Jailer 2:ಎಳ್ಳೆ ಬೆಲ್ಲ ತಿಂದು 'ಜೈಲರ್ 2'ಗೆ ಮುಹೂರ್ತ ಇಟ್ಟ ದಿಲೀಪ್-ಅನಿರುದ್ಧ್; ರಜನಿ ಸಿಕ್ಕಾಪಟ್ಟೆ ರಗಡ್
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್‌ಗೆ ಮೆಗಾ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದು 'ಜೈಲರ್'. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಬಾಕ್ಸಾಫೀಸ್‌ನಲ್ಲೂ ಟೈಗರ್ ಹುಕುಂ ವರ್ಕ್‌ಔಟ್ ಆಗಿತ್ತು. ನಿರೀಕ್ಷೆಗೂ ಮೀರಿದ ಸಕ್ಸಸ್ ಸಿಕ್ಕಿತ್ತು. 70ರ ಇಳಿ ವಯಸ್ಸಿನಲ್ಲೂ ತಾನೇ ಸೂಪರ್‌ಸ್ಟಾರ್ ಅನ್ನೋದನ್ನು ರಜನಿಕಾಂತ್ ಸಾಬೀತು ಮಾಡಿದ್ದರು.
2023ರಲ್ಲಿ ತೆರೆಕಂಡಿದ್ದ 'ಜೈಲರ್' ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆದಿತ್ತು. ಕರ್ನಾಟಕದಲ್ಲೂ ಹೆಚ್ಚು ಕಡಿಮೆ ಸುಮಾರು 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ರಜನಿಕಾಂತ್ ಸಿನಿಮಾವನ್ನು ಕನ್ನಡದಲ್ಲಿ ವೀಕ್ಷಿಸಿ ಕನ್ನಡಿಗರು ಸಂಭ್ರಮಿಸಿದ್ದರು. 'ಜೈಲರ್' ಆ ಮಟ್ಟಿಗೆ ಸದ್ದು ಮಾಡಿತ್ತು. ಇದೇ ಜೋಷ್‌ನಲ್ಲಿ 'ಜೈಲರ್ 2' ಬರುತ್ತೆ ಅಂತ ನಿರ್ದೇಶಕರು ಸುಳಿವು ಬಿಟ್ಟು ಕೊಟ್ಟಿದ್ದರು.

ಅಷ್ಟಕ್ಕೂ 'ಜೈಲರ್ 2' ಮೇಲೆ ಕನ್ನಡಿಗರು ಯಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ರಜನಿಕಾಂತ್ ಸಿನಿಮಾದಲ್ಲಿ ಕೇವಲ 10 ನಿಮಿಷ ಎಂಟ್ರಿ ಕೊಟ್ಟು ಶಿಳ್ಳೆ ಗಿಟ್ಟಿಸಿಕೊಂಡಿದ್ದ ಶಿವಣ್ಣ 'ಜೈಲರ್ 2'ನಲ್ಲೂ ಇರುತ್ತಾರಾ? ರಜನಿಕಾಂತ್, ನೆಲ್ಸನ್ ದಿಲೀಪ್‌ಕುಮಾರ್, ಅನಿರುದ್ಧ್ ಅನೌನ್ಸ್ ಮಾಡಿದ 'ಜೈಲರ್ 2'ನಲ್ಲಿ ಶಿವಣ್ಣನ ಬಗ್ಗೆ ಏನಾದರೂ ಸುಳಿವು ಇದೇ?
