Rajini Vs Vijay: ಕಾಲಿವುಡ್ ಮಾರ್ಕೆಟ್‌ನಲ್ಲಿ ನಂ 1 ಯಾರು? ರಜನಿ-ವಿಜಯ್ ಇಬ್ಬರಲ್ಲಿ ಯಾರ ಸಿನಿಮಾ ಬ್ಯುಸಿನೆಸ್ ಹೇಗಿದೆ?
ಇನ್ನು ಎರಡೇ ದಿನಗಳಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಜೈಲರ್' ರಿಲೀಸ್ ಆಗಲಿದೆ. ಅದಕ್ಕೆ ಬೇಕಿರೋ ಪೂರ್ವ ತಯಾರಿಯನೂ ಬಹುತೇಕ ಮುಗಿದಿದೆ. ಮತ್ತೊಮ್ಮೆ ರಜನಿಕಾಂತ್ ಅನ್ನು ತೆರೆಮೇಲೆ ನೋಡುವುದಕ್ಕೆ ಅವರ ಅಭಿಮಾನಿಗಳು ಎದುರು ನೋಡುತ್ತಲೇ ಇದ್ದಾರೆ.
ರಜನಿಕಾಂತ್ ಸಿನಿಮಾ ರಿಲೀಸ್ ಆದಾಗಲೆಲ್ಲ ಪ್ರಿ-ರಿಲೀಸ್ ಬ್ಯುಸಿನೆಸ್ ಹಾಗೂ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಜೋರಾಗಿಯೇ ಚರ್ಚೆಯಾಗುತ್ತೆ. 72 ವರ್ಷದ ಸೂಪರ್‌ಸ್ಟಾರ್ ಇನ್ನೂ ಯುವ ನಟರಿಗೆ ಸಖತ್ ಆಗಿಯೇ ಪೈಪೋಟಿ ನೀಡುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲೂ ರಜನಿಕಾಂತ್ ಇನ್ನೂ ಕ್ರೇಜ್ ಕಡಿಮೆಯಾಗಿಲ್ಲ.

'ಜೈಲರ್' ಸಿನಿಮಾ ಬಿಡುಗಡೆ ಹೊಸ್ತಿಲಲ್ಲೂ ಬಿಡುಗಡೆಗೂ ಮುನ್ನ ಎಷ್ಟು ವ್ಯಾಪಾರ ಆಗಿದೆ ಅನ್ನೋದನ್ನು ಲೆಕ್ಕಾ ಹಾಕಲಾಗುತ್ತಿದೆ. ಇಷ್ಟೇ ಅಲ್ಲದೆ, ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾದ ಪ್ರಿ ರಿಲೀಸ್ ಬ್ಯುಸಿನೆಸ್ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಅಸಲಿಗೆ 'ಜೈಲರ್' ಹಾಗೂ 'ಲಿಯೋ' ಎಷ್ಟು ಕೋಟಿಗೆ ಬ್ಯುಸಿನೆಸ್ ಆಗಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಜೈಲರ್' ಪ್ರೀ-ರಿಲೀಸ್ ಬ್ಯುಸಿನೆಸ್ ಎಷ್ಟು?
ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಆಗಸ್ಟ್ 10ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಈಗಾಗಲೇ ರಜನಿ ಸಿನಿಮಾ ಒಂದು ಹಂತದ ವ್ಯಾಪಾರ ವಹಿವಾಟನ್ನೂ ಮುಗಿಸಿದೆ. ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದು ಥಿಯೇಟ್ರಿಕಲ್ ಬ್ಯುಸಿನೆಸ್ ದೊಡ್ಡ ಮಟ್ಟದಲ್ಲಿಯೇ ಆಗಿದೆ. ಮೂಲಗಳ ಪ್ರಕಾರ, 'ಜೈಲರ್' ಸಿನಿಮಾ 126 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ವರದಿಯಾಗಿದೆ.

