"ಹುಟ್ಟಿದ ಹೆಸರಿಗೆ ಅವಮಾನ ಆಗಿತ್ತು.. ನಿತ್ಯಾನಂದನಿಂದ ಬದುಕಿಗೆ ಯೂಟರ್ನ್ ಸಿಕ್ತು": ನಟಿ ರಂಜಿತಾ

ನಿತ್ಯಾನಂದ ಹಾಗೂ ರಂಜಿತಾ ಪ್ರಕರಣ ಇನ್ನೂ ಜನಮಾನಸದಲ್ಲಿ ಹಾಗೇ ಉಳಿದಿದೆ. ಇಬ್ಬರ ವಿಡಿಯೋ ಸಂಚಲ ಸೃಷ್ಟಿಸುತ್ತಿದ್ದಂತೆ ರಂಜಿತಾ ಭಾರತದಾದ್ಯಂತ ಜನಪ್ರಿಯರಾಗಿದ್ದರು. ಸಿನಿಮಾಗಳಲ್ಲೂ ಸಿಗದ ಪಾಪುಲಾರಿಟಿ ಸಿಕ್ಕಿತ್ತು.

ನಿತ್ಯಾನಂದ ಕೈಲಾಸಕ್ಕೆ ಓಡಿ ಹೋದಲ್ಲಿಂದ ಈ ಪ್ರಕರಣಕ್ಕೆ ಬ್ರೇಕ್ ಸಿಕ್ಕಿತ್ತು. ಆದರೆ, ಇತ್ತೀಚೆಗೆ ರಂಜಿತಾ ತಂದೆ ಅಶೋಕ್ ಕುಮಾರ್ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನಿತ್ಯಾನಂದನ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಆ ಬಳಿಕ ಮತ್ತೆ ನಿತ್ಯಾನಂದ ಹಾಗೂ ರಂಜಿತಾ ಬಗ್ಗೆ ಚರ್ಚೆಯಾಗುತ್ತಿದೆ.

Ranjitha revealed name-shaming in childhood and Nithyanandas speech helped her

ತನ್ನ ಇಬ್ಬರೂ ಹೆಣ್ಣು ಮಕ್ಕಳ ತಲೆ ಕೆಡಿಸಿದ್ದಾ ನಿತ್ಯಾನಂದ ಎಂದು ರಂಜಿತಾ ತಂದೆ ಆರೋಪಿಸಿದ್ದರು. ಆ ಬಳಿಕ ರಂಜಿತಾ ತನ್ನ ಬದುಕಿನ ಬಗ್ಗೆ, ತನಗಾದ ಅವಮಾನದ ಬಗ್ಗೆ, ನಿತ್ಯಾನಂದನ ಭಕ್ತೆಯಾದ ಬಗ್ಗೆ ಬ್ಯಾಕ್ ಟು ಬ್ಯಾಕ್ ವಿಡಿಯೋ ಮಾಡುತ್ತಿದ್ದಾರೆ. ಕೆಲವೇ ಗಂಟೆಗಳ ಹಿಂದಷ್ಟೇ ರಿಲೀಸ್ ಮಾಡಿರೋ ವಿಡಿಯೋದಲ್ಲಿ ಬಾಲ್ಯದಲ್ಲಿ ತನಗಾದ ಅವಮಾನದ ಬಗ್ಗೆ ರಂಜಿತಾ ಮಾತಾಡಿದ್ದಾರೆ.

"22 ವರ್ಷದ ಸಿನಿಜರ್ನಿಯಲ್ಲಿ ಸಾಕಷ್ಟು ಅವಮಾನ"

ಅಶೋಕ್ ಕುಮಾರ್‌ಗೆ ಕೂಡ ಸಿನಿಮಾ ನಂಟಿತ್ತು. ಹೀಗಾಗಿ ರಂಜಿತಾಗೆ ಸಿನಿಮಾಗೆ ಬರೋದಕ್ಕೆ ಅಂತಹ ಕಷ್ಟವೇನು ಆಗಿರಲಿಲ್ಲ. ಅತೀ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ರಂಜಿತಾ ಸುಮಾರು ಎರಡು ದಶಕಗಳ ಕಾಲ ಕೆಲಸ ಮಾಡಿದ್ದಾರೆ. ಆ ಬಳಿಕ ನಿತ್ಯಾನಂದನ ಭಕ್ತೆಯಾದರು. ಈ ವೇಳೆ ತಮಗಾದ ಮಾನಸಿಕ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

"ನನ್ನ 22 ವರ್ಷದ ಆಕ್ಟಿಂಗ್‌ನಲ್ಲಿ ಹಲವಾರು ಘಟನೆಗಳು ಇವೆ. ಹೆಸರಿಗೆ ಅವಮಾನ, ಸ್ತ್ರೀ ಅನ್ನೋ ಕಾರಣಕ್ಕೆ ಅವಮಾನ,ವಿಷಮಯ ಅನುಭವ ಆಗಿದೆ. ಇದೆಲ್ಲದರ ಬಗ್ಗೆ ಜನರು ಕೇಳಲು ಬಯಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಫೇಕ್ ವಿಡಿಯೋ ಬಳಿಕ ನಿಮ್ಮ ಮನಸ್ಥಿತಿ ಹೇಗಿತ್ತು? ಎಂದು ಕೇಳುತ್ತಾರೆ. ಇದರಿಂದ ನಾನು ಖಿನ್ನತೆ ಒಳಗಾಗಿಲ್ಲ. ಡ್ರಗ್ಸ್‌ಗೆ ಅಡಿಕ್ಟ್ ಆಗಿಲ್ಲ." ಎಂದು ರಂಜಿತಾ ಹೇಳಿದ್ದಾರೆ.

