RCB-Jailer Controversy: ಆರ್‌ಸಿಬಿ ಜರ್ಸಿ ದೃಶ್ಯ ಬದಲಿಸಲು ಒಪ್ಪಿದ 'ಜೈಲರ್' ನಿರ್ಮಾಪಕ.. ಯಾಕೀ ವಿವಾದ?
ಸೂಪರ್‌ಸ್ಟಾರ್ ರಜನಿಕಾಂತ್ ಗ್ರ್ಯಾಂಡ್ ಕಮ್‌ಬ್ಯಾಕ್ ಮಾಡಿದ ಸಿನಿಮಾ 'ಜೈಲರ್'. ಈ ಸಿನಿಮಾ ಇನ್ನೂ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸೋಲಿನಿಂದ ಕಂಗೆಟ್ಟಿದ್ದ ರಜನಿಗೆ ಮತ್ತೆ ಸೂಪರ್ ಸಕ್ಸಸ್ ಕೊಟ್ಟ ಸಿನಿಮಾ 'ಜೈಲರ್' ವಿರುದ್ಧ ಆರ್‌ಸಿಬಿ ಕೋರ್ಟ್ ಮೆಟ್ಟಿಲೇರಿತ್ತು.
'ಜೈಲರ್' ರಿಲೀಸ್‌ಗೂ ಮುನ್ನ ಟೈಟಲ್ ವಿಚಾರಕ್ಕೆ ವಿವಾದಕ್ಕೆ ಸಿಲುಕಿತ್ತು. ಆದರೆ, ಸಿನಿಮಾ ಬಿಡುಗಡೆ ಬಳಿಕ ದೃಶ್ಯವೊಂದಕ್ಕೆ ವಿವಾದಕ್ಕೆ ಸಿಕ್ಕಿಕ್ಕೊಂಡಿತ್ತು. 'ಜೈಲರ್' ಸಿನಿಮಾದಲ್ಲಿ ಅನುಮತಿ ಪಡೆಯದೇ ಆರ್‌ಸಿಬಿ ಜರ್ನಿಯನ್ನು ಸಿನಿಮಾದಲ್ಲಿ ಕೆಟ್ಟದಾಗಿ ಬಿಂಬಿಸಿದ್ದಕ್ಕೆ ದೆಹಲಿ ಕೈ ಕೋರ್ಟ್‌ನಲ್ಲಿ ದೂರು ದಾಖಲಾಗಿತ್ತು.

ಅಷ್ಟಕ್ಕೂ ಆರ್‌ಸಿಬಿ ಹಾಗೂ 'ಜೈಲರ್' ತಂಡದ ನಡುವಿನ ವಿವಾದವೇನು? ಆರ್‌ಸಿಬಿ ಕೇಸ್ ದಾಖಲಿಸುವಂತಹ ದೃಶ್ಯ 'ಜೈಲರ್' ಸಿನಿಮಾದಲ್ಲಿ ಏನಿದೆ? ನಿರ್ಮಾಪಕ ದೃಶ್ಯವನ್ನೇ ಬದಲಾವಣೆ ಮಾಡುವುದಕ್ಕೆ ಒಪ್ಪಿದ್ದೇಕೆ? ಇದೆಲ್ಲವನ್ನು ತಿಳಿಯುವುದಕ್ಕೆ ಮುಂದೆ ಓದಿ.
ಏನಿದು ಆರ್‌ಸಿಬಿ ಜೆರ್ಸಿ ವಿವಾದ?
'ಜೈಲರ್' ಸಿನಿಮಾದಲ್ಲಿ ಕಾಂಟ್ರಕ್ಟ್ ಕಿಲ್ಲರ್ ಪಾತ್ರದಲ್ಲಿ ನಟಿಸಿರುವ ವ್ಯಕ್ತಿ ಆರ್‌ಸಿಬಿ ಜರ್ಸಿಯನ್ನು ತೊಟ್ಟಿದ್ದಾನೆ. ಇದು ಆರ್‌ಸಿಬಿ ಇಮೇಜ್‌ಗೆ ಪೆಟ್ಟು ಬಿದ್ದಿದೆ ಎಂದು ಜೈಲರ್ ನಿರ್ಮಾಪಕರ ವಿರುದ್ಧ ರಾಯಲ್ ಚಾಲೆಂಜರ್ಸ್ ಸ್ಟೋರ್ಟ್ಸ್ ಪ್ರೈವೆಟ್ ಲಿಮಿಟೆಡ್ ದೆಹಲಿ ಕೋರ್ಟ್ ಮೆಟ್ಟಿಲೇರಿತ್ತು. 'ಜೈಲರ್' ಸಿನಿಮಾವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ವಿವಾದವನ್ನು ಎದುರಿಸುತ್ತಿದೆ.