'ಜೈಲರ್' ಎಲ್ಲೆಲ್ಲಿ ಎಷ್ಟೆಷ್ಟು ಬ್ಯುಸಿನೆಸ್?
'ಜೈಲರ್' ಸಿನಿಮಾ ಕೇವಲ ತಮಿಳು ನಾಡಿನಲ್ಲೇ 60 ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್ ಮಾಡಿದೆ ಎಂದು ವರದಿಯಾಗಿದೆ. ಅದೇ ಕರ್ನಾಟಕದಲ್ಲಿ 10 ಕೋಟಿ ರೂ.ಗೆ ವ್ಯಾಪಾರ ಮುಗಿಸಿದೆ. ರಜನಿ ಸಿನಿಮಾಗೆ ತೆಲುಗು ರಾಜ್ಯಗಳಲ್ಲೂ ಕ್ರೇಜ್ ಇರೋದ್ರಿಂದ 12 ಕೋಟಿ ರೂ.ಗೆ ವ್ಯಾಪಾರ ಆಗಿದೆ. ಹಾಗೇ ಕೇರಳದಲ್ಲಿ 9 ಕೋಟಿ ರೂ., ಉತ್ತರ ಭಾರತದಲ್ಲಿ 3 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಒಟ್ಟು 96 ಕೋಟಿ ರೂ. ಬ್ಯುಸಿನೆಸ್ ಆಗಿದೆ ಎಂದು ವರದಿಯಾಗಿದೆ.
ನಿರ್ಮಾಪಕರಿಗೆ ಲಾಭನಾ? ನಷ್ಟನಾ?
ರಜನಿ ಸಿನಿಮಾ 'ಜೈಲರ್' ಅನ್ನು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಭಾರತದಲ್ಲಿ ಥಿಯೇಟ್ರಿಕಲ್ ರೈಟ್ಸ್ 96 ಕೋಟಿ ರೂ.ಗೆ ಸೇಲ್ ಆಗಿದ್ದರೆ, ಅತ್ತ ವಿದೇಶದಲ್ಲಿ 32 ಕೋಟಿ ರೂ. ಮಾರಾಟ ಆಗಿದೆ. ರಿಲೀಸ್‌ಗೂ ಮುನ್ನ ಆದ ವ್ಯವಹಾರವೇ ಸುಮಾರು 126 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬಿಡುಗಡೆ ಬಳಿಕ ಬಾಕ್ಸಾಫೀಸ್ ಕಲೆಕ್ಷನ್ 250 ಕೋಟಿ ದಾಟಿದರೆ ಹಿಟ್ ಅಂತ ಸಾಬೀತಾಗುತ್ತೆ. ಅಲ್ಲದೆ ಇದರಲ್ಲಿ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳನ್ನು ಎಷ್ಟಕ್ಕೆ ಮಾರಾಟ ಆಗಿದೆ ಅನ್ನೋದು ಇನ್ನೂ ತಂಡ ರಿವೀಲ್ ಮಾಡಿಲ್ಲ.
ಲಿಯೋ ಬ್ಯುಸಿನೆಸ್ ಬಗ್ಗೆ ಏನಿದೆ ರಿಪೋರ್ಟ್?
ಇತ್ತ ದಳಪತಿ ವಿಜಯ್ ಸಿನಿಮಾ 'ಲಿಯೋ' ಭರ್ಜರಿ ವ್ಯಾಪಾರ ಮಾಡಿದೆ ಅನ್ನೋ ಮಾತು ಹೇಳಿ ಬರುತ್ತಿದೆ. ಆಂಧ್ರ & ತೆಲಂಗಾಣ ಸೇರಿ ಥಿಯೇಟ್ರಿಕಲ್ ರೈಟ್ಸ್ 21 ಕೋಟಿ ರೂ., ಕೇರಳ 16 ಕೋಟಿ ರೂ. ಹಿಂದಿ ಹಕ್ಕು 28 ಕೋಟಿ ರೂ. ಎನ್ನಲಾಗುತ್ತಿದೆ. ಕರ್ನಾಟಕದ ಹಕ್ಕು 15 ಕೋಟಿ ರೂ. ತಮಿಳುನಾಡು ಬಿಟ್ಟು 80 ಕೋಟಿ ರೂ. ಬ್ಯುಸಿನೆಸ್ ಆಗಿದೆ ಎನ್ನಲಾಗಿದೆ. ಹಾಗೇ ವಿದೇಶಿ ಹಕ್ಕು 60 ಕೋಟಿ ರೂ. ಒಟ್ಟು 140 ಕೋಟಿ ರೂ. ಆಗಿದೆ. ಇದರೊಂದಿಗೆ ನೆಟ್‌ಫಿಕ್ಸ್‌ಗೆ 140 ಕೋಟಿ ರೂ.ಗೆ ಮಾರಲಾಗಿದ್ದು, ಸ್ಯಾಟಲೈಟ್ ಹಕ್ಕು 90 ಕೋಟಿ ರೂ.,ಆಡಿಯೋ 16 ಕೋಟಿ ರೂ., ಎನ್ನಲಾಗಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ರಜನಿ ಸಿನಿಮಾಗಿಂತ ವಿಜಯ್ ಸಿನಿಮಾ ಬ್ಯುಸಿನೆಸ್ ಭರ್ಜರಿಯಾಗಿದೆ ಎನ್ನಲಾಗಿದೆ. ಆದರೆ, ಇಬ್ಬರ ಹಿಂದಿನ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯಾವಾಗಿ ಸೋತಿವೆ. ಹೀಗಾಗಿ 'ಜೈಲರ್' ಹಾಗೂ 'ಲಿಯೋ' ಗೆಲ್ಲಲೇ ಬೇಕಿದೆ.


Click it and Unblock the Notifications











