ಆ ಕಥೆಗೆ ರಜನಿಯೇ ಸರಿ.. ಕೇಳಿದಷ್ಟು ಹಣ ಸಿಗಲ್ಲ, ನಿರೀಕ್ಷೆಗೂ ಮೀರಿದ ಅವಾರ್ಡ್ ಸಿಗುತ್ತೆ: ಯಾವುದದು?

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾಗಳು ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ರಜನಿ ಸ್ಟೈಲಿಶ್‌ ಆಗಿ ತೆರೆಮೇಲೆ ಎಂಟ್ರಿ ಕೊಟ್ಟರೆ ಮುಗಿತು ಆ ಸಿನಿಮಾ ಸೂಪರ್‌ ಹಿಟ್ ಆದಂತೆಯೇ. ಥಿಯೇಟರ್‌ಗಳಲ್ಲಿ ಶಿಳ್ಳೆಗಳು ಬಿದ್ದಂತೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಲ್ಲಾಪಟ್ಟಿಯಲ್ಲಿ ಗೆದ್ದಂತೆಯೇ..

70 ವರ್ಷ ದಾಟಿರುವ ಸೂಪರ್‌ಸ್ಟಾರ್ ರಜನಿಕಾಂತ್ ಇನ್ನೂ ಅದೇ ಜೋಷ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಟೈಲಿಶ್ ಎಂಟ್ರಿ ಕೊಡುತ್ತಾರೆ. ಡೈಲಾಗ್ ಹೊಡೆಯುತ್ತಾರೆ. ರೊಮ್ಯಾಂಟಿಕ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದ್ವೇಳೆ ತಲೈವಾ ಪಕ್ಕಾ ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ಬೇರೊಂದು ಪ್ರಕಾರದ ಸಿನಿಮಾದಲ್ಲಿ ನಟಿಸಿದರೆ ಏನಾಗಬಹುದು?

ರಜನಿ ದಾಟಿಯನ್ನೂ ಮೀರಿದ ಸಿನಿಮಾ ಮಾಡಲು ಸಾಧ್ಯವೇ? ಕರ್ಮರ್ಷಿಯಲ್ ಕಥೆಯನ್ನು ಬಿಟ್ಟು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಮಾಡಲು ಸಾಧ್ಯವೇ? ತಮಿಳಿ ಜನಪ್ರಿಯ ಸಾಹಿತಿ ವೈರಮುತ್ತು, ಇಂತಹದ್ದೊಂದು ಆಸೆಯನ್ನು ಮುಂದಿಟ್ಟಿದ್ದಾರೆ. 22 ಭಾಷೆಗಳಿಗೆ ಅನುವಾದಗೊಂಡ ಕಥೆಯಲ್ಲಿ ರಜನಿಕಾಂತ್ ನಟಿಸಬೇಕು ಎಂದು ವೈರಮುತ್ತು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ರಜನಿಕಾಂತ್ ಸಾಹಿತಿ ವೈರಮುತ್ತು ಆಸೆಯನ್ನು ಈಡೇರಿಸುವವರೇ ಎನ್ನುವುದೇ ಪ್ರಶ್ನೆ.

ವೈರಮುತ್ತು ಹೇಳಿದ ಮಹಾಕಾವ್ಯ ಯಾವುದು?

ವೈರಮುತ್ತು ಹೇಳಿದ ಮಹಾಕಾವ್ಯ ಯಾವುದು?

ತಮಿಳಿನ ಸಾಹಿತ್ಯ ಲೋಕದಲ್ಲಿ ವಿಶೇಷವಾಗಿ ನಿಲ್ಲುವುದು 'ಕಲ್ಲಿಕಟ್ಟು'. ಈ ಮಹಾಕಾವ್ಯ ಸುಮಾರು 22 ಭಾಷೆಗಳಿಗೆ ಅನುವಾದಗೊಂಡಿದೆ. ಮಿಲಿಯನ್‌ಗಿಂತಲೂ ಹೆಚ್ಚು ಪ್ರತಿಗಳು ಸೇಲ್ ಆಗಿವೆ. ತಮಿಳುನಾಡಿನ ಮಧುರೈನ ವೈಗೈ ಅಣೆಕಟ್ಟು ನಿರ್ಮಾಣದ ವೇಳೆ ಅಲ್ಲಿಂದ ವಲಸೆ ಬಂದಿದ್ದರು. ಆಗ ಜನರು ಎದುರಿಸಿದ ಕಷ್ಟಗಳ ಬಗ್ಗೆ ಕಾದಂಬರಿನಲ್ಲಿ ನಮೂದಿಸಲಾಗಿದೆ. ಈ ಕಥೆಯನ್ನು ಸಿನಿಮಾ ಮಾಡಿದರೆ 'ಕಲ್ಲಿಕಟ್ಟು' ಇತಿಹಾಸವನ್ನು ಸೃಷ್ಟಿಸಲಿದೆ ಎಂದು ವೈರಮುತ್ತು ಅಭಿಪ್ರಾಯ ಪಟ್ಟಿದ್ದಾರೆ.