Ranjitha revealed name-shaming in childhood and Nithyanandas speech helped her

"ಶಾಲೆಯಲ್ಲೇ ನನ್ನ ಹೆಸರಿಗೆ ಅವಮಾನ"

ರಂಜಿತಾ ಅಸಲಿ ಹೆಸರು ಶ್ರೀವಲ್ಲಿ. ಈಕೆಯ ತಂದೆ-ತಾಯಿ ದೇವರ ಹೆಸರನ್ನೇ ಮಗಳಿಗೆ ಇಟ್ಟಿದ್ದರು. ಶಾಲೆಯಲ್ಲಿ ಮಕ್ಕಳು ಈಕೆಯ ಹೆಸರನ್ನು ಇಟ್ಟುಕೊಂಡು ಗೇಲಿ ಮಾಡುತ್ತಿದ್ದರು. ಹೀಗಾಗಿ ತನ್ನ ಹೆಸರನ್ನು ಯಾರ ಬಳಿಯಾದರೂ ಹೇಳುವುದಕ್ಕೆ ಅಂಜುತ್ತಿದ್ದದ್ದಾಗಿ ಹೇಳಿಕೊಂಡಿದ್ದಾರೆ.

"ಬಾಲ್ಯ ನನ್ನ ಹೆಸರಿಗೆ ಅವಮಾನ ಮಾಡುವುದರಿಂದ ಆರಂಭ ಆಗಿತ್ತು. ನನ್ನ ಹುಟ್ಟಿದ್ದ ಹೆಸರು ಶ್ರೀವಲ್ಲಿ. ನನ್ನ ಪೋಷಕರು ಶ್ರೀವಲ್ಲಿ ಅನ್ನೋ ದೇವರ ಹೆಸರನ್ನೇ ಇಟ್ಟಿದ್ದರು. ನಾನು ಆಂಗ್ಲೋ ಇಂಡಿಯನ್ ಸ್ಕೂಲ್‌ನಲ್ಲಿ ಓದುತ್ತಿದ್ದೆ. ಚೆನ್ನೈನಲ್ಲಿ ಇದು ಬೆಸ್ಟ್ ಸ್ಕೂಲ್. ನನ್ನ ಜೊತೆ ಶಾಲೆಯಲ್ಲಿ ಓದುತ್ತಿದ್ದವರು ನನ್ನ ಹೆಸರು ತಮಾಷೆಯಾಗಿ ತೆಗೆದುಕೊಂಡಿದ್ದರು. ಯಾವಾಗಲೂ ಬಲ್ಲಿ ವಲ್ಲಿ ಅಂತ ಹಂಗಿಸುತ್ತಿದ್ದರು. ಅವರಿಗೆ ನನ್ನ ಹೆಸರು ರೈಮಿಂಗ್ ವರ್ಡ್‌ ತರ ಆಗಿತ್ತು. ಆರಂಭದಲ್ಲಿ ಏನು ಅನಿಸದೇ ಇದ್ದರೂ, ಬಳಿಕ ನನ್ನ ಹೆಸರನ್ನು ಹೇಳುವುದಕ್ಕೆ ನನಗೆ ನಾಚಿಕೆಯಾಗುತ್ತಿತ್ತು." ಎಂದಿದ್ದಾರೆ.

2002ರಿಂದ ನಿತ್ಯಾನಂದನನಿಂದ ಪ್ರಭಾವ

ರಂಜಿತಾಗೆ ಬಾಲ್ಯದಿಂದ ಒಂದಲ್ಲಾ ಒಂದು ರೀತಿ ಅವಮಾನ ಆಗುತ್ತಿತ್ತು. ಸಿನಿರಂಗದಲ್ಲೂ ಅವಮಾನ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಇದ್ಯಾವುದರಿಂದಲೂ ಖಿನ್ನತೆಗೆ ಒಳಗಾಗಿಲ್ಲ ಅಂತಾನೂ ಹೇಳಿದ್ದಾರೆ. ಈ ಸನ್ನಿವೇಶದಲ್ಲಿ ನಿತ್ಯಾನಂದನ ಪ್ರವಚನ ಬದುಕನ್ನೇ ಬದಲಿಸಿತ್ತು ಎಂದಿದ್ದಾರೆ.

"2002ರಿಂದ ನಾನು ಸ್ವಾಮೀಜಿಯ ಪ್ರಚನಗಳನ್ನು ಕೇಳುತ್ತಿದ್ದೆ. ಅವರು ಬದುಕಿನ ಬಗ್ಗೆ ಹೇಳಿದ ಮಾತು ನಾನು ಯೂಟರ್ನ್ ಬರುವಂತೆ ಮಾಡಿತ್ತು. ನಾನ್ಯಾಕೆ ಇದನ್ನು ಮಾಡಬಾರದು? ಈ ಪ್ರವಚನ ನನ್ನನ್ನು ಖುಷಿಯಾಗಿ ಇಡುತ್ತೆ ಅಂದರೆ ಯಾಕೆ ಮಾಡಬಾರದು ಅಂತ ಅನಿಸಿತ್ತು. ನಾನು ಡ್ರಗ್ಸ್, ತೆಗೆದುಕೊಳ್ಳಲಿಲ್ಲ. ಸ್ವಾಮೀಜಿಯ ಪುಸ್ತಕಗಳನ್ನು ಓದುತ್ತಿದ್ದೆ" ರಂಜಿತಾ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

More from Filmibeat

English summary
Ranjitha revealed name-shaming in childhood and Nithyananda's speech helped her, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X