ರಜನಿ 73ನೇ ಬರ್ತ್‌ಡೇ 170ನೇ ಸಿನಿಮಾ ಟೈಟಲ್‌ ಜೊತೆ ಟೀಸರ್: ಶುರುವಾಗಿದೆ ಫ್ಯಾನ್ಸ್ ಸೆಲೆಬ್ರೆಷನ್

ಒಬ್ಬ ಮಾಮೂಲಿ ಬಸ್ಟ್ ಕಂಡಕ್ಟರ್ ಸೂಪರ್‌ಸ್ಟಾರ್ ಆದ ಕಥೆಯನ್ನು ಅವರ ಪ್ರತಿ ಹುಟ್ಟುಹಬ್ಬಕ್ಕೂ ಕೇಳುತ್ತಲೇ ಇರುತ್ತೇವೆ. ಅದೀಗ ಹೊಸತು ಅಂತ ಅನಿಸದೇ ಹೋಗಬಹುದು. ಆದರೆ, ಒಬ್ಬ ಬಸ್ ಕಂಡಕ್ಟರ್ ಸೂಪರ್‌ಸ್ಟಾರ್ ಆಗೋಕೆ ಅದೆಷ್ಟು ಕಷ್ಟಪಟ್ಟಿರಬಹುದು ಅನ್ನೋದ ನೆನೆದರೆ ರಜನಿ ಸ್ಪೂರ್ತಿಯಾಗುತ್ತಾರೆ.

ಒಂದು ಕಾಲದಲ್ಲಿ ಸಿನಿಮಾ ಹೀರೊ ಆಗೋದು ಸುಂದರವಾಗಿರಬೇಕು. ಬೆಳ್ಳಗಿರಬೇಕು, ಹೈಟ್ ಇರಬೇಕು, ಕಟುಮಸ್ತಾದ ದೇಹವಿರಬೇಕು ಅನ್ನೋ ಮಾನದಂಡವಿತ್ತು. ಅದೆಲ್ಲವನ್ನೂ ಗಾಳಿ ತೂರಿ ಸೂಪರ್‌ಸ್ಟಾರ್ ಆಗಿದ್ದು ಇದೇ ರಜನಿಕಾಂತ್. ತನ್ನ 73ನೇ ವಯಸ್ಸಿನಲ್ಲೂ ಸೂಪರ್‌ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇವರ ಸಿನಿಮಾಗಳು ನೂರಾರು ಕೋಟಿ ಈಗಲೂ ಗಳಿಸುತ್ತವೆ.

Rajinikanths 170th movie title and birthday teaser are releasing on December 12th

73 ವರ್ಷ ಈ ಸೂಪರ್‌ಸ್ಟಾರ್ ಇಂದು (ಡಿಸೆಂಬರ್ 12) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 73ನೇ ವರ್ಷಕ್ಕೆ ಕಾಲಿಟ್ಟಿರೋ ರಜನಿಕಾಂತ್‌ಗೆ ವಿಶ್ವದ ಮೂಲೆ ಮೂಲೆಯಲ್ಲಿರೋ ಅಭಿಮಾನಿಗಳಿಂದ ಹುಟ್ಟುಹಬ್ಬಕ್ಕೆ ಶುಭಾಶಯಗಳು ಬರುತ್ತಿವೆ.

ಇದೇ ಖುಷಿಯ ಸಂದರ್ಭದಲ್ಲಿ ಸೂಪರ್‌ಸ್ಟಾರ್ ರಜನಿ ನಟಿಸುತ್ತಿರುವ 170ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ. ಇಷ್ಟೇ ಅಲ್ಲ ಇದರೊಂದಿಗೆ ಬರ್ತ್‌ಡೇ ಟೀಸರ್ ಕೂಡ ಬಿಡುಗಡೆಯಾಗುತ್ತಿದೆ. ರಜನಿಕಾಂತ್ 170ನೇ ಸಿನಿಮಾವನ್ನು ತಮಿಳಿನ ಜನಪ್ರಿಯ ಸಂಸ್ಥೆ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಈ ಖುಷಿ ವಿಷಯವನ್ನು ಅಭಿಮಾನಿಗಳಿಗೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ರಿವೀಲ್ ಮಾಡಿದೆ.

ಲೈಕಾ ಟೈಟಲ್ ಅನೌನ್ಸ್ ಮಾಡುವುದಾಗಿ ಹೇಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ರಜನಿ ಅಭಿಮಾನಿಗಳು ಒಂದೆರಡು ಟೈಟಲ್ ಇಟ್ಟುಕೊಂಡು ಅವನ್ನು ವೈರಲ್ ಮಾಡುತ್ತಿದ್ದಾರೆ. 'ಆಂಡವನ್' ಹಾಗೂ 'ಆದಿತ್ಯನ್' ಅನ್ನೋ ಎರಡು ಟೈಟಲ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಎರಡು ಟೈಟಲ್‌ಗಳ ಬಗ್ಗೆ ಚರ್ಚೆಯಾಗುತ್ತಿರೋದೇನೊ ನಿಜ. ಆದರೆ, ನಿರ್ದೇಶಕ ಜ್ಞಾನವೇಲು ಶೀರ್ಷಿಕೆ ಇಡುವ ವೈಖರಿಯೇ ಬೇರೆ. ಹೀಗಾಗಿ ಟೈಟಲ್ ನಿಜಕ್ಕೂ ಕುತೂಹಲ ಕೆರಳಿಸಿದೆ. ಇನ್ನು ಜೈಲರ್ ಬಳಿಕ ಸೂಪರ್‌ಸ್ಟಾರ್ ಗೆಟಪ್ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

'ಜೈಲರ್' ಸಿನಿಮಾ ಬಳಿಕ ರಜನಿಕಾಂತ್ ಕೈಯಲ್ಲಿ ಎರಡು ಸಿನಿಮಾಗಳಿವೆ. ಪುತ್ರಿ ಐಶ್ವರ್ಯಾ ನಿರ್ದೇಶಿಸುತ್ತಿರುವ 'ಲಾಲ್ ಸಲಾಂ' ಸಿನಿಮಾ ಪೊಂಗಲ್‌ಗೆ ಬಿಡುಗಡೆಯಾಗುತ್ತೆ ಅನ್ನೋ ಸುದ್ದಿಯಿದೆ. ಇದರಲ್ಲಿ ರಜನಿಕಾಂತ್ ಗೆಟಪ್ ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಹಾಗೇ ರಜನಿಯ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಗೆಟಪ್ ನೋಡುವುದಕ್ಕೆ ಕಾದು ಕೂತಿದ್ದಾರೆ.

More from Filmibeat

English summary
Rajinikanth 73rd Birthday: Thalaivar's 170th movie title is said to be Andavan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X