ಆರ್‌ಸಿಬಿ ಬ್ರ್ಯಾಂಡ್‌ಗೆ ಕೆಟ್ಟ ಹೆಸರು
ವಿವಾದದ ಬಳಿಕ ಆರ್‌ಸಿಬಿ ಜರ್ನಿ ತೊಟ್ಟ ವ್ಯಕ್ತಿಯ ದೃಶ್ಯವನ್ನೇ ತೆಗೆದು ಹಾಕುವುದಾಗಿ 'ಜೈಲರ್' ನಿರ್ಮಾಪಕರು ದೆಹಲಿ ಕೋರ್ಟ್‌ಗೆ ತಿಳಿಸಿದ್ದಾರೆಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ. ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್ ಈ ಪ್ರಕರಣ ತೆಗೆದುಕೊಂಡಿದ್ದರು. ಈ ವೇಳೆ ಆರ್‌ಸಿಬಿ ಜರ್ಸಿಯನ್ನು ತೊಟ್ಟ ವ್ಯಕ್ತಿ ಮಹಿಳೆ ವಿರುದ್ಧದ ಹೇಳಿಕೆ ನೀಡುತ್ತಾನೆ. ಇದರಿಂದ ಆರ್‌ಸಿಬಿ ಬ್ರ್ಯಾಂಡ್‌ಗೆ ಕೆಟ್ಟ ಹೆಸರು ಬಂದಿದೆ" ನ್ಯಾಯಾಲಯದ ಮೊರೆ ಹೋಗಿದ್ದರು.
ದೃಶ್ಯವನ್ನು ತೆಗೆದು ಹಾಕಲು ನಿರ್ಧಾರ
ರಜನಿಕಾಂತ್ ಅಭಿನಯದ 'ಜೈಲರ್ ಸಿನಿಮಾ ಟಿವಿ ಹಾಗೂ ಓಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಇದರಲ್ಲಿ ಆರ್‌ಸಿಬಿ ಜರ್ಸಿ ತೊಟ್ಟ ದೃಶ್ಯವನ್ನು ಬದಲಾಯಿಸಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ. ಅಲ್ಲದೆ ಸೆಪ್ಟಂಬರ್ 1 ರಿಂದ ಚಿತ್ರಮಂದಿರದಲ್ಲೂ ಈ ದೃಶ್ಯವನ್ನು ತೆಗೆದು ಪ್ರದರ್ಶನ ಮಾಡಲಾಗುವುದು ಎಂದು ನಿರ್ಮಾಣ ಸಂಸ್ಥೆ ಹೇಳಿದೆ.
600 ಕೋಟಿ ರೂ. ಸನಿಹದಲ್ಲಿ 'ಜೈಲರ್'
ರಜನಿಕಾಂತ್ ಸಿನಿಮಾ 'ಜೈಲರ್' ಸುಮಾರು 600 ಕೋಟಿ ರೂ. ಸನಿಹದಲ್ಲಿದೆ. 18ನೇ ದಿನ ಈ ಸಿನಿಮಾ 7.50 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಸಿನಿಮಾ ಥಿಯೇಟರ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ 'ಜೈಲರ್' ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ ಎಂದು ವರದಿಯಾಗಿದೆ. ಅಷ್ಟರಲ್ಲೇ ವಿವಾದಕ್ಕೆ ಸಿಲುಕಿದ್ದು, ಆರ್‌ಸಿಬಿ ಜರ್ಸಿ ತೊಟ್ಟ ದೃಶ್ಯವನ್ನು ತೆಗೆದು ಹಾಕುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ.


Click it and Unblock the Notifications











