Leo Trailer: 'ಲಿಯೋ' ಟ್ರೈಲರ್ ಸ್ಕ್ರೀನಿಂಗ್ ವೇಳೆ ಫ್ಯಾನ್ಸ್ ಪುಂಡಾಟ.. ಥಿಯೇಟರ್‌ ಸೀಟ್‌ಗಳು ಪೀಸ್ ಪೀಸ್!

ಇಷ್ಟು ದಿನ ದಳಪತಿ ವಿಜಯ್ ಅಭಿಮಾನಿಗಳು 'ಲಿಯೋ' ಸಿನಿಮಾದ ಟ್ರೈಲರ್ ನೋಡುವುದಕ್ಕೆ ಕಾದು ಕೂತಿದ್ದರು. ಚೆನ್ನೈನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ಟ್ರೈಲರ್ ರಿಲೀಸ್ ಮಾಡಬೇಕು ಎಂಬ ಆಸೆ ಚಿತ್ರತಂಡಕ್ಕಿತ್ತು. ಆದರೆ, ಗ್ರ್ಯಾಂಡ್ ಇವೆಂಟ್‌ಗೆ ಅನುಮತಿ ಸಿಗದ ಕಾರಣ ಈವೆಂಟ್ ಅನ್ನು ಕ್ಯಾನ್ಸಲ್ ಮಾಡಲಾಗಿತ್ತು.

ಈ ನಿರ್ಧಾರ ದಳಪತಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. 'ಲಿಯೋ' ಸಿನಿಮಾದ ನಿರ್ಮಾಪಕರು ಈ ನಿರ್ಧಾರಕ್ಕೆ ಕ್ಷಮೆಯನ್ನು ಯಾಚಿಸಿದ್ದರು. ಕಾರ್ಯಕ್ರಮದ ಪಾಸ್‌ಗಳಿಗೆ ಅಗತ್ಯಕ್ಕಿಂತ ಹೆಚ್ಚು ಬೇಡಿಕೆ ಇದ್ದಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾಗಿ ಹೇಳಿದ್ದರು.

thalapathy-vijay-leo-trailer

ಆದರೆ, ದಳಪತಿ ವಿಜಯ್ ಅಭಿಮಾನಿಗಳಿಗಾಗಿ 'ಲಿಯೋ' ಟ್ರೈಲರ್ ಅನ್ನು ಥಿಯೇಟರ್‌ಗಳಲ್ಲಿ ಸ್ಕ್ರೀನಿಂಗ್ ಮಾಡಲು ಚಿತ್ರತಂಡ ಮುಂದಾಗಿತ್ತು. ಅದರಂತೆ ಇಂದು (ಅಕ್ಟೋಬರ್ 5)ರಂದು 'ಲಿಯೋ' ಟ್ರೈಲರ್ ಸ್ಕ್ರೀನಿಂಗ್ ರಿಲೀಸ್ ಆಗಿದೆ. ಈ ವೇಳೆ ರೋಹಿಣಿ ಅನ್ನೋ ಚಿತ್ರಮಂದಿರಲ್ಲಿ ಟ್ರೈಲರ್ ವೀಕ್ಷಿಸಲು ವಿಜಯ್ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.

'ಲಿಯೋ' ಟ್ರೈಲರ್ ನೋಡುವ ಭರಾಟೆಯಲ್ಲಿ ದಳಪತಿ ವಿಜಯ್ ಕೆಲವು ಅಭಿಮಾನಿಗಳು ಪುಂಡಾಟ ಮೆರೆದಿದ್ದಾರೆ. ವಿಜಯ್ ಅಭಿಮಾನಿಗಳು ರೋಹಿಣಿ ಚಿತ್ರಮಂದಿರದಲ್ಲಿ ಮನಸ್ಸಿಗೆ ಬಂದಂತೆ ಕುಣಿದಾಡಿದ್ದಾರೆ. ಈ ವೇಳೆ ಚಿತ್ರಮಂದಿರದ ಸೀಟುಗಳು ಮುರಿದಿದ್ದು, ಹಾನಿಯಾಗಿವೆ. ಚಿತ್ರಮಂದಿರದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

'ಲಿಯೋ' ಸಿನಿಮಾ ಟ್ರೈಲರ್ ರಿಲೀಸ್ ದಳಪತಿ ವಿಜಯ್ ಆಗುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರಂತೂ " ಎಂಥಾ ಟರ್ನಿಂಗ್ ಪಾಯಿಂಟ್.. ಮೈನವಿರೇಳಿಸುತ್ತಿದೆ." ಎಂದು ಕಮೆಂಟ್ ಮಾಡಿದ್ದರು. ಮತ್ತೊಬ್ಬರು ಸೂಪರ್ ದಳಪತಿ + ಲೋಕೇಶ್ + ಅನಿರುದ್ಧ್ = ಗೂಸ್‌ಬಂಪ್ಸ್ ಓವರ್ ಲೋಡೇಡ್" ಎಂದು ಬರೆದುಕೊಂಡಿದ್ದಾರೆ. "ಎಂತಹ ಅದ್ಭುತ ಟ್ರೈಲರ್.. ಹಿಂದೆಂದೂ ನೋಡಿರಲಿಲ್ಲ" ಎಂದು ಕಮೆಂಟ್ ಮಾಡಿದ್ದಾರೆ.

ಲೋಕೇಶ್ ಕನಗರಾಜ್ ನಿರ್ದೇಶಿಸಿದ 'ಲಿಯೋ' ಸಿನಿಮಾದ ಈ ಆಕ್ಷನ್ ಥ್ರಿಲ್ಲರ್ ದಳಪತಿ ವಿಜಯ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ದಳಪತಿ ವಿಜಯ್, ತ್ರಿಶಾ, ಅರ್ಜುನ್ ಸರ್ಜಾ, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಹಾಗೇ ಗೌತಮ್ ಮೆನನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಸೇರಿದಂತೆ ಹಲವರು ಈ ಸಿನಿಮಾದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ದಳಪತಿ ವಿಜಯ್ ಹಾಗೂ ಲೋಕೇಶ್ ಕನಗರಾಜ್ ಎರಡನೇ ಬಾರಿಗೆ ಒಟ್ಟಿಗೆ ಸೇರಿ ಸಿನಿಮಾ ಮಾಡಿದ್ದಾರೆ. ಈ ಹಿಂದೆ 'ಮಾಸ್ಟರ್' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಹಾಗೇ 'ಲಿಯೋ' ಮೂಲಕ ತ್ರಿಶಾ ಹಾಗೂ ದಳಪತಿ ವಿಜಯ್ 15 ವರ್ಷಗಳ ಬಳಿಕ ಒಟ್ಟಿಗೆ ನಟಿಸಿರೋದು ಈ ಸಿನಿಮಾದ ವಿಶೇಷ. ಅನಿರುದ್ಧ್ ಈ ಸಿನಿಮಾಗೆ ಸಂಗೀತ ನೀಡಿರುವುದು ಈ ಸಿನಿಮಾದ ಹೈಲೈಟ್.

More from Filmibeat

English summary
Rohini theater seats were destroyed by fans during the Thalapathy Vijay Leo trailer screening
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X