ಶೂಟಿಂಗ್ ಅಂತ ಸೆಟ್ಟು ಹಾಕಿದ್ರು; ತೆಲಂಗಾಣ ಪುರೋಹಿತರಿಗೆ ಮೋಸ ಮಾಡಿ ಅದಿತಿ-ಸಿದ್ಧಾರ್ಥ್ ಮದುವೆ?

ದಕ್ಷಿಣ ಭಾರತದ ಇಬ್ಬರು ತಾರೆಯರು ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರೇ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ. ಕೆಲವು ವರ್ಷಗಳಿಂದ ಅದಿತಿ ರಾವ್ ಹಾಗೂ ಸಿದ್ಧಾರ್ಥ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಕೆಲವು ದಿನಗಳಿಂದ ಇಬ್ಬರ ವಿವಾಹದ ಬಗ್ಗೆ ಚರ್ಚೆಯಾಗುತ್ತಿದ್ದರೂ ಬಾಯಿ ಬಿಟ್ಟಿರಲಿಲ್ಲ. ಆದರೆ, ಮಾರ್ಚ್ 27 ರಂದು ಸೈಲೆಂಟ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಇಬ್ಬರೂ ಸರಳವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಫೋಟೊಗಳು ಹೊರಬೀಳುತ್ತಿದ್ದಂತೆ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ಕನ್ಫರ್ಮ್ ಆಗಿತ್ತು. ಈ ಜೋಡಿಯ ಮದುವೆ ವಿಷಯ ಹೊರ ಬೀಳುತ್ತಿದ್ದಂತೆ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.

Ranganayaka temple staff accused of cheating local priest during Siddharth Aditi Rao s wedding

ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರೀರಂಗಪುರಂನ ಶ್ರೀರಂಗನಾಯಕ ದೇವಸ್ಥಾನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೀಗ ಅಲ್ಲಿನ ಸ್ಥಳೀಯ ಪುರೋಹಿತರು ತಮಗೆ ಸುಳ್ಳು ಹೇಳಿ ಈ ಜೋಡಿ ಮದುವೆ ಆಗಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಜೋಡಿ ಅಂತಹದ್ದೇನು ಮೋಸ ಮಾಡಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

ಅಂದ ಹಾಗೆ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಇಬ್ಬರಿಗೂ ಇದು ಎರಡನೇ ಮದುವೆ. ತಮ್ಮ ಸಂಗಾತಿಗಳಿಗೆ ವಿಚ್ಛೇದನ ನೀಡಿದ ಹಲವು ವರ್ಷಗಳ ಬಳಿಕ ಇವರಿಬ್ಬರಿಗೆ ಪ್ರೀತಿ ಹುಟ್ಟಿತ್ತು. ಒಂದಿಷ್ಟು ದಿನ ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲೂ ಇದ್ದರು. ಆ ಬಳಿಕವಷ್ಟೇ ಮದುವೆ ಆಗುವ ತೀರ್ಮಾನಕ್ಕೆ ಬಂದಿದ್ದರು. ಆದರೆ, ಬಹಳ ಎಚ್ಚರಿಕೆಯಿಂದ ಮದುವೆಯಾಗಲು ಹೋಗಿ ಸ್ಥಳೀಯ ಪುರೋಹಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರೀರಂಗಪುರಂನ ಶ್ರೀರಂಗನಾಯಕ ದೇವಸ್ಥಾನದ ಆಡಳಿತ ಮಂಡಳಿಗೆ ಶೂಟಿಂಗ್ ಮಾಡುತ್ತಿದ್ದೇವೆ ಎಂದು ಸೆಟ್ ಹಾಕಿದ್ದರು. ಇದು ಸಿನಿಮಾ ಶೂಟಿಂಗ್ ಆಗಿದ್ದರಿಂದ ಮದುವೆ ಸೆಟ್ ಹಾಕುತ್ತೇವೆ ಎಂದಿದ್ದರು. ಹಾಗೇ ಅಲ್ಲಿನ ಸ್ಥಳೀಯ ಅರ್ಚಕರಿಗೆ ಶೂಟಿಂಗ್ ಏರಿಯಾದ ಸುತ್ತಮುತ್ತ ಬಾರದಂತೆ ಸೂಚನೆಯನ್ನು ನೀಡಿದ್ದರು ಎಂದು ತಿಳಿದು ಬಂದಿದೆ.

Ranganayaka temple staff accused of cheating local priest during Siddharth Aditi Rao s wedding

ಶೂಟಿಂಗ್ ಅಂತ ಹೇಳಿದ್ದರಿಂದ ಸ್ಥಳೀಯ ಪುರೋಹಿತರು ದೇವಸ್ಥಾನದಿಂದ ದೂರ ಉಳಿದಿದ್ದರು. ಆ ವೇಳೆ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ತಮಿಳುನಾಡಿನ ಬ್ರಾಹ್ಮಣ ಪುರೋಹಿತರನ್ನು ಕರೆಸಿದ್ದರು. ಅವರ ಸಮ್ಮುಖದಲ್ಲಿ ಮದುವೆ ಆಗಿದ್ದು, ಶ್ರೀರಂಗನಾಯಕ ದೇವಸ್ಥಾನದ ಆಡಳಿತ ಮಂಡಳಿಗೆ ಈ ವಿಷಯವನ್ನು ತಿಳಿಸಿರಲಿಲ್ಲ ಎಂಬ ಆರೋಪ ಇವರ ಮೇಲಿದೆ. ದೇವಸ್ಥಾನದ ಆಡಳಿತ ಕೂಡ ಈ ಜೋಡಿಯ ಮೇಲೆ ಗಂಭೀರ ಆರೋಪ ಮಾಡಿದೆ.

ಈ ಕಾರಣಕ್ಕೆ ಸದ್ಯ ಈ ಜೋಡಿ ಸ್ಥಳೀಯ ಪುರೋಹಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಸಿದ್ಧಾರ್ಥ್ ಹಾಗೂ ಅದಿತಿ ಇಬ್ಬರು 'ಮಹಾ ಸಮುದ್ರಂ' ಶೂಟಿಂಗ್ ವೇಳೆ ಪರಿಚಯ ಆಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಅಲ್ಲಿಂದ ಇಬ್ಬರೂ ಒಟ್ಟಿಗೆ ಓಡಾಡಿಕೊಂಡಿದ್ದರು. ಈ ಜೋಡಿ ಲಿವಿಂಗ್ ಟುಗೆದರ್‌ನಲ್ಲಿ ಇದ್ದರು ಎಂದು ಅನ್ನೋ ಸುದ್ದಿ ಕೂಡ ಓಡಾಡಿತ್ತು. ಸದ್ಯಕ್ಕೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಹೊಸ ಬದುಕು ಆರಂಭಿಸಿದೆ.

More from Filmibeat

English summary
Siddharth Aditi Rao cheated Ranganayaka temple Priests while marrying here is the details:
Read more about: siddharth actress filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X