Jailer 2: 'ಜೈಲರ್ 2'ನಲ್ಲಿ ನಟಿಸಿರೋ ಸ್ಟಾರ್‌ಗಳು ಇವರೇ.. ಕೊಟ್ಟಿದ್ದು ಇಷ್ಟೊಂದು ಸಂಭಾವನೆನಾ?
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್ 2' ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ವರ್ಷದ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ರಜನಿಕಾಂತ್ ಸಿನಿಮಾ ಕೂಡ ಒಂದು. 'ಜೈಲರ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾವನ್ನು ಕೊಟ್ಟಿರೋ ರಜನಿ-ನೆಲ್ಸನ್ ದಿಲೀಪ್ ಕುಮಾರ್ ಜೋಡಿ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ಈಗಾಗಲೇ ರಜನಿಕಾಂತ್ ಇಂಟ್ರುಡಕ್ಷನ್ ಅನ್ನು ಪವರ್‌ಫುಲ್ ಆಗಿ ಮಾಡಲಾಗಿದೆ. 'ಜೈಲರ್'ಗಿಂತಲೂ 'ಜೈಲರ್ 2'ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತಷ್ಟು ಪವರ್‌ಫುಲ್ ಅನ್ನೋದನ್ನು ಇಂಟ್ರುಡಕ್ಷನ್ ಟೀಸರ್‌ನಲ್ಲಿಯೇ ಹೇಳಿದ್ದಾಗಿದೆ. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ದುಪ್ಪಟಾಗಿದೆ. 'ಜೈಲರ್'ಗಿಂತಲೂ 'ಜೈಲರ್ 2'ನಲ್ಲಿ ಸ್ಟಾರ್‌ಗಳ ಹಿಂಡನ್ನೇ ನೋಡಬಹುದಾಗಿದೆ.

ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ 'ಜೈಲರ್ 2'ನಲ್ಲಿ ನಟಿಸಿರುವ ತಾರೆಯರ ಪಟ್ಟಿಯನ್ನೇ ವೈರಲ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಆ ತಾರೆಯರು ಪಡೆದಿರುವ ಸಂಭಾವನೆಯನ್ನೂ ಸಹ ರಿವೀಲ್ ಮಾಡಿದ್ದಾರೆ. ಹಾಗಿದ್ದರೆ, ಬಹು ಕೋಟಿ ವೆಚ್ಚದ 'ಜೈಲರ್ 2'ನಲ್ಲಿ ಯಾರೆಲ್ಲ ನಟಿಸಿದ್ದಾರೆ? ಅವರ ಸಂಭಾವನೆ ಎಷ್ಟು ಅನ್ನೋದನ್ನು ತಿಳಿಯೋಣ.
ಮಲ್ಟಿಸ್ಟಾರರ್ ಕಿಕ್
'ಜೈಲರ್ 2' ತಮಿಳು ಚಿತ್ರರಂಗದಲ್ಲಿ ನಿರ್ಮಾಣ ಆಗಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಸೂಪರ್‌ಸ್ಟಾರ್ ರಜನಿಕಾಂತ್ ಇದ್ಮೇಲೆ ಓಪನಿಂಗ್ ಅಂತೂ ಕ್ರೇಜಿಯಾಗಿ ಇರುತ್ತೆ. ಅದರಲ್ಲೂ ಇತ್ತೀಚೆಗೆ ಬೇರೆ ಬೇರೆ ಭಾಷೆಯ ಸೂಪರ್‌ಸ್ಟಾರ್‌ಗಳು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಿನಿಮಾ ತಂಡಕ್ಕೆ ಮತ್ತಷ್ಟು ಆನೆ ಬಲ ಬಂದಂತೆ ಆಗಿದೆ. 'ಜೈಲರ್' ಪ್ರೇಕ್ಷಕರಿಗೆ ರಜನಿ ಜೊತೆಗೆ ಮಲ್ಟಿಸ್ಟಾರರ್ ಅತಿಥಿ ಪಾತ್ರಗಳು ಕಿಕ್ ಕೊಟ್ಟಿದ್ದವು.
'ಜೈಲರ್ 2'ನಲ್ಲಿ ಯಾರೆಲ್ಲ ಇದ್ದಾರೆ?
