಲ್ಮ್ ಬಾಕ್ಸಾಫೀಸ್ ಟ್ರ್ಯಾಕರ್ ಹಾಗೂ ಸಿನಿಮಾ ಕ್ರಿಟಿಕ್ ಮನೋಬಾಲ ವಿಜಯಬಾಲನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ವ್ಯಕ್ತಿಗಳ ಕೈ ಮಾತ್ರ ಕಾಣಿಸುತ್ತಿದ್ದು, ಒಬ್ಬರು ಎನ್ವಲಪ್ ಕವರ್ ನೀಡುತ್ತಿದ್ದಾರೆ. ಮತ್ತೊಬ್ಬರು ತೆಗೆದುಕೊಳ್ಳುತ್ತಿದ್ದಾರೆ. ಅದರ ಮೇಲೆ ರಜನಿಕಾಂತ್ ಅಂತ ಬರೆದಿದೆ. ಈ ಲಕೋಟೆಯನ್ನು ನೋಡಿ ರಜನಿಕಾಂತ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಲಕೋಟೆ ಮೇಲೆ ಬರೆದಿದ್ದೇನು?
ಸೂಪರ್‌ಸ್ಟಾರ್‌ಗೆ ನೀಡಲಾಗಿದೆ ಎನ್ನಲಾದ ಈ ಚೆಕ್‌ನ ಲಕೋಟೆ ಮೇಲೆ ರಜನಿಕಾಂತ್ ಹೆಸರು ಬರೆದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರೊಂದಿಗೆ 'ದಿ ರೆಕಾರ್ಡ್ ಮೇಕರ್' ಅಂತ ಬರೆದಿದ್ದಾರೆಂದು ಮನೋಬಾಲ ವಿಜಯ್‌ಬಾಲನ್ ಟ್ವೀಟ್ ಮಾಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫ್ಯಾನ್ಸ್ ರಜನಿಕಾಂತ್‌ಗೆ ಲಕೋಟೆಯನ್ನು ಝೂಮ್ ಮಾಡಿ ನೋಡುತ್ತಿದ್ದಾರೆ.
ಫೋಟೊಗೆ ಫ್ಯಾನ್ಸ್ ಪ್ರತಿಕ್ರಿಯೆ ಏನು?
ಸೂಪರ್‌ಸ್ಟಾರ್ ನೀಡಿರುವ ಚೆಕ್ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಒಬ್ಬರು "ರಜನಿ ಈಗ ನಂಬರ್ 1 ಸಂಭಾವನೆ ಪಡೆಯುತ್ತಿದ್ದಾರೆ." ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "73ನೇ ವಯಸ್ಸಿನಲ್ಲೂ ರಜನಿಕಾಂತ್ ರೆಕಾರ್ಡ್ ಮೇಕರ್. ಈಗಿನ ಹೀರೊಗಳ 60ನೇ ವಯಸ್ಸಿಗೆ ಬಂದಾಗ ಹೇಗಿರುತ್ತೋ ನೋಡೋಣ." ಎಂದು ಸವಾಲೆಸೆದಿದ್ದಾರೆ. ಹಾಗೇ ಮತ್ತೊಬ್ಬರು "ಯಾರೂ ಯಾರಿಗೂ ಏನನ್ನೂ ಕೊಡಲು ಹೋಗುವುದಿಲ್ಲ." ಎಂದು ಕ್ರಿಟಿಕ್ ಕಾಲೆಳೆದಿದ್ದಾರೆ.
600 ಕೋಟಿ ಕ್ಲಬ್ ಸೇರುತ್ತಾ 'ಜೈಲರ್'?
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ದಿನದಿಂದ ದಿನಕ್ಕೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಡ್ರಾಪ್ ಆಗುತ್ತಿದೆ. 21ನೇ ದಿನ ಕೇವಲ 2.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ವಿಶ್ವದಾದ್ಯಂತ ರಜನಿ ಸಿನಿಮಾ 'ಜೈಲರ್' 564.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೀಗಾಗಿ 600 ಕೋಟಿ ಕ್ಲಬ್ ಸೇರುವುದು ಅನುಮಾನವೆಂದೇ ಹೇಳಲಾಗುತ್ತಿದೆ.


Click it and Unblock the Notifications











