Jailer: ರಜನಿಗಿಂತ ಶಿವಣ್ಣನಿಗೆ ಹೆಚ್ಚು ಶಿಳ್ಳೆ.. ಮೊದಲ ದಿನ ಕರ್ನಾಟಕದ 'ಜೈಲರ್' ಕಲೆಕ್ಷನ್ ಇಷ್ಟು!

2023ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಸಿನಿಮಾ 'ಜೈಲರ್' ಮುಂದಿತ್ತು. ನಿಗದಿಯಾದಂತೆ ಇಂದು (ಆಗಸ್ಟ್ 10) 'ಜೈಲರ್' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋದಲ್ಲೇ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

'ಜೈಲರ್' ರೆಸ್ಪಾನ್ಸ್ ಎಲ್ಲಾ ಕಡೆಗಳಲ್ಲಿ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ. ಚಿಕ್ಕದೊಂದು ಟ್ವಿಸ್ಟ್ ಅಂದ್ರೆ, ಸೂಪರ್‌ಸ್ಟಾರ್ ರಜನಿಗಿಂತ ಶಿವಣ್ಣ ಎಂಟ್ರಿ ಹೆಚ್ಚು ಚಪ್ಪಾಳೆ ಬೀಳುತ್ತಿವೆ. ರಜನಿಕಾಂತ್ ಹಾಗೂ ಶಿವಣ್ಣನ ಕಾಂಬಿನೇಷನ್‌ಗೆ ಸಿನಿಪ್ರಿಯರು ಮನಸೋತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಮಸ್ತ್ ರೆಸ್ಪಾನ್ಸ್ ಸಿಗುತ್ತಿದೆ.

Rajinikanth Jailer movie day 1 box Office collection report in Karnataka

ಕರ್ನಾಟಕದಲ್ಲಿ ಹೆಚ್ಚು ಸ್ಕ್ರೀನ್‌ಗಳಲ್ಲಿ 'ಜೈಲರ್' ಪ್ರದರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ, ಈ ಸಿನಿಮಾ ಕೇವಲ ಬೆಂಗಳೂರಿನಲ್ಲೇ 900ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಮೊದಲ ದಿನದ ಒಂದೊಳ್ಳೆ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕಿರೋ ಲೆಕ್ಕಾಚಾರವೇನು? ಕರ್ನಾಟಕದಲ್ಲಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಭಾರತದಲ್ಲಿ ಮೊದಲ ದಿನ ಕಲೆಕ್ಷನ್ ಎಷ್ಟು?

ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್‌ಗೆ ಈ ಸಿನಿಮಾ ಗೆಲ್ಲಲೇ ಬೇಕಿದೆ. ಇಬ್ಬರ ಹಿಂದಿನ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದವು. ಈ ಕಾರಣಕ್ಕೆ 'ಜೈಲರ್' ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆಯಲೇ ಬೇಕಿದೆ. ಸದ್ಯ ಟ್ರೇಡ್ ಎಕ್ಸ್‌ಪರ್ಟ್‌ಗಳ ಹಾಕಿರೋ ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಮೊದಲ ದಿನ 49 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆ ಎಂದಿದ್ದಾರೆ. ಹೀಗಾಗಿ ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಕರ್ನಾಟಕದಲ್ಲಿ ಮೊದಲ ದಿನ ಗಳಿಕೆ ಎಷ್ಟು?

ಕರ್ನಾಟಕದಲ್ಲಿ ರಜನಿಕಾಂತ್‌ಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ರಜನಿ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದಂತೆ ಅಭಿಮಾನಿಗಳು ಅಲರ್ಟ್ ಆಗಿಬಿಡುತ್ತಾರೆ. ಒಂದು ಅಂದಾಜಿನ ಪ್ರಕಾರ, ಬೆಂಗಳೂರಿನಲ್ಲಿ 'ಜೈಲರ್'ಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಶೇ. 70ರಷ್ಟು ಚಿತ್ರಮಂದಿರಗಳು ತುಂಬಿದ ಪ್ರದರ್ಶನಗಳನ್ನು ಕಂಡಿವೆ. ಅಲ್ಲದೆ ಅಡ್ವಾನ್ಸ್ ಬುಕಿಂಗ್‌ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು ಎಲ್ಲವೂ ಸೇರಿ 'ಜೈಲರ್' ಕರ್ನಾಟಕದಲ್ಲಿ ಸುಮಾರು 11 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುತ್ತೆ ಎಂದು ಅಂದಾಜಿಸಲಾಗಿದೆ.

Rajinikanth Jailer movie day 1 box Office collection report in Karnataka

ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್?

'ಜೈಲರ್' ಕರ್ನಾಟಕದಲ್ಲಿ 11 ಕೋಟಿ ರೂ. ಕಲೆಕ್ಷನ್ ಮಾಡುತ್ತೆ ಎಂದು ಅಂದಾಜು ಮಾಡಲಾಗಿದೆ. ಅದೇ ತಮಿಳುನಾಡಿನಲ್ಲಿ 25 ಕೋಟಿ ರೂ., ಆಂಧ್ರ ಪ್ರದೇಶ, ತೆಲಂಗಾಣ ಸೇರಿ 7 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಊಹೆ ಮಾಡಲಾಗಿದೆ. ಹಾಗೇ ಕೇರಳದಲ್ಲಿ 4 ಕೋಟಿ ರೂ., ಉಳಿದ ಭಾಗದಲ್ಲಿ 2 ಕೋಟಿ ರೂ. ಕಲೆಕ್ಷನ್ ಮಾಡಲಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ.

BMSನಲ್ಲಿ 9 ಲಕ್ಷ ಟಿಕೆಟ್‌ಗಳು ಮಾರಾಟ

ಇತ್ತೀಚೆಗೆ ಬುಕ್ ಮೈ ಶೋದಲ್ಲಿ ರಜನಿಕಾಂತ್ 'ಜೈಲರ್' ಸಿನಿಮಾದ 9 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟ ಆಗಿದೆ ಎಂದು ವರದಿಯಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲೇ ಸಿನಿಮಾಗೆ ಹೆಚ್ಚು ಬೇಡಿಕೆ ಇದೆ ಎನ್ನಲಾಗಿದೆ. ಈ ಲೆಕ್ಕಾಚಾರ ಕೇವಲ ಟ್ರೇಡ್‌ ಎಕ್ಸ್‌ಪೆರ್ಟ್‌ಗಳ ಅಂದಾಜು ಲೆಕ್ಕ. ಮೊದಲ ದಿನ 'ಜೈಲರ್' ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದು ಅಧಿಕೃತವಾಗಿ ನಾಳೆ (ಆಗಸ್ಟ್ 10) ಹೊರಬೀಳಲಿದೆ.

More from Filmibeat

English summary
Rajinikanth Jailer movie day 1 box Office collection in Karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X