ರಜನಿ ಟ್ರೋಲ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಫ್ಯಾನ್ಸ್; ದಳಪತಿ ವಿಜಯ್-ಕೀರ್ತಿ ಸುರೇಶ್ ಫೋಟೊ ಇಟ್ಟು ಕಿಡಿ!
ಸೂಪರ್‌ಸ್ಟಾರ್ ರಜನಿಕಾಂತ್ ನಸೀಬು ಯಾಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇದ್ದಾರೆ. ಒಂದು ವಿವಾದದಿಂದ ಹೊರಬರುತ್ತಿದ್ದಂತೆ ಮತ್ತೊಂದು ವಿವಾದ ಅವರನ್ನು ಸುತ್ತಿಕೊಳ್ಳುತ್ತಿದೆ. ಇತ್ತೀಚೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಜ್ ಪ್ರಿ ವೆಡ್ಡಿಂಗ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕ್ಯಾಮರಾಮ್ಯಾನ್‌ಗೆ ಪೋಸ್ ಕೊಡುವಾಗ ರಜನಿಯ ವರ್ತನೆ ಭಾರೀ ಚರ್ಚೆಯಾಗಿತ್ತು.
ಮನೆಕೆಲಸದ ಹೆಂಗಸನ್ನು ಕೈ ಸನ್ನೆ ಮೂಲಕ ನಿಲ್ಲಿಸಿದ್ದಕ್ಕೆ ರಜನಿ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದಳಪತಿ ವಿಜಯ್ ಅಭಿಮಾನಿಗಳು ಅಖಾಡಕ್ಕೆ ಇಳಿದಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್ ವಿಡಿಯೋ ಹಾಗೂ ಫೋಟೊಗಳನ್ನು ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು.

ಇತ್ತೀಚೆಗೆ ರಜನಿಕಾಂತ್ ಕುಟುಂಬ ಸಮೇತ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಹೆ ಹೋದಾಗ ಸೀಟಿನಲ್ಲಿ ಕೂರುವ ಬದಲು ನಿಲ್ಲಿಸಿದ್ದರು. ಇದು ಕೂಡ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅಂಬಾನಿ ಪುತ್ರನ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲೂ ಇಂತಹದ್ದೇ ಒಂದು ವಿವಾದಕ್ಕೆ ಸಿಕ್ಕಿಕೊಂಡು ವಿಜಯ್ ಅಭಿಮಾನಿಗಳ ಟ್ರೋಲ್‌ಗೆ ಗುರಿಯಾಗಿದ್ದರು. ಹಾಗಂತ ತಲೈವಾ ಅಭಿಮಾನಿಗಳೇನು ಸುಮ್ಮನೆ ಕೂತಿಲ್ಲ. ದಳಪತಿ ವಿಜಯ್ ಹಳೆ ಫೋಟೊ ಇಟ್ಟು ಟ್ರೋಲ್ ಮಾಡುವುದಕ್ಕೆ ಆರಂಭಿಸಿದ್ದಾರೆ.
ರಜನಿಕಾಂತ್ ವಿಡಿಯೋಗಳನ್ನು ಶೇರ್ ಮಾಡಿ ದಳಪತಿ ಫ್ಯಾನ್ಸ್ ವಿವಾದವನ್ನು ಸೃಷ್ಟಿಸಿದ್ದರು. ಇಷ್ಟೇ ಅಲ್ಲದೆ " ಇವರು ದೇಶಾದ್ಯಂತ ಸೂಪರ್‌ಸ್ಟಾರ್ ಎಂದು ಆಚರಿಸಲ್ಪಡುವ ವ್ಯಕ್ತಿ" ಅಂತಲ್ಲ ಕಮೆಂಟ್ ಮಾಡಿದ್ದರು. ಇದು ರಜನಿಕಾಂತ್ ಅಭಿಮಾನಿಗಳನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತ್ತು. ಹೀಗಾಗಿ ಅವರೇನು ಸುಮ್ಮನೆ ಕೂತಿಲ್ಲ. ಹಳೆಯ ದೃಶ್ಯವೊಂದನ್ನು ಹುಡುಕಿ ತೆಗೆದು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದ ತಣ್ಣಗಿದ್ದ ರಜನಿ ಹಾಗೂ ವಿಜಯ್ ಅಭಿಮಾನಿಗಳು ಮತ್ತೆ ಕಿತ್ತಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಅಂದ್ರೆ? 'ಸರ್ಕಾರ್' ಸಿನಿಮಾದ ಕಾರ್ಯಕ್ರಮದ ವೇಳೆ ದಳಪತಿ ವಿಜಯ್ ತಮ್ಮ ಪತ್ನಿ ಸಂಗೀತಾ ಬಳಿ ನಿಲ್ಲುವ ಬದಲು ನಟಿ ಕೀರ್ತಿ ಸುರೇಶ್ ಬಳಿ ನಿಂತಿದ್ದಾರೆ. ಇದೇ ವಿಡಿಯೋವನ್ನು ಇಟ್ಟುಕೊಂಡು ರಜನಿಕಾಂತ್ ಫ್ಯಾನ್ಸ್ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

'ಜೈಲರ್' ಸಿನಿಮಾ ಬಳಿಕ ರಜನಿಕಾಂತ್ ಹಾಗೂ ವಿಜಯ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡುತ್ತಿದ್ದರು. ಆಗ ವೇಳೆ ರಜನಿಕಾಂತ್ ಕಾಗೆ- ಗುಡುಗನ ಕಥೆ ಹೇಳಿ ವಿಜಯ್ ಫ್ಯಾನ್ಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಇದರಿಂದ ವಿಜಯ್ ಫ್ಯಾನ್ಸ್ ಗರಂ ಆಗಿದ್ದರು. ಅದೇ ಲಾಲ್ ಸಲಾಂ ಸಿನಿಮಾದ ಈವೆಂಟ್ ವೇಳೆ ಕಾಗೆ- ಗುಡುಗನ ಕಥೆಗೆ ಸಮಜಾಯಿಷಿ ಕೊಡಿಸಿ ಸುಮ್ಮನಾಗಿಸಿದ್ದರು. ಆಗ ತಣ್ಣಗಾಗಿದ್ದ ಈ ಫ್ಯಾನ್ಸ್ ವಾರ್ ಈಗ ಮತ್ತೆ ಶುರುವಾಗಿದ್ದು, ಇನ್ಯಾವ ಹಂತಕ್ಕೆ ಮುಟ್ಟುತ್ತೋ ಗೊತ್ತಿಲ್ಲ.


Click it and Unblock the Notifications











