'ಜೈಲರ್' ಶೂಟಿಂಗ್ ಫಿನಿಶ್: ಕೇಕ್ ಕಟ್ ಮಾಡಿ.."ಥಿಯೇಟರ್‌ನಲ್ಲಿ ಸಿಗೋಣ" ಎಂದ ತಲೈವಾ.. ಆಗಸ್ಟ್ 10ಕ್ಕೆ ಹಬ್ಬ ಗ್ಯಾರಂಟಿ

ಸೂಪರ್‌ಸ್ಟಾರ್ ರಜನಿಕಾಂತ್ 169ನೇ ಸಿನಿಮಾ 'ಜೈಲರ್'. ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಈ ಸಿನಿಮಾ ಮೊದಲಿನ ಸಾಲಿನಲ್ಲಿದೆ. 'ಅಣ್ಣಾತ್ತೆ' ಬಳಿಕ ರಜನಿಕಾಂತ್ ನಟಿಸುತ್ತಿರುವ ಸಿನಿಮಾ ಆಗಿರುವುದರಿಂದ ತಲೈವಾ ಅಭಿಮಾನಿಗಳು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ರಜನಿಕಾಂತ್ ಸಿನಿಮಾ ರಿಲೀಸ್ ಆಗೋದಲ್ಲ, ಸೆಟ್ಟೇರಿದೆ ಅಂದ್ರೆ ಅಭಿಮಾನಿಗಳು ಹಬ್ಬ ಆಚರಿಸುತ್ತಾರೆ. ಇನ್ನು ಸಿನಿಮಾ ರಿಲೀಸ್ ಆಗುತ್ತಿದೆ ಅಂದ್ರೆ ಹೇಗಿರಬೇಡಾ? ರಜನಿಯ 169ನೇ ಸಿನಿಮಾ ಕೂಡ ಈ ಹಿಂದೆ ನಟಿಸಿದ ಚಿತ್ರಗಳಿಗಿಂತ ಹೆಚ್ಚು ಬಜ್ ಕ್ರಿಯೇಟ್ ಮಾಡಿದೆ.

Rajinikanth, Tamannah Bhatia starrer Jailer movie shooting finished with the song

'ಜೈಲರ್' ರಜನಿಕಾಂತ್ ವೃತ್ತಿನ ಬದುಕಿನಲ್ಲೂ ವಿಶೇಷ ಸಿನಿಮಾ. ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು ನಟಿಸಿದ್ದಾರೆ. ಅಲ್ಲದೆ ತಮಿಳಿನ ಸ್ಟಾರ್ ನಿರ್ದೇಶಕ ಆಕ್ಷನ್ ಕಟ್ ಹೇಳಿರೋದ್ರಿಂದ ಯಾವಾಗ ರಿಲೀಸ್ ಆಗುತ್ತೋ ಸೂಪರ್‌ಸ್ಟಾರ್ ಫ್ಯಾನ್ಸ್ ಚಡಪಡಿಸುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರತಂಡ ಶೂಟಿಂಗ್ ಮುಗಿಸಿ ಸಿಹಿ ಸುದ್ದಿ ನೀಡಿದೆ.

'ಜೈಲರ್' ಶೂಟಿಂಗ್ ಫಿನಿಶ್

ಇತ್ತೀಚೆಗೆ ರಿಲೀಸ್ ಆಗಿದ್ದ ಚಿಕ್ಕದೊಂದು 'ಜೈಲರ್' ತುಣುಕು ಹಲ್‌ಚಲ್ ಎಬ್ಬಿಸಿತ್ತು. ಕಾರಿನಿಂದ ಇಳಿದು ಬರುವ ಸೂಪರ್‌ಸ್ಟಾರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದರು. ಅಂದ್ಹಾಗೆ, ಸಿನಿಮಾದ ಹೆಸರೇ ಹೇಳುವಂತೆ ರಜನಿಕಾಂತ್ 'ಜೈಲರ್' ಪಾತ್ರದಲ್ಲಿ ಕಾಣಿಸುತ್ತಿದ್ದಾರಾ? ಇಲ್ಲಾ ನಿರ್ದೇಶಕರು ಏನಾದ್ರೂ ಕಥೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರಾ? ಚಿಕ್ಕದೊಂದು ಪ್ರಶ್ನೆ ಇದ್ದರೂ, ರಜನಿಕಾಂತ್ ಅನ್ನು ಖಡಕ್ ಪಾತ್ರದಲ್ಲಿ ಎಂಟ್ರಿ ಕೊಡುತ್ತಾರೆ ಅನ್ನೋದು ಮಾತ್ರ ಪಕ್ಕಾ.