ಈ ಸಿನಿಮಾದಲ್ಲಿ ರಜನಿಕಾಂತ್ ನಟಿಸಬೇಕು

ಈ ಸಿನಿಮಾದಲ್ಲಿ ರಜನಿಕಾಂತ್ ನಟಿಸಬೇಕು

'ಕಲ್ಲಿಕಟ್ಟು' ಸಿನಿಮಾ ಬಗ್ಗೆ ಹೇಳಿದ್ದರೆ, ಇಷ್ಟೊಂದು ಸುದ್ದಿಯಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಸೂಪರ್‌ಸ್ಟಾರ್ ರಜನಿಕಾಂತ್ ಅವರೇ ನಟಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎಳೆಯ ಮೈಕಟ್ಟು, 70 ವರ್ಷ ವಯಸ್ಸಿನ ವ್ಯಕ್ತಿತ್ವ, ದ್ರಾವಿಡರ ಮೈಬಣ್ಣ, ಎತ್ತರದ ವ್ಯಕ್ತಿತ್ವದ ನಾಯಕ ಬೇಕು. ಈ ಎಲ್ಲಾ ಗುಣಗಳು ರಜನಿಕಾಂತ್‌ ಬಳಿ ಇದೆ. ಈ ಕಾರಣಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಈ ಸಿನಿಮಾದಲ್ಲಿ ನಟಿಸಬೇಕು ಎಂಬ ಬಯಕೆ ಹೊರ ಹಾಕಿದ್ದಾರೆ.

ಸಂಭಾವನೆ ಸಿಗಲ್ಲ, ಪ್ರಶಸ್ತಿ ಸಿಗುತ್ತೆ

ಸಂಭಾವನೆ ಸಿಗಲ್ಲ, ಪ್ರಶಸ್ತಿ ಸಿಗುತ್ತೆ

'ಕಲ್ಲಿಕಟ್ಟು' ಮಹಾಕಾವ್ಯದಲ್ಲಿ ರಜನಿಕಾಂತ್ ನಟಿಸಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ " ಈ ಸಿನಿಮಾ ಒಪ್ಪಿಕೊಳ್ಳುವುದರಿಂದ ರಜನಿಕಾಂತ್ ನಿರೀಕ್ಷಿಸುವಷ್ಟು ಸಂಭಾವನೆ ಸಿಗುವುದಿಲ್ಲ. ಆದರೆ, ನಿರೀಕ್ಷೆಗೂ ಮೀರಿದ ಪ್ರಶಸ್ತಿ ಅವರಿಗೆ ಸಿಗಲಿದೆ." ಎಂದು ತಮಿಳಿನ ಸಾಹಿತಿ ವೈರಮುತ್ತು ಅಭಿಪ್ರಾಯ ಪಟ್ಟಿದ್ದಾರೆ. ಈ ಸಿನಿಮಾ ಬಗ್ಗೆ ವೈರಮುತ್ತು ಸೂಪರ್‌ಸ್ಟಾರ್ ರಜನಿಕಾಂತ್ ಬಳಿಯೂ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾಗಿಯೂ ತಿಳಿಸಿದ್ದಾರೆ.

'ಜೈಲರ್‌'ನಲ್ಲಿ ಬ್ಯುಸಿ

'ಜೈಲರ್‌'ನಲ್ಲಿ ಬ್ಯುಸಿ

ಸೂಪರ್‌ಸ್ಟಾರ್ ರಜನಿಕಾಂತ್ 'ಅಣ್ಣಾತ್ತೆ' ಸಿನಿಮಾ ಬಳಿಕ 'ಜೈಲರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಈಗಾಗಲೇ ಬ್ಯುಸಿಯಾಗಿದ್ದಾರೆ. 'ಅಣ್ಣಾತ್ತೆ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಮಧ್ಯೆ ತಲೈವಾ ರಜನಿಕಾಂತ್ ಕಂಟೆಂಟ್ ಇರುವ ಕಥೆಯಲ್ಲಿ ನಟಿಸಲು ಒಪ್ಪುತ್ತಾರಾ? ಅನ್ನೋ ಅನುಮಾನವಂತೂ ಇದೆ. ಅದೇ ರೀತಿ ಒಂದು ವೇಳೆ 'ಕಲ್ಲಿಕಟ್ಟು' ಸಿನಿಮಾದಲ್ಲಿ ರಜನಿ ನಟಿಸಿದರೆ, ಹೊಸ ಇತಿಹಾಸ ಸೃಷ್ಟಿಸುವ ಸಾಧ್ಯತೆಯೂ ಇದೆ.

More from Filmibeat

English summary
Rajinikanth Is Suitable For Kallikattu Movie Said Tamil Poet Vairamuthu, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X