"CBIನಿಂದ ಬಂದಿದ್ದೇವೆ.. ನಿಮಗೆ ದೇಣಿಗೆ ಬೇಕಾ?": 'ಜೈಲರ್' ಸಿನಿಮಾದ ಈ ಡೈಲಾಗ್ ಟ್ರೆಂಡ್ ಆಗ್ತಿರೋದೇಕೆ?

ಈಗ ಎಲ್ಲರ ಕಣ್ಣು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಮೇಲೆ ನೆಟ್ಟಿದೆ. ಸನ್ ಪಿಕ್ಚರ್ಸ್ ನಿರ್ಮಿಸಿ, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗುತ್ತಿದೆ. ಇದೇ ಜೋಷ್‌ನಲ್ಲಿ ಈ ಸಿನಿಮಾದ ಟ್ರೈಲರ್ ಒಂದನ್ನು ರಿಲೀಸ್ ಮಾಡಲಾಗಿದೆ. ಅದರ ಒಂದು ಡೈಲಾಗ್ ಈಗ ಟ್ರೆಂಡ್ ಆಗುತ್ತಿದೆ.

'ಜೈಲರ್' ಸಿನಿಮಾದ ಟ್ರೈಲರ್ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ರಜನಿಕಾಂತ್ ಸ್ಟೈಲ್ ಹಾಗೂ ಆಕ್ಷನ್ ಎರಡೂ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಅದರಲ್ಲೂ ಟ್ರೈಲರ್‌ನಲ್ಲಿ ಬಂದಿರೋ ಕೆಲವು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.

Rajinikanth-Jailer Movie

ಕಿಕ್ ಕೊಡ್ತಿದೆ 'ಜೈಲರ್' ಡೈಲಾಗ್

ಸೂಪರ್‌ಸ್ಟಾರ್ ಅಭಿಮಾನಿಗಳಲ್ಲಿ 'ಜೈಲರ್' ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟಾಕಿದೆ. ಅದರಲ್ಲೂ ರಜನಿಗೆ ಇದೇ ಮೊದಲ ಬಾರಿಗೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ನಿರೀಕ್ಷೆ ಸಹಜವಾಗಿಯೇ ದುಪ್ಪಟ್ಟಾಗಿದೆ. ಜೊತೆಗೆ ಅನಿರುದ್ಧ್ ಟ್ಯೂನ್ ಹಾಕಿರೋ ಮೂರು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಮೂರು ಹಾಡುಗಳೂ ಪ್ರೇಕ್ಷಕರ ಮನಗೆದ್ದಿದೆ. ಈ ಮಧ್ಯೆ ನಿನ್ನೆ (ಆಗಸ್ಟ್ 2) ಬಿಡುಗಡೆಯಾಗಿದ್ದ ಟ್ರೈಲರ್ ನೋಡಿ ಥ್ರಿಲ್ ಆಗಿರೋ ಅಭಿಮಾನಿಗಳು ಸಿಬಿಐ ಡೈಲಾಗ್ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ.