ಸೂಪರ್‌ಸ್ಟಾರ್ ರಜನಿಕಾಂತ್ ಒಂದು ಕಡೆಯಾದರೆ, ಇನ್ನೊಂದು ಕಡೆ ಅತಿಥಿ ಪಾತ್ರದಲ್ಲಿ ಸೂಪರ್‌ಸ್ಟಾರ್‌ಗಳ ದೊಡ್ಡ ಪಟ್ಟಿನೇ ಇದೆ. ಸೋಶಿಯಲ್ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ, ಈ ಸಿನಿಮಾದಲ್ಲಿ ಮೋಹನ್ ಲಾಲ್, ಶಿವರಾಜ್‌ಕುಮಾರ್, ಜಾಕಿ ಶ್ರಾಫ್, ಮಿಥುನ್ ಚಕ್ರವರ್ತಿ, ವಿದ್ಯಾಬಾಲನ್, ವಿಜಯ್ ಸೇತುಪತಿ, ರಮ್ಯಾ ಕೃಷ್ಣ, ಎಸ್ ಜೆ ಸೂರ್ಯ, ವಿಜಯ್ ಸೇತುಪತಿ, ಫಹಾದ್ ಫಾಸಿಲ್, ತಮನ್ನಾ ಭಾಟಿಯಾ, ಯೋಗಿ ಬಾಬು, ಅನ್ನ ರಾಜನ್, ಜತಿನ್ ಸರ್ನ ಅವರನ್ನು ಪ್ರಮುಖ ಪಾತ್ರದಲ್ಲಿ ನೋಡಿಬಹುದು.
ಸಂಭಾವನೆ ಎಷ್ಟು?
'ಜೈಲರ್ 2' ನಲ್ಲಿ ರಜನಿ ಜೊತೆ ನಟಿಸುತ್ತಿರುವ ಸ್ಟಾರ್‌ಗಳ ಲಿಸ್ಟ್ ಅಷ್ಟೇ ಅಲ್ಲ, ಅವರಿಗೆ ಸಿಗುತ್ತಿರುವ ಸಂಭಾವನೆ ಕೂಡ ಅಷ್ಟೇ ದೊಡ್ಡದಿದೆ. ಒಬ್ಬರೊಬ್ಬರ ಸಂಭಾವನೆ ಕೂಡ ಅಷ್ಟೇ ಚರ್ಚೆಯಾಗುತ್ತಿದೆ. ರಜನಿಕಾಂತ್ ಸೇರಿ ಇವರೆಲ್ಲ ಸಂಭಾವನೆ ಮಾಹಿತಿ ವೈರಲ್ ಆಗುತ್ತಿದೆ.
ರಜನಿಕಾಂತ್- ₹110 ಕೋಟಿ
ಮೋಹನ್ ಲಾಲ್- ₹12 ಕೋಟಿ
ಶಿವರಾಜ್‌ಕುಮಾರ್- ₹5 ಕೋಟಿ
ಜಾಕಿ ಶ್ರಾಫ್- ₹4 ಕೋಟಿ
ಮಿಥುನ್ ಚಕ್ರವರ್ತಿ- ₹3 ಕೋಟಿ
ವಿದ್ಯಾಬಾಲನ್- ₹3ಕೋಟಿ
ವಿಜಯ್ ಸೇತುಪತಿ- ₹9 ಕೋಟಿ
ರಮ್ಯಾ ಕೃಷ್ಣ- ₹2.5 ಕೋಟಿ
ಎಸ್ ಜೆ ಸೂರ್ಯ- ₹4 ಕೋಟಿ
ವಿಜಯ್ ಸೇತುಪತಿ- ₹9 ಕೋಟಿ
ಫಹಾದ್ ಫಾಸಿಲ್ - ₹3 ಕೋಟಿ
ತಮನ್ನಾ ಭಾಟಿಯಾ- ₹2 ಕೋಟಿ
ಯೋಗಿ ಬಾಬು- ₹3.5 ಕೋಟಿ
ಅನ್ನ ರಾಜನ್- ₹5 ಕೋಟಿ
ಜತಿನ್ ಸರ್ನ- ₹2 ಕೋಟಿ


Click it and Unblock the Notifications
