₹350 ಕೋಟಿ 'ಕೂಲಿ'ಯ ಪ್ರಿ-ರಿಲೀಸ್ ಬ್ಯುಸಿನೆಸ್ ಎಷ್ಟು? ರಜನಿ, ಲೋಕೇಶ್ ಸಂಭಾವನೆ ಕಥೆಯೇನು?
ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ 'ಕೂಲಿ' ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸೂಪರ್‌ಸ್ಟಾರ್ ರಜನಿಕಾಂತ್, ನಾಗಾರ್ಜುನ, ಉಪೇಂದ್ರ, ಆಮಿರ್ ಖಾನ್ ಅಂತಹ ದಿಗ್ಗಜರು ನಟಿಸಿರುವ ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಸಿನಿಮಾ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಲೋಕೇಶ್ ಕನಕರಾಜ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಕ್ರೇಜ್ ದುಪ್ಪಟ್ಟಾಗುವುದಕ್ಕೆ ಕಾರಣ.
'ಕೂಲಿ' ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾ. ಹೀಗಾಗಿ 'ಕೂಲಿ' ಕ್ರೇಜ್ ಇದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿದೆ ಎಂದು ವರದಿಗಳಾಗಿದೆ. ಮಲ್ಟಿಸ್ಟಾರರ್ ಅಂದ್ಮೇಲೆ ಮುಗಿಬಿದ್ದು ಸಿನಿಮಾವನ್ನು ಖರೀದಿ ಮಾಡುತ್ತಾರೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಪ್ರಿ-ರಿಲೀಸ್ ಬ್ಯುಸಿನೆಸ್ ಮುಗಿದಿದೆ ಎನ್ನಲಾಗಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಜೈಲರ್' ಸಿನಿಮಾ ಯಶಸ್ಸನ್ನು ಕಂಡಿರುವ ಸನ್ ಪಿಕ್ಚರ್ಸ್ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾದ ನಿರೀಕ್ಷೆಯಲ್ಲಿದೆ. ಆಗಸ್ಟ್ 14ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಜೊತೆ ಜೊತೆಗೆ ವ್ಯವಹಾರವನ್ನು ಮುಗಿಸುತ್ತಿದೆ. ಹಾಗಿದ್ದರೆ, ಕೂಲಿ ಪ್ರಿ ರಿಲೀಸ್ ಬ್ಯುಸಿನೆಸ್ ಹೇಗಾಗಿದೆ? ಸ್ಯಾಟಲೈಟ್, ಡಿಜಿಟಲ್, ಆಡಿಯೋದಿಂದ ಎಷ್ಟು ಹಣ ಬಂದಿದೆ? ಬಜೆಟ್ ಎಷ್ಟು? ರಜನಿಕಾಂತ್, ಲೋಕೇಶ್ ಕನಕರಾಜ್ ಸಂಭಾವನೆ ಎಷ್ಟು? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಕೂಲಿ' ಬಜೆಟ್ ಎಷ್ಟು?
ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೂಲಿ' ಸಿನಿಮಾವನ್ನು ಸುಮಾರು ₹350 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಸಂಭಾವನೆಗೆ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್, ಲೋಕೇಶ್ ಕನಕರಾಜ್, ನಾಗಾರ್ಜುನ, ಉಪೇಂದ್ರ ಸೇರಿದಂತೆ ಸಿನಿಮಾ ತಂಡದ ಸಂಭಾವನೆ 250 ಕೋಟಿ ರೂಪಾಯಿ ದಾಟುತ್ತಿದ್ದು, ಹೆಚ್ಚು ಕಡಿಮೆ 100 ಕೋಟಿ ರೂಪಾಯಿ ವೆಚ್ಚದಲ್ಲಿ 'ಕೂಲಿ' ಸಿನಿಮಾವನ್ನು ನಿರ್ಮಾಣ ಮಾಡಿರುವ ಬಗ್ಗೆ ಲೆಕ್ಕ ಸಿಕ್ಕಿದೆ.

ಪ್ರಿ-ರಿಲೀಸ್ ಬ್ಯುಸಿನೆಸ್ ಎಷ್ಟು?
ರಜನಿಕಾಂತ್ ಸಿನಿಮಾ ರಿಸ್ಕ್ ಫ್ರೀ ಸಿನಿಮಾ ಎಂದು ಪಿಂಕ್ ವಿಲ್ಲ ವರದಿ ಮಾಡಿದೆ. ಅಷ್ಟೇ ಅಲ್ಲದೆ, ಬಿಡುಗಡೆಗೂ ಮುನ್ನವೇ ಸೂಪರ್‌ಸ್ಟಾರ್ ಸಿನಿಮಾಗೆ ಯಾವ್ಯಾವ ರೈಟ್ಸ್‌ನಿಂದ ಎಷ್ಟು ಹಣ ಬಂದಿದೆ ಎಂದೂ ವರದಿ ಮಾಡಿದೆ. ಈ ಪ್ರಕಾರ, 'ಕೂಲಿ' ಬಿಡುಗಡೆಗೂ ಮುನ್ನವೇ ಸುಮಾರು 240 ಕೋಟಿ ರೂಪಾಯಿ ವ್ಯವಹಾರ ಮಾಡಿದೆ.
ಡಿಜಿಟಲ್ ₹130 ಕೋಟಿ
ಸ್ಯಾಟಲೈಟ್ ₹90 ಕೋಟಿ
ಮ್ಯೂಸಿಕ್ ₹20 ಕೋಟಿ
ಒಟ್ಟು ₹240 ಕೋಟಿ
ರಜನಿ, ಲೋಕೇಶ್ ಸಂಭಾವನೆ ಎಷ್ಟು?
ಇನ್ನು ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಸಂಭಾವನೆ ಬಗ್ಗೆನೂ ಪಿಂಕ್‌ವಿಲ್ಲಾ ವರದಿ ಮಾಡಿದೆ. ಈ ಸಿನಿಮಾಗೆ ರಜನಿಕಾಂತ್ 280 ಕೋಟಿ ರೂಪಾಯಿ ಸಂಭಾವನೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಈ ವರದಿಯಲ್ಲಿ 150 ಕೋಟಿ ರೂಪಾಯಿ ಎನ್ನಲಾಗಿದೆ. ಹಾಗೇ ಲೋಕೇಶ್ ಕನಕರಾಜ್ ನಿರ್ದೇಶನಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಮೂರು ಭಾಷೆಯಲ್ಲಿ ರಿಲೀಸ್?
'ಜೈಲರ್' ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿತ್ತು. ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಸುಮಾರು 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ, ಈ ಬಾರಿ 'ಕೂಲಿ' ಸಿನಿಮಾವನ್ನು ಕನ್ನಡದಲ್ಲಿ ರಿಲೀಸ್ ಮಾಡೋದು ಅನುಮಾನ ಎನ್ನಲಾಗಿದೆ. ಸದ್ಯಕ್ಕೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಏನಕ್ಕೂ ಇನ್ನೂ ಎರಡೂವರೆ ತಿಂಗಳು ಇರುವುದರಿಂದ ಕನ್ನಡದಲ್ಲಿ ರಿಲೀಸ್ ಆದರೂ ಆಗಬಹುದು.


Click it and Unblock the Notifications