ಆಡಿಯೋ ಲಾಂಚ್‌ನಲ್ಲೇ ರಜನಿ ವಾರ್ನಿಂಗ್

ಕಳೆದ ವಾರವಷ್ಟೇ ರಜನಿಕಾಂತ್ 'ಜೈಲರ್' ಸಿನಿಮಾದ ಆಡಿಯೋವನ್ನು ಅದ್ಧೂರಿಯಾಗಿ ರಿಲೀಸ್ ಮಾಡಲಾಗಿತ್ತು. ಈ ವೇಳೆ ರಜನಿ ಸಿನಿಮಾದ ಟೈಟಲ್ ಬಗ್ಗೆ ಆಡಿದ ಮಾತು ಕೂಡ ಟ್ರೆಂಡಿಂಗ್‌ನಲ್ಲಿದೆ. ಹಾಗೇ ರಜನಿ ತಮ್ಮ ಅಭಿಮಾನಿಗಳಿಗೆ 'ಕಾಗೆ-ಗಿಡುಗ'ದ ಚಿಕ್ಕ ಕಥೆಯೊಂದನ್ನು ಹೇಳಿದ್ದರು. ಈ ಕಥೆ ಬಗ್ಗೆನೂ ಈಗ ಚರ್ಚೆಯಾಗುತ್ತಿದೆ. ಸೂಪರ್‌ಸ್ಟಾರ್ ಪಟ್ಟದ ಕನಸು ಕಾಣುತ್ತಿರುವ ಯಂಗ್ ಹೀರೋಗಳಿಗೆ ತಲೈವಾ ಕೊಟ್ಟ ಎಚ್ಚರಿಕೆ ಎಂಬ ಮಾತು ತಮಿಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಈ ಮಧ್ಯೆ ಟ್ರೈಲರ್ ಡೈಲಾಗ್ ಬೇರೆ ಟ್ರೆಂಡ್ ಆಗುತ್ತಿದೆ.

Rajinikanth-Jailer Movie

CBI ಡೈಲಾಗ್ ಟ್ರೆಂಡ್ ಆಗ್ತಿರೋದ್ಯಾಕೆ?

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಟ್ರೈಲರ್ ಇಂಟರ್‌ನೆಟ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಆಕ್ಷನ್ ಸೀನ್ ಮೂಲಕ ಆರಂಭವಾದ ಟ್ರೈಲರ್‌ನ ಮೊದಲ ಡೈಲಾಗ್ ಕಿಕ್ ಕೊಟ್ಟಿದೆ. "ನಾನು ಸಿಬಿಐನಿಂದ ಬಂದಿದ್ದೇವೆ" ಎನ್ನುವ ಡೈಲಾಗ್‌ಗೆ ನಟ ಸುನಿಲ್ "ನಿಮಗೆ ದೇಣಿಕೆ ಬೇಕಾ?" ಎಂದು ನೀಡುವ ಪ್ರತಿಕ್ರಿಯೆ ನೀಡುತ್ತಾರೆ. ತಕ್ಷಣಕ್ಕೆ ಕಲಾನಿಧಿ ಮಾರನ್ ಪ್ರಸ್ತುತಿ ಅಂತ ಟೈಟಲ್ ಬರುತ್ತೆ. ಇದನ್ನು ನೋಡಿ ರಜನಿಕಾಂತ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದು ಸಿಬಿಐ ಹಾಗೂ ಜಾರಿ ನಿರ್ದೇಶನಾಯಲದ ಕುರಿತಾದ ಸಿನಿಮಾ ಇರುಬಹುದು ಎಂದು ಅಂದಾಜು ಮಾಡಲಾಗುತ್ತಿದೆ.

ಟ್ರೈಲರ್‌ನಲ್ಲೇ ಟಾಂಗ್ ಕೊಟ್ರಾ?

ಜೈಲರ್ ಸಿನಿಮಾವನ್ನು ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದರಿಂದ ರಾಜಕೀಯ ಕ್ಷೇತ್ರದಲ್ಲೂ ಗಮನ ಸೆಳೆದಿದೆ. ಕೆಲವು ತಿಂಗಳ ಹಿಂದಷ್ಟೇ ಜಾರಿ ನಿರ್ದೇಶನಲಾಯ ಡಿಎಂಕೆ ಮುಖಂಡರ ಆಸ್ತಿ ಮೇಲೆ ರೇಡ್ ಮಾಡಿತ್ತು. ಇದಕ್ಕೆ ಟ್ರೈಲರ್‌ನಲ್ಲೇ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದೆಲ್ಲ ಏನೇ ಇದ್ದರೂ, ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಅವರ ಅಭಿಮಾನಿಗಳಿಗೆ ಪಕ್ಕಾ ಕಮರ್ಷಿಯಲ್ ಪ್ಯಾಕೇಜ್ ಆಗಿರಬೇಕು ಎಂದು ಹೇಳಿದ್ದಾರೆ.

More from Filmibeat

English summary
Rajinikanth Jailer dialogue We are from CBI.. Do you want a donation in trailer trending
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X