ಸಂಕ್ರಾಂತಿ ಸಂಭ್ರಮದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. 'ಜೈಲರ್' ಕಾಂಬಿನೇಷನ್ ಮತ್ತೆ ಒಂದಾಗಿದ್ದು, ಶೂಟಿಂಗ್‌ಗೆ ರೆಡಿಯಾಗುತ್ತಿದೆ. ರಜನಿಕಾಂತ್, ನೆಲ್ಸನ್ ದಿಲೀಪ್ ಕುಮಾರ್, ಅನಿರುದ್ಧ್ ರವಿಚಂದರ್ ಕಾಂಬಿನೇಷನ್ 'ಜೈಲರ್'ನಲ್ಲಿ ಮೋಡಿ ಮಾಡಿತ್ತು. ಅದೇ ಕಾಂಬಿನೇಷನ್ ಸುಗ್ಗಿ ಹಬ್ಬದಲ್ಲಿ ಸಖತ್ ಆಗಿಯೇ ಸೌಂಡ್ ಮಾಡಿದೆ. 'ಜೈಲರ್ 2' ಅನೌನ್ಸ್‌ಮೆಂಟ್ ಟೀಸರ್ ಅನ್ನು ಕಣ್ತುಂಬಿಕೊಂಡು ಥ್ರಿಲ್ ಆಗಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್'ನಲ್ಲಿ ಇದ್ದಿದ್ದಕ್ಕಿಂತ 'ಜೈಲರ್ 2'ನಲ್ಲಿ ವೈಲೆಂಟ್ ಆಗಿರುತ್ತಾರೆ ಅನ್ನೋದು ಟೀಸರ್ ನೋಡಿದ ಮೇಲೆ ಕನ್ಫರ್ಮ್ ಆಗಿದೆ. ಡೈರೆಕ್ಟರ್, ಮ್ಯೂಸಿಕ್ ಡೈರೆಕ್ಟರ್ ಗೋವಾದಲ್ಲಿ ಬೀಡುಬಿಟ್ಟಿದ್ದು ನೋಡಿದರೆ, ಕಥೆ ಅಲ್ಲಿಂದ ಶುರುವಾಗಬಹುದು. ಇಲ್ಲ ಅಲ್ಲಿಂದ ಕೊನೆಗೊಳ್ಳುವ ಸುಳಿವು ಏನಾದರೂ ಕೊಟ್ಟಿದ್ದಾರಾ? ಇಂತಹದ್ದೊಂದು ಪ್ರಶ್ನೆಯಂತೂ ಕಾಡುತ್ತೆ. ಅನೌನ್ಸ್ ಟೀಸರ್‌ನಲ್ಲಿ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಗೋವಾ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಈ ಟೀಸರ್‌ನಲ್ಲಿ ಟಿಪಿಕಲ್ ರಜನಿಕಾಂತ್ ಸ್ಟೈಲ್ ಎದ್ದು ಕಾಣುತ್ತಿದೆ. ಅದರಲ್ಲೂ 'ಜೈಲರ್ 2' ಅನೌನ್ಸ್‌ಮೆಂಟ್ ಟೀಸರ್‌ನಲ್ಲಿ 2:51 ಸೆಕೆಂಡುಗಳಲ್ಲಿ ಬರುವ ಕನ್ನಡದ ದೃಶ್ಯಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೆ ಹಳೇ ರಜನಿಕಾಂತ್ ನೋಡಿದಂತೆ ಆಯ್ತು ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ಜೊತೆಗೆ ಪಾರ್ಟ್ 1ರಲ್ಲಿ ಸದ್ದು ಮಾಡಿದ್ದ ಶಿವಣ್ಣ ಪಾರ್ಟ್ 2ನಲ್ಲಿ ಇರುತ್ತಾರಾ? ಅಂತ ಕುತೂಹಲದಿಂದ ನೋಡುತ್ತಿದ್ದಾರೆ.
ಸದ್ಯ 'ಜೈಲರ್ 2' ಅನೌನ್ಸ್‌ಮೆಂಟ್ ಟೀಸರ್‌ನಲ್ಲಿ ರಜನಿ ಅಷ್ಟೇ ಕಾಣ ಸಿಗುತ್ತಾರೆ. 'ಜೈಲರ್' ನಲ್ಲಿ ಗೆಸ್ಟ್ ಅಪಿಯರೆನ್ಸ್ ಕೊಟ್ಟಿದ್ದ ಶಿವಣ್ಣ, ಮೋಹನ್‌ಲಾಲ್, ಜಾಕಿಶ್ರಾಫ್ ಪಾರ್ಟ್ 2ನಲ್ಲೂ ಇರುತ್ತಾರಾ? ಅನ್ನೋ ಸುಳಿವನ್ನು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಬಿಟ್ಟುಕೊಟ್ಟಿಲ್ಲ. ಆದರೆ, ಟೀಸರ್ ರಿಲೀಸ್‌ಗೂ ಮುನ್ನ ಶಿವಣ್ಣ, ಮೋಹನ್, ಜಾಕಿ ಶ್ರಾಪ್ ಪಾರ್ಟ್ 2ನಲ್ಲೂ ಇರುತ್ತಾರೆ. ಅಷ್ಟೇ ಅಲ್ಲದೆ ಇವರೊಂದಿಗೆ ನಂದಮೂರಿ ಬಾಲಕೃಷ್ಣ ಕೂಡ ಸೇರ್ಪಡೆಯಾಗಲಿದ್ದಾರೆ ಅನ್ನೋ ಸುದ್ದಿನೂ ಹರಿದಾಡುತ್ತಿದೆ. ಏನೇ ಇದ್ರೂ 'ಕೂಲಿ' ಮುಗಿಯುತ್ತಿದ್ದಂತೆ ಟೈಗರ್ ಹುಕುಂ ಶುರು.


Click it and Unblock the Notifications











