ಶಿವಣ್ಣ, ಮೋಹನ್ ಲಾಲ್, ಜಾಕಿ ಲುಕ್ ಕೊಟ್ಬಿಟ್ರು:'ಜೈಲರ್' ರಜನಿ ಎಂಟ್ರಿ ಕೊಡೋ ಸಮಯ ಬಂದೇ ಬಿಡ್ತು!

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಲುಕ್ ಕೊಟ್ಟಿದ್ದು ಗೊತ್ತೇ ಇದೆ. ರಜನಿಯನ್ನು ಈ ಲುಕ್‌ನಲ್ಲಿ ಯಾವಾಗ ನೋಡುತ್ತೇವೋ ಅಂತ ಕಾದು ಕೂತವರಿಗೆ ಟೀಮ್ ಸರ್ಪ್ರೈಸ್ ಕೊಟ್ಟಿದೆ. ಸಿನಿಮಾ ರಿಲೀಸ್ ಆಗೋ ಅಧಿಕೃತ ದಿನವನ್ನು ರಜನಿಕಾಂತ್ ಸ್ಟೈಲ್‌ನಲ್ಲಿ ಘೋಷಣೆ ಮಾಡಿದೆ.

ರಜನಿಕಾಂತ್ ಸಿನಿಮಾ ರಿಲೀಸ್ ಆಗುತ್ತಿದೆ ಅದರ ಖದರೇ ಬೇರೆ. ಇಡೀ ದೇಶವೇ ಸಿನಿಮಾ ನೋಡುವುದಕ್ಕೆ ಸಜ್ಜಾಗಿಬಿಡುತ್ತೆ. ಅದರಲ್ಲೂ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳು ನಟಿಸಿದ್ದಾರೆ ಅಂದ್ಮೇಲೆ ರಜನಿ ಅಭಿಮಾನಿಗಳಿಗೆ ಮಸ್ತ್ ಮನರಂಜನೆ ಗ್ಯಾರಂಟಿ.

Rajinikanth, shivarajkumar, Mohanlal Starrer Jailer Releasing on August 10th

ಅಂದ್ಹಾಗೆ, 'ಜೈಲರ್' ಸಿನಿಮಾ ಆಗಸ್ಟ್ 10 ರಂದು ರಿಲೀಸ್ ಆಗುತ್ತಿದೆ. ಇದೇ ವೇಳೆ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಡೇಟ್ ಅನೌನ್ಸ್ ಮಾಡಿದ್ದವು. ಆದ್ರೀಗ ರಜನಿಕಾಂತ್ ಎಂಟ್ರಿಗೆ ಈ ಸಿನಿಮಾಗಳೆಲ್ಲಾ ಏನಾಗುತ್ತೋ.. ಸದ್ಯಕ್ಕಂತೂ ಕುತೂಹಲ.

ಜೈಲರ್ ಗ್ಲಿಂಪ್ ಮಸ್ತ್

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಬಿಡುಗಡೆ ದಿನವನ್ನು ಗ್ಲಿಂಪ್ಸ್ ಮೂಲಕ ಪ್ರಕಟಿಸಿದೆ. 47 ಸೆಕೆಂಡ್‌ಗಳ ಈ ಚಿಕ್ಕ ಗ್ಲಿಂಪ್ಸ್ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.

Rajinikanth, shivarajkumar, Mohanlal Starrer Jailer Releasing on August 10th

'ಜೈಲರ್‌' ಗ್ಲಿಂಪ್ಸ್ ವಿಶೇಷತೆ ಏನಂದ್ರೆ, ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದ ಟಾಪ್ ಸ್ಟಾರ್‌ಗಳು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸೂಪರ್‌ಸ್ಟಾರ್ ಶಿವರಾಜ್ ಕುಮಾರ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್, ಬಾಲಿವುಡ್‌ನ ಜಾಕಿ ಶ್ರಾಫ್, ತೆಲುಗು ನಟ ಸುನೀಲ್ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಇವರೆಲ್ಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೋ.. ಅಥವಾ ಪ್ರಮುಖ ಪಾತ್ರದಲ್ಲಿ ಇರುತ್ತಾರಾ? ಅನ್ನೋ ಕುತೂಹಲವಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ

'ಜೈಲರ್' ಸಿನಿಮಾದಲ್ಲಿ ದಿಗ್ಗಜರ ಜೊತೆಗೆ ಇನ್ನೂ ಪ್ರಮುಖ ತಾರೆಯರು ನಟಿಸಿದ್ದಾರೆ. ರಮ್ಯಾಕೃಷ್ಣ, ವಸಂತ ರವಿ, ವಿನಾಯಕನ್, ಯೋಗಿ ಬಾಬು ಸೇರಿದಂತೆ ಪ್ರಮುಖ ಜನಪ್ರಿಯ ಕಲಾವಿದರ ದೊಡ್ಡ ತಂಡವೇ ಇದೆ. ಬೇರೆ ಚಿತ್ರರಂಗ ಕಲಾವಿದರು ಇರೋದ್ರಿಂದ ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗುವ ಸಾಧ್ಯತೆಯಿದೆ.

ಇನ್ನು 'ಜೈಲರ್' ಸಿನಿಮಾ ರಿಲೀಸ್ ವೇಳೆನೇ ಶಿವ ಕಾರ್ತಿಕೇಯನ್ ನಟನೆಯ 'ಮಾವೀರನ್' ಸಿನಿಮಾ ರಿಲೀಸ್ ಆಗುತ್ತಿದೆ. ಆಗಸ್ಟ್ 11ರಂದು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆದರೆ 'ಜೈಲರ್' ಕೂಡ ಇದೇ ವೇಳೆ ರಿಲೀಸ್ ಆಗುತ್ತಿರುವುದರಿಂದ ಮುಂದಕ್ಕೆ ಹೋಗಬಹುದು ಎಂಬ ನಿರೀಕ್ಷೆಯಿದೆ.

ರಜನಿ ಜೊತೆ ರಮ್ಯಾಕೃಷ್ಣ

'ಜೈಲರ್' ಸಿನಿಮಾ ರಜನಿಕಾಂತ್ ಹುಟ್ಟುಹಬ್ಬದಂದು ಅನೌನ್ಸ್ ಆಗಿತ್ತು. ಕಳೆದ ವರ್ಷ ಡಿಸೆಂಬರ್ 12 ರಂದು ಈ ಸಿನಿಮಾದ ಫಸ್ಟ್ ಲುಕ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. 'ಜೈಲರ್' ಕಥೆ ಇಂಟ್ರೆಸ್ಟಿಂಗ್ ಆಗಿದ್ದು, ಕೇಂದ್ರ ಕಾರಾಗೃಹದಲ್ಲಿ 24 ಗಂಟೆಗಳಲ್ಲಿ ಘಟನೆಯನ್ನು ನೆಲ್ಸನ್ ದಿಲೀಪ್‌ಕುಮಾರ್ ತೆರೆಮೇಲೆ ತರುತ್ತಿದ್ದಾರೆ ಎನ್ನಲಾಗಿದೆ. ಅನಿರುದ್ಧ್ ರವಿಚಂದರ್ ಈ ಸಿನಿಮಾಗೆ ಟ್ಯೂನ್ ಹಾಕುತ್ತಿದ್ದಾರೆ.

'ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಎದುರು ರಮ್ಯಾ ಕೃಷ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಎವರ್‌ಗ್ರೀನ್ ಸಿನಿಮಾಗಳು ಬಂದಿವೆ. ಹೀಗಾಗಿ ಈ ಬಾರಿಯೂ ಬ್ಲಾಕ್ ಬಸ್ಟರ್ ಸಿನಿಮಾವನ್ನು ಕಾಲಿವುಡ್ ನಿರೀಕ್ಷೆ ಮಾಡುತ್ತಿದೆ.

More from Filmibeat

English summary
Rajinikanth, Shivarajkumar, Mohanlal Starrer Jailer Releasing on August 10th. Nelson Dilipkumar directed Jailer releasing on Independence day weekend, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X