ಸಿನಿಮಾ ಆರಂಭ ಆದಲ್ಲಿಂದ 'ಜೈಲರ್' ಸದ್ದು ಮಾಡುತ್ತಲೇ ಇತ್ತು. ಈಗ ಈ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದೆ. ಸನ್ ಫಿಕ್ಚರ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಹೀಗಾಗಿ 'ಜೈಲರ್' ಪವರ್‌ಫುಲ್ ಆಗಿರುತ್ತೆ ಅನ್ನೋ ಅಚಲ ನಂಬಿಕೆಯಲ್ಲಿ ಪ್ಯಾನ್ಸ್ ಇದ್ದಾರೆ.

ಆಗಸ್ಟ್ 10ಕ್ಕೆ ಹಬ್ಬ ಗ್ಯಾರಂಟಿ

'ಜೈಲರ್' ಸಿನಿಮಾ ಶೂಟಿಂಗ್ ಹಲವು ದಿನಗಳಿಂದ ಶೂಟಿಂಗ್ ಮಾಡುತ್ತಲೇ ಇತ್ತು. ಸಿನಿಮಾ ಎಳೆಯನ್ನು ಇದೂವರೆಗೂ ಬಿಟ್ಟುಕೊಡದ ಚಿತ್ರತಂಡ ಚಿಕ್ಕದೊಂದು ತುಣುಕು ರಿಲೀಸ್ ಮಾಡಿ ಥ್ರಿಲ್ ಕೊಟ್ಟಿತ್ತು. ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ಮಾಡಿರೋ ಚಿತ್ರತಂಡ ಕೊನೆಯ ಹಂತ ಶೂಟಿಂಗ್ ಮುಗಿಸಿದೆ.

'ಜೈಲರ್' ಸಿನಿಮಾದ ಶೂಟಿಂಗ್ ಅನ್ನು ಹಾಡೊಂದರಿಂದ ಮುಕ್ತಾಯ ಮಾಡಲಾಗಿದೆ. ನಟಿ ತಮನ್ನಾ, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಹಾಗೂ ತಂಡದೊಂದಿಗೆ ರಜನಿಕಾಂತ್ ಕೇಕ್ ಮಾಡಿ ಸಂಭ್ರಮಿಸಿದ್ದಾರೆ. ಈ ಫೋಟೊಗಳನ್ನು ಸನ್ ಪಿಕ್ಚರ್ಸ್ ಶೇರ್ ಮಾಡಿಕೊಂಡಿದ್ದು, ಥಿಯೇಟರ್‌ಗಳಲ್ಲಿ ಸಿಗೋಣ ಅಂತ ಟ್ವೀಟ್ ಮಾಡಲಾಗಿದೆ.

ರಜನಿ ಜೊತೆ ದಿಗ್ಗಜರ ಸಮಾಗಮ

'ಜೈಲರ್' ಸಿನಿಮಾದ ಅತೀ ದೊಡ್ಡ ಹೈಲೈಟ್ ಅಂದರೆ, ರಜನಿ ಜೊತೆ ಭಾರತೀಯ ಚಿತ್ರರಂಗದ ದಿಗ್ಗಜರು ನಟಿಸಿರೋದು ವಿಶೇಷ. ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿದೆ. ಇನ್ನು ಬಾಲಿವುಡ್‌ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ.

ಇವರೆಲ್ಲರನ್ನೂ ಒಂದೇ ಸಿನಿಮಾಗಾಗಿ ಕರೆತಂದಿದ್ದು, 'ಕೊಲಮಾವು ಕೋಕಿಲಾ','ಡಾಕ್ಟರ್'ನಂತಹ ಸೂಪರ್‌ ಹಿಟ್ ಸಿನಿಮಾಗಳನ್ನು ನೀಡಿರೋ ನೆಲ್ಸನ್‌ ದಿಲೀಪ್ ಕುಮಾರ್. ಈ ಹಿಂದೆ ದಳಪತಿ ವಿಜಯ್‌ಗಾಗಿ 'ಬೀಸ್ಟ್' ಸಿನಿಮಾ ನಿರ್ದೇಶಿಸಿದ್ದರು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಅಂದ್ಹಾಗೆ ಜೈಲರ್ ಆಗಸ್ಟ್ 10ರಂದು ರಿಲೀಸ್ ಆಗುತ್ತಿದೆ.

More from Filmibeat

English summary
Rajinikanth, Tamannah Bhatia starrer Jailer movie shooting finished with the song. Jailer Movie releasing on August 10